ಗಡಿ ಬಲ ಹೆಚ್ಚಳಕ್ಕೆ 600 ಟ್ಯಾಂಕ್‌ಗಳನ್ನು ಸಂಗ್ರಹಿಸುತ್ತಿರುವ ಪಾಕ್
Team Udayavani, Dec 30, 2018, 11:05 AM IST
ಹೊಸದಿಲ್ಲಿ: ಪಾಕಿಸ್ಥಾನ ಭಾರತದ ಗಡಿಯಲ್ಲಿ ತನ್ನ ಬಲವನ್ನು ಹೆಚ್ಚಿಸಿಕೊಳ್ಳಲು 600 ಟ್ಯಾಂಕ್‌ಗಳನ್ನು ಸಂಗ್ರಹಿಸಿಕೊಳ್ಳುತ್ತಿದೆ ಎಂದು ವರದಿಯಾಗಿದೆ.
ಪಾಕ್ ಸಂಗ್ರಹಿಸುತ್ತಿರುವ ಟ್ಯಾಂಕ್‌ಗಳು ಮೂರರಿಂದ ನಾಲ್ಕು ಕಿ.ಮೀ ದೂರದ ವರೆಗೆ ಗುರಿ ತಲುಪ ಬಲ್ಲ ಸಾಮರ್ಥ್ಯ ಉಳ್ಳವು ಎಂದು ಮೂಲಗಳು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.
ಯುದ್ಧ ಟ್ಯಾಂಕ್‌ಗಳು ಹೊರತು ಪಡಿಸಿ 250ರಷ್ಟು 150mm SP Mike-10 ಗನ್‌ಗಳನ್ನು ಇಟಲಿಯಿಂದ ತರಿಸಿಕೊಳ್ಳುತ್ತಿದ್ದು, ಈಗಾಗಲೇ 120ನ್ನು ತರಿಸಿಕೊಂಡಿದೆ ಎಂದು ತಿಳಿದು ಬಂದಿದೆ.
ಪಾಕಿಸ್ಥಾನ ರಷ್ಯಾದಿಂದ ಟಿ-90ಯುದ್ಧ ಟ್ಯಾಂಕ್‌ಗಳನ್ನು ಖರೀದಿಸಲು ಮುಂದಾಗಿದ್ದು, ಮಾಸ್ಕೋದೊಂದಿಗೆ ಆಳವಾದ ರಕ್ಷಣಾ ಒಪ್ಪಂದವನ್ನು ಮಾಡಿಕೊಳ್ಳಲು ಮುಂದಾಗಿದೆ ಎಂದು ಹೇಳಲಾಗಿದೆ.
ಸ್ವಾತಂತ್ರ್ಯದ ನಂತರ ರಷ್ಯಾ ಭಾರತದ ದೊಡ್ಡ ನಂಬಿಕಸ್ಥ ರಕ್ಷಣಾ ಸಲಕರಣೆಗಳ ಸರಬರಾಜುದಾರ ದೇಶವಾಗಿದೆ.
2025 ರ ವೇಳೆಗೆ ಶಸಸ್ತ್ರ ಪಡೆಗಳನ್ನು ಬಲಪಡಿಸಲು ಹೆಜ್ಜೆ ಇರಿಸಿರುವ ಪಾಕ್ ಮಿತ್ರ ರಾಷ್ಟ್ರ ಚೀನಾದಿಂದಲೂ 220 ಟ್ಯಾಂಕ್‌ಗಳನ್ನು ತರಿಸಿಕೊಳ್ಳಲು ಮುಂದಾಗಿದೆ ಎಂದು ತಿಳಿದು ಬಂದಿದೆ.
ಭಾರತದ ಬಳಿ ಸದ್ಯ ಪಾಕ್‌ಗಿಂತಲೂ ಉತ್ತಮವಾದ ಟ್ಯಾಂಕ್‌ಗಳಿದ್ದು, ಟಿ-90, ಟಿ-72ಮತ್ತು ಅರ್ಜುನ ಟ್ಯಾಂಕ್‌ಗಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ
Uttar Pradesh: 6 ಪುರುಷರ ವರಿಸಿ ವಂಚಿಸಿದ ಯುವತಿಯ ಗ್ಯಾಂಗ್ ಜೈಲಿಗೆ
Road Project: ಶಿರಾಡಿ ಘಾಟ್ ಸುರಂಗ ಯೋಜನೆಗೆ ಡಿಪಿಆರ್ ರಚಿಸಿ: ಕೇಂದ್ರ ಸೂಚನೆ
Hosur ವಿಮಾನ ನಿಲ್ದಾಣಕ್ಕೆ 2 ಸ್ಥಳ ನಿಗದಿಪಡಿಸಿದ ತಮಿಳುನಾಡು
GST: ಖರೀದಿ, ಮಾರಾಟ ದರದ ವ್ಯತ್ಯಾಸಕ್ಕಷ್ಟೇ 18% ಜಿಎಸ್‌ಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.