ಪಾಕ್ ಗುಂಡಿನ ದಾಳಿ: ಸಾವು, ಬದುಕಿನ ಗಡಿರೇಖೆ
Team Udayavani, Jan 23, 2018, 6:55 AM IST
ಆರ್‌ಎಸ್ ಪುರ (ಜಮ್ಮು): ಪಾಕಿಸ್ಥಾನದ ಅಪ್ರಚೋದಿತ ಗುಂಡಿನ ದಾಳಿ ಹಿನ್ನೆಲೆಯಲ್ಲಿ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಗೊಂಡಿರುವ ಗಡಿಭಾಗದ ಗ್ರಾಮಸ್ಥರು, ಸರಕಾರ ತಮಗೆ ನೀಡಿರುವ ಸುರಕ್ಷಿತ ನೆಲೆ ಹಾಗೂ ಕೃಷಿ ಭೂಮಿಯ ಆಶ್ವಾಸನೆ ಈಡೇರಿಸುವಂತೆ ಆಗ್ರಹಿಸಿದ್ದಾರೆ.
ಪಾಕ್ ಪಡೆಗಳ ನಿರಂತರ ಅಪ್ರಚೋದಿತ ದಾಳಿಗಳಿಗೆ ಐವರು ಸೇನಾ ಸಿಬ್ಬಂದಿ ಸಹಿತ 12 ನಾಗರಿಕರು ಸಾವನ್ನಪ್ಪಿದ್ದು 50 ಜನರು ಗಾಯಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ, ಜಮ್ಮು, ಕಥುವಾ ಹಾಗೂ ಸಾಂಬಾ ವಲಯಗಳ ಐದು ಜಿಲ್ಲೆಗಳ ವ್ಯಾಪ್ತಿಗೆ ಬರುವ ಅಂತಾರಾಷ್ಟ್ರೀಯ ಗಡಿ (ಐಬಿ) ಹಾಗೂ ಗಡಿ ನಿಯಂತ್ರಣ ರೇಖೆಯ (ಎಲ್‌ಒಸಿ) ಹಳ್ಳಿಗರನ್ನು ಸರಕಾರ, ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಿ, ಸದ್ಯಕ್ಕೆ ಬೆಘವಾಡ ಚೋಗಾ ಪ್ರಾಂತ್ಯದಲ್ಲಿರುವ ಭಾರತೀಯ ತರಬೇತಿ ಸಂಸ್ಥೆಯಲ್ಲಿ (ಐಟಿಐ) ವಾಸ್ತವ್ಯ ಕಲ್ಪಿಸಿದೆ.
ಕಳೆದ ತಿಂಗಳಷ್ಟೇ, ಕೇಂದ್ರ ಸರಕಾರ, ಭಾರತ- ಪಾಕಿಸ್ಥಾನ ಗಡಿಭಾಗದ ಹಳ್ಳಿಗರಿಗೆ ಭೂಮಿಯಡಿಯಲ್ಲಿ 415.73 ಕೋಟಿ ರೂ. ವೆಚ್ಚದಲ್ಲಿ 14,460 ಬಂಕರ್ ನಿರ್ಮಿಸುವುದಾಗಿ ಹೇಳಿತ್ತು. ಇದಲ್ಲದೆ, 2015ರ ಕಣಿವೆ ರಾಜ್ಯದ ಚುನಾವಣೆ ಪ್ರಚಾರ ವೇಳೆ 1361.25 ಚದರಡಿ ಭೂಮಿಯನ್ನು ಸ್ಥಳಾಂತರಗೊಂಡವರಿಗೆ ಕೃಷಿ ಚಟುವಟಿಕೆಗಾಗಿ ನೀಡಲಾಗುವುದು ಎಂದು ವಾಗ್ಧಾನ ನೀಡಿತ್ತು. ಈ ಎರಡೂ ವಾಗ್ಧಾನಗಳು ಇನ್ನೂ ಜಾರಿಯಾಗಿಲ್ಲ ಎಂದು ಅಳಲು ತೋಡಿ ಕೊಂಡಿ ರುವ ನಿರಾಶ್ರಿತರು, ಶೀಘ್ರವೇ ತಮ್ಮ ಸುರ ಕ್ಷತೆಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಪಾಕ್‌ನತ್ತ ಚಿಮ್ಮಿದ 9 ಸಾವಿರ ಶೆಲ್
