Pakistani ‘Bhabhi “ಭಾರತವನ್ನು ಬಿಟ್ಟು ಎಲ್ಲಿಗೂ ಹೋಗಲ್ಲ’
ಹಿಂದೂ ಸಂಪ್ರದಾಯಕ್ಕೆ ಮನಸೋತ ಪಾಕ್ ಮಹಿಳೆ ಹೇಳಿಕೆ
Team Udayavani, Jul 12, 2023, 7:25 AM IST
ಹೊಸದಿಲ್ಲಿ: ಪಬ್ಜಿಯಲ್ಲಿ ಪರಿಚಯವಾದ ಪ್ರೇಮಿ ಜತೆಗೆ ಬುದಕುವುದ ಕ್ಕಾಗಿ ಅಕ್ರಮವಾಗಿ ಭಾರತ ಪ್ರವೇಶಿಸಿ ಸುದ್ದಿಯಾಗಿದ್ದ ಪಾಕಿಸ್ಥಾನ ಮಹಿಳೆ ಸೀಮಾ ಹೈದರ್, ಇದೀಗ ಭಾರತದ ಸಂಸ್ಕೃತಿ, ಹಿಂದೂ ಸಂಪ್ರದಾಯಗಳಿಗೆ ಮನಸೋತಿದ್ದಾರೆ. ಅಲ್ಲದೇ ತಾನು ಪಾಕಿಸ್ಥಾನಕ್ಕೆ ಯಾವುದೇ ಕಾರಣಕ್ಕೂ ಹಿಂದಿರುಗುವುದಿಲ್ಲ ಎಂದಿದ್ದಾರೆ.
ಪಾಕ್ ಮೂಲದ ವಿವಾಹಿತ ಮಹಿಳೆ ಸೀಮಾ, ಪಬ್ಜಿ ಗೇಮ್ ಮೂಲಕ ಪರಿಚಿತರಾದ ಉತ್ತರ ಪ್ರದೇಶ ಮೂಲದ ಸಚಿನ್ ಎಂಬುವರನ್ನು ಪ್ರೇಮಿಸಿದ್ದರು. ಅರಬ್ನಲ್ಲಿರುವ ಆಕೆಯ ಪತಿ ನೀಡುತ್ತಿದ್ದ ಹಿಂಸೆಗಳಿಂದ ಬೇಸತ್ತು, ಸಚಿನ್ ಜತೆಗೆ ಬದುಕು ಕಟ್ಟಿಕೊಳ್ಳಲು ನಿರ್ಧರಿಸಿ, ತಮ್ಮ ಎರಡು ಮಕ್ಕಳೊಂದಿಗೆ ನೇಪಾಲದ ಮೂಲಕ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದರು.
ಅಕ್ರಮವಾಗಿ ದೇಶ ಪ್ರವೇಶಿಸಿದ್ದ ಅವರನ್ನು ಇತ್ತೀಚೆಗೆ ಜು.4ರಂದು ಬಂಧಿಸಲಾಗಿತ್ತು. ಇದೀಗ ಸೀಮಾ ಜಾಮೀನಿನ ಮೇಲೆ ಹೊರಗಿದ್ದಾರೆ. ಈ ನಡುವೆ ಸಚಿನ್ ಕುಟುಂಬದ ಜತೆಗೆ ಬೆರೆತಿರುವ ಅವರು, ಹಿಂದೂ ಸಂಪ್ರದಾಯ, ಸಸ್ಯಾಹಾರವನ್ನು ರೂಢಿಸಿಕೊಂಡಿ ದ್ದಾರೆ. ಇದೆಲ್ಲವೂ ನನಗೆ ನೆಮ್ಮದಿ ನೀಡಿದೆ. ಜತೆಗೆ ಪಾಕ್ಗೆ ಮರಳಿದರೆ ತನ್ನನ್ನು ಕೊಲ್ಲುವುದು ಖಚಿತ ಎಂದೂ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yasin Malik ವಿಚಾರಣೆಗೆ ತಿಹಾರ್ ಜೈಲಿನಲ್ಲೇ ಕೋರ್ಟ್ ರೂಂ: ಸುಪ್ರೀಂ
Train ಜನಶತಾಬ್ದಿ ಎಕ್ಸ್ಪ್ರೆಸ್ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.