ಕೋರ್ಟ್ ಕಲಾಪದ ನಡುವೆ ಭಾರತೀಯ ಅಧಿಕಾರಿಯ ಫೋನ್ ಪಾಕ್‌ನಿಂದ ವಶ
Team Udayavani, May 12, 2017, 3:29 PM IST
ಹೊಸದಿಲ್ಲಿ : ಅತ್ಯಂತ ಪ್ರಚೋದನಕಾರಿ ಕೃತ್ಯವೊಂದರಲ್ಲಿ ಪಾಕ್ ನ್ಯಾಯಾಂಗ ಅಧಿಕಾರಿಗಳು ಇಂದು ಶುಕ್ರವಾರ ಭಾರತೀಯ ದೂತಾವಾಸದ ಪ್ರಥಮ ಕಾರ್ಯದರ್ಶಿ ಯವರ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡರು.
ಭಾರತೀಯ ದೂತಾವಾಸದ ಪ್ರಥಮ ಕಾರ್ಯದರ್ಶಿ ಯವರು ಇಸ್ಲಾಮಾಬಾದ್ ಹೈಕೋರ್ಟ್ ಕಲಾಪದಲ್ಲಿ ಭಾಗಿಯಾಗಿದ್ದರು. ಪಾಕಿಸ್ಥಾನಕ್ಕೆ ಬಂದು ಮದುವೆಯಾಗಲಿದ್ದ ಭಾರತೀಯ ಮಹಿಳೆಯೋರ್ವರು ಇಸ್ಲಾಮಾಬಾದ್‌ನಲ್ಲಿ ಭಾರತೀಯ ಹೈಕಮಿಶನ್‌ನಲ್ಲಿ ಆಸರೆ ಕೋರಿದ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿತ್ತು.
ತಾನು ವಿವಾಹವಾಗಿದ್ದ ಪಾಕಿಸ್ಥಾನದ ಖೈಬರ್ ಫಕ್‌ತೂನ್‌ಖ್ವಾ ಪ್ರಾಂತ್ಯದ ನಿವಾಸಿ ತಾಹಿರ್ ಅಲಿ ಎಂಬಾತನು ಈ ಮೊದಲೇ ಮದುವೆಯಾಗಿ ನಾಲ್ಕು ಮಕ್ಕಳ ತಂದೆಯಾಗಿರುವ ವಿಷಯ ತನಗೆ ಇಲ್ಲಿಗೆ ಬಂದ ಬಳಿಕವೇ ಗೊತ್ತಾಗಿರುವುದರಿಂದ ತನಗೆ ಮರಳಿ ಭಾರತಕ್ಕೆ ಹೋಗುವುದಕ್ಕೆ ಅವಕಾಶ ನೀಡುವಂತೆ 20ರ ಹರೆಯದ ಉಝ್ಮಾ ನ್ಯಾಯಾಲಯವನ್ನು ಕೋರಿದ್ದಳು. ಅದಕ್ಕಾಗಿ ತನಗೆ ಭಾರತೀಯ ದೂತಾವಾಸದಲ್ಲಿ ಆಶ್ರಯ ಪಡೆಯುವುದಕ್ಕೆ ಅವಕಾಶ ನೀಡುವಂತೆಯೂ ಆಕೆ ಕೋರಿದ್ದಳು.
ಹೆಚ್ಚಿನ ವಿವರಗಳನ್ನು ಎದುರು ನೋಡಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್ ಭಟ್
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ
Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು
Udupi; ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರೋಗಿಯ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.