ಕಳೆದ 4 ದಿನಗಳಲ್ಲಿ ಪಾಕ್‌ನತ್ತ ಚಿಮ್ಮಿದ್ದು ಬರೋಬ್ಬರಿ 9 ಸಾವಿರ ಶೆಲ್‌ಗಳು. ಹೀಗಂತ ರಕ್ಷಣಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪಾಕ್‌ನ ಅಪ್ರಚೋದಿತ ದಾಳಿಗೆ ಪ್ರತ್ಯುತ್ತರವಾಗಿ 9 ಸಾವಿರ ಶೆಲ್‌ಗಳನ್ನು ಸಿಡಿಸಲಾಗಿದೆ. ಇದರಿಂದಾಗಿ ಪಾಕಿಸ್ಥಾನಿ ರೇಂಜರ್‌ಗಳ ತುರ್ತು ತೈಲ ಶೇಖರಣಾ ಪ್ರದೇಶಗಳು ಧ್ವಂಸವಾಗಿವೆ. ಒಟ್ಟಿನಲ್ಲಿ 190 ಕಿ.ಮೀ.ನ ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ ಪ್ರಕ್ಷುಬ್ಧ ವಾತಾ ವರಣ ನಿರ್ಮಾಣವಾಗಿದೆ ಎಂದೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದೇ ವೇಳೆ ಪಾಕಿಸ್ಥಾನ ಸೇನೆ, ರವಿವಾರ ರಾತ್ರಿಯಿಡೀ ಶೆಲ್ ದಾಳಿ ನಡೆಸಿದ್ದು, ಒಬ್ಬ ನಾಗರಿಕ ಮೃತಪಟ್ಟು, ಇಬ್ಬರು ಗಾಯಗೊಂಡಿದ್ದಾರೆ. ಇದರಿಂದಾಗಿ, ಗುರುವಾರದಿಂದೀಚೆಗೆ ಮೃತಪಟ್ಟವರ ಸಂಖ್ಯೆ 12ಕ್ಕೇರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಂಥ ಸ್ಥಿತಿ ಬಂದರೂ ತಲೆಬಾಗುವುದಿಲ್ಲ
ಪಾಕ್ ದಾಳಿ ಹಿನ್ನೆಲೆಯಲ್ಲಿ ಸೋಮವಾರ ಪ್ರತಿಕ್ರಿಯಿಸಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, “ಎಂಥ ಪ್ರತಿಕೂಲ ಪರಿಸ್ಥಿತಿ ಎದುರಾದರೂ, ದೇಶವು ತಲೆತಗ್ಗಿಸಲು ನಮ್ಮ ಸರಕಾರ ಬಿಡುವುದಿಲ್ಲ’ ಎಂದಿದ್ದಾರೆ. ಭಾರತ ಈಗ ದುರ್ಬಲ ರಾಷ್ಟ್ರವಲ್ಲ. ನಾವು ಪ್ರಬಲವಾಗಿ ಬೆಳೆದಿದ್ದು, ಜಗತ್ತಿನ ಕಣ್ಣಲ್ಲಿ ಭಾರತದ ವರ್ಚಸ್ಸು ಬದಲಾಗಿದೆ ಎಂದೂ ಅವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್ ಆಹ್ವಾನ
J&K: ವಾಜಪೇಯಿ ಬದುಕಿದ್ದರೆ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗುತ್ತಿರಲಿಲ್ಲ: ಒಮರ್
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
DGP: ಮಹಾರಾಷ್ಟ್ರದ ನೂತನ ಡಿಜಿಪಿ ಆಗಿ ಐಪಿಎಸ್ ಅಧಿಕಾರಿ ಸಂಜಯ್ ವರ್ಮಾ ನೇಮಕ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
MUST WATCH
ಹೊಸ ಸೇರ್ಪಡೆ
Davanagere: ಇನ್ಶೂರೆನ್ಸ್ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ
Udupi: ನ. 9-11ರ ವರೆಗೆ 3 ದಿನಗಳ ಹರಿದಾಸ ಸಾಹಿತ್ಯ ಅಂತಾರಾಷ್ಟ್ರೀಯ ಸಮ್ಮೇಳನ
Commonwealth ಸಂಸದೀಯ ಸಭೆ; ಸ್ಪೀಕರ್ ಯು.ಟಿ. ಖಾದರ್ ಭಾಗಿ
Salman Khan: ಕ್ಷಮೆ ಕೇಳಿ ಇಲ್ಲವೇ 5 ಕೋಟಿ ಕೊಡಿ: ನಟ ಸಲ್ಮಾನ್‌ಗೆ ಮತ್ತೂಂದು ಬೆದರಿಕೆ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.