ಕಾಶ್ಮೀರದಲ್ಲಿರುವ ಉಗ್ರರಿಗೆ ಪಾಕ್ ನಿಂದ ಡ್ರೋನ್ ಮೂಲಕ ಶಸ್ತ್ರಾಸ್ತ್ರ; ಮೂವರು ಉಗ್ರರ ಸೆರೆ
ಬಶೀರ್, ಅಮೀರ್ ಜಾನ್ ಅಲಿಯಾಸ್ ಹಮ್ಜಾ ಹಾಗೂ ಶೋಪಿಯಾನದ ಹಫೀಜ್ ಯೂನೂಸ್ ವಾಣಿ ಎಂದು ಗುರುತಿಸಲಾಗಿದೆ.
Team Udayavani, Sep 19, 2020, 3:07 PM IST
Representative Image
ಜಮ್ಮು-ಕಾಶ್ಮೀರ: ಜಮ್ಮು-ಕಾಶ್ಮೀರದಲ್ಲಿರುವ ಭಯೋತ್ಪಾದಕ ಸಂಘಟನೆಗಳಿಗೆ ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳ ಕೊರತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಮೂಲದ ಉಗ್ರಗಾಮಿ ಸಂಘಟನೆಗಳು ಶಸ್ತ್ರಾಸ್ತ್ರ ಸರಬರಾಜು ಮಾಡುವುದನ್ನು ಮುಂದುವರಿಸಿದೆ. ಡ್ರೋನ್ ಗಳ ಮೂಲಕ ಶಸ್ತ್ರಾಸ್ತ್ರಗಳನ್ನು ಗಡಿಯಲ್ಲಿ ಕೆಳಕ್ಕೆ ಹಾಕಲಾಗುತ್ತಿದೆ ಎಂದು ವರದಿ ತಿಳಿಸಿದೆ.
ಶುಕ್ರವಾರ ಜಮ್ಮು-ಕಾಶ್ಮೀರ ಪೊಲೀಸರು ಕಾಶ್ನೀರ ಕಣಿವೆ ಪ್ರದೇಶದ ಮೂವರು ಲಷ್ಕರ್ ಉಗ್ರರನ್ನು ಬಂಧಿಸಿದ್ದಾರೆ. ದಕ್ಷಿಣ ಕಾಶ್ಮೀರದ ಪುಲ್ವಾಮಾ ಮತ್ತು ಶೋಪಿಯಾನ್ ನಿಂದ ರಜೌರಿಗೆ ಮೂವರು ಉಗ್ರರು ಆಗಮಿಸಿದ್ದು, ಇವರು ಡ್ರೋನ್ ನಿಂದ ಕೆಳಗೆ ಇಳಿಸಲ್ಪಟ್ಟ ಶಸ್ತ್ರಾಸ್ತ್ರ ಪಡೆಯಲು ಬಂದಿರುವುದಾಗಿ ವರದಿ ವಿವರಿಸಿದೆ.
ಶುಕ್ರವಾರ ರಾತ್ರಿ ಪಾಕ್ ಮೂಲದ ಡ್ರೋನ್ ಮೂಲಕ ತರಲಾಗಿದ್ದ ಎರಡು ಎಕೆ 56 ರೈಫಲ್ಸ್, ಆರು ಎಕೆ ಮ್ಯಾಗಝೈನ್, 2 ಚೀನಾ ನಿರ್ಮಿತ ಪಿಸ್ತೂಲ್, 3 ಪಿಸ್ತೂಲ್ ಮ್ಯಾಗಝೈನ್, 4 ಗ್ರೆನೇಡ್ಸ್ ಅನ್ನು ಕೆಳಕ್ಕೆ ಹಾಕಲಾಗಿತ್ತು.
ಇದನ್ನೂ ಓದಿ: ಕೆ.ಎಲ್.ರಾಹುಲ್ ಭವಿಷ್ಯದಲ್ಲಿ ಭಾರತ ತಂಡದ ಕ್ಯಾಪ್ಟನ್ ಆಗಬಹುದು : ಗಾವಸ್ಕರ್
ಆರೋಪಿಗಳನ್ನು ಪುಲ್ವಾಮಾದ ರಾಹಿಲ್ ಬಶೀರ್, ಅಮೀರ್ ಜಾನ್ ಅಲಿಯಾಸ್ ಹಮ್ಜಾ ಹಾಗೂ ಶೋಪಿಯಾನದ ಹಫೀಜ್ ಯೂನೂಸ್ ವಾಣಿ ಎಂದು ಗುರುತಿಸಲಾಗಿದೆ. ಮೂವರು ಆರೋಪಿಗಳ ಬಳಿ ಇದ್ದ ಒಂದು ಲಕ್ಷ ರೂಪಾಯಿ ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿ ತಿಳಿಸಿದೆ.
ಇತ್ತಿಚೆಗೆ ಗಡಿಯಲ್ಲಿ ಡ್ರೋನ್ ಮೂಲಕ ಶಸ್ತ್ರಾಸ್ತ್ರ ಸರಬರಾಜು ಮಾಡುವ ಕೃತ್ಯ ಹೆಚ್ಚಳವಾಗುತ್ತಿರುವ ನಿಟ್ಟಿನಲ್ಲಿ ಬಿಎಸ್ ಎಫ್ ಪಡೆ ಹೈಅಲರ್ಟ್ ಆಗಿ ಕಾರ್ಯನಿರ್ವಹಿಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಈವರೆಗೆ ಇಂತಹ ಎಂಟು ಡ್ರೋನ್ ಅನ್ನು ಪತ್ತೆ ಹಚ್ಚಿ ಶಸ್ತ್ರಾಸ್ತ್ರ ವಶಕ್ಕೆ ತೆಗೆದುಕೊಳ್ಳಲಾಗಿತ್ತು ಎಂದು ವರದಿ ಹೇಳಿದೆ.
ಇದನ್ನೂ ಓದಿ: ರೈತರ ವೇಷದಲ್ಲಿ ಹೋಗಿ ಗಾಂಜಾ ಬೆಳೆದ ಆರೋಪಿಗಳನ್ನು ಬಂಧಿಸಿದ ಎಸ್ ಐ: 75 ಕೆಜಿ ಗಾಂಜಾ ವಶ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.