ಕಾರ್ಗಿಲ್ ಯುದ್ಧದಲ್ಲಿ ಕೂದಲೆಳೆಯಲ್ಲಿ ಪಾರಾಗಿದ್ದ ಷರೀಫ್, ಮುಶರ್ರಫ್
Team Udayavani, Jul 24, 2017, 4:35 PM IST
ಹೊಸದಿಲ್ಲಿ : ಕಾರ್ಗಿಲ್ ಯುದ್ಧದ ಸಂದರ್ಭ – 1999ರ ಜೂನ್ 24ರಂದು ಸೋಮವಾರ ಬೆಳಗ್ಗೆ 8.45ರ ಹೊತ್ತು – ಗಡಿ ನಿಯಂತ್ರಣದಾಚೆಗಿನ ಪಾಕಿಸ್ಥಾನದ ಗುಲ್‌ತೇರಿ ಸೇನಾ ನೆಲೆಯ ಮೇಲೆ ಭಾರತೀಯ ವಾಯು ಪಡೆಯ ಫೈಟರ್ ಜೆಟ್ ಜಾಗ್ವಾರ್ ವಿಮಾನ ಬಾಂಬ್ ಹಾಕಲು ಸಜ್ಜಾಗಿತ್ತು. ರಾಡಾರ್‌ನಲ್ಲಿ ಗುರಿಯನ್ನೂ ನಿಗದಿಸಲಾಗಿತ್ತು.
ಆದರೆ ಕೊನೇ ಕ್ಷಣದಲ್ಲಿ, ಗುಲ್‌ತೇರಿ ಸೇನಾ ನೆಲೆಯಲ್ಲಿ ಪಾಕ್ ಅಧ್ಯಕ್ಷ ನವಾಜ್ ಷರೀಫ್ ಮತ್ತು ಸೇನಾ ಮುಖ್ಯಸ್ಥ ಪರ್ವೇಜ್ ಮುಶರ್ರಫ್ ಇದ್ದಾರೆನ್ನುವುದು ಗೊತ್ತಾಯಿತು. ಹಾಗಾಗಿ ವಿಮಾನದ ಪೈಲಟ್‌ಗೆ ಗುರಿಯನ್ನು ಕೊಂಚ ಬದಲಾಯಿಸಲು ಸೂಚಿಸಲಾಯಿತು.
ಗುರಿ ಬದಲಿಸಲ್ಪಟ್ಟ ಬಾಂಬ್ ಎಲ್‌ಓಸಿಯ ಈಚೆ, ಭಾರತೀಯ ಗಡಿ ಭಾಗದಲ್ಲಿ ಯಾವುದೇ ಹಾನಿ ಉಂಟು ಮಾಡದ ರೀತಿಯಲ್ಲಿ ಬಿತ್ತು. ಪರಿಣಾಮವಾಗಿ ನವಾಜ್ ಷರೀಫ್, ಪರ್ವೇಜ್ ಮುಶರ್ರಫ್ ಬದುಕುಳಿದರು. ಒಂದೊಮ್ಮೆ ಕೊನೇ ಕ್ಷಣದ ನಿರ್ಧಾರ ಬದಲಾಗದಿರುತ್ತಿದ್ದರೆ ಷರೀಫ್ ಮತ್ತು ಮುಶರ್ರಫ್ ಅಂದೇ ಇಹಲೋಕ ತ್ಯಜಿಸುತ್ತಿದ್ದರು.
ಕಾರ್ಗಿಲ್ ಯುದ್ಧದ ಅಂದಿನ ಈ ಘಟನಾವಳಿ ಕುರಿತ ಅಧಿಕೃತ ದಾಖಲೆ ಪತ್ರ “ದಿ ಇಂಡಿಯನ್ ಎಕ್ಸ್‌ಪ್ರೆಸ್’ಗೆ ಸಿಕ್ಕಿದ್ದು ಈ ನಿಗೂಢ ವಿಷಯವು ಈಗ ಬಹಿರಂಗವಾಗಿದೆ.
”1999 ಜೂನ್ 24ರಂದು ಬೆಳಗ್ಗೆ 8.45ರ ಹೊತ್ತಿಗೆ ಎಲ್‌ಓಸಿ ಆಚೆಗಿನ ಪ್ರದೇಶದಲ್ಲಿ ಬಾಂಬ್ ಎಸೆಯಲು ನಿಯುಕ್ತವಾಗಿದ್ದ ಜಾಗ್ವಾರ್ ಫೈಟರ್ ಜೆಟ್‌ನ ಕಾಕ್‌ಪಿಟ್ ಲೇಸರ್ ಡೆಸಿಗ್ನೇಶನ್ ಸಿಸ್ಟಮ್ ನಲ್ಲಿ 4388 ಸಂಖ್ಯೆಯ ಗುರಿಯನ್ನು ಸಜ್ಜುಗೊಳಿಸಲಾಗಿತ್ತು. ಅದು ಪಾಕಿಸ್ಥಾನದ ಗುಲ್‌ತೇರಿ ಸೇನಾ ನೆಲೆಯಾಗಿತ್ತು. ಅದನ್ನು ಉಡಾಯಿಸಲು ನಿರ್ಧರಿಸಲಾಗಿತ್ತು. ಆದರೆ ಕೊನೇ ಕ್ಷಣದಲ್ಲಿ ಆ ಸೇನಾ ನೆಲೆಯಲ್ಲಿ ನವಾಜ್ ಷರೀಫ್ ಮತ್ತು ಪರ್ವೇಜ್ ಮುಶರ್ರಫ್ ಇರುವುದು ಗೊತ್ತಾಯಿತು. ಒಡನೆಯೇ ಗುರಿಯನ್ನು ಬದಲಿಸಲು ನಿರ್ಧರಿಸಲಾಯಿತು. ಅಂತಿಮವಾಗಿ ಬಾಂಬನ್ನು ಭಾರತದ ಎಲ್‌ಓಸಿ ಭಾಗದಲ್ಲಿ, ಯಾವುದೇ ಹಾನಿ ಇಲ್ಲದೇ, ಬೀಳುವಂತೆ ಮಾಡಲಾಯಿತು” ಎಂದು ಪತ್ರಿಕಾ ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಪತ್ನಿಯನ್ನು ಕೊಂದು ದೇಹವನ್ನು ತುಂಡರಿಸಿ ಕುಕ್ಕರ್ ನಲ್ಲಿ ಬೇಯಿಸಿದ ನಿವೃತ್ತ ಯೋಧ
Mumbai: ಸೈಫ್ ಮೇಲೆ ಹಲ್ಲೆಗೆ ಬಳಸಿದ್ದ ಚಾಕುವಿನ ಮೂರನೇ ಭಾಗ ಬಾಂದ್ರಾ ಕೆರೆ ಬಳಿ ಪತ್ತೆ
Holy Dip: ಮಹಾಕುಂಭದಲ್ಲಿ ಸಿಎಂ ಯೋಗಿ ಸಂಪುಟ ಸದಸ್ಯರ ಪವಿತ್ರ ಸ್ನಾನ
Crew Module: ಗಗನಯಾನಕ್ಕೆ ಮಾನವರನ್ನು ಕರೆದೊಯ್ಯುವ ನೌಕೆ ಶ್ರೀಹರಿಕೋಟಾಕ್ಕೆ ರವಾನೆ
Mosque Survey: ಮಥುರಾ ಮಸೀದಿ ಸಮೀಕ್ಷೆ… ಸುಪ್ರೀಂ ತಡೆಯಾಜ್ಞೆ ಮುಂದುವರಿಕೆ