ಯೋಧ ಔರಂಗಜೇಬ್ ಅಪಹರಣ, ಹತ್ಯೆ ಹಿಂದೆ ಪಾಕ್ ಐಎಎಸ್ ಕೈವಾಡ
Team Udayavani, Jun 15, 2018, 12:04 PM IST
ಜಮ್ಮು : ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಕಲಾಂಪೋರಾದಲ್ಲಿ ಗುಂಡೇಟುಗಳೊಂದಿಗೆ ಶವವಾಗಿ ಪತ್ತೆಯಾಗಿರುವ ಅಪಹೃತ ಸೇನಾ ಜವಾನ ಔರಂಗಜೇಬ್ ಅವರ ಹತ್ಯೆಯ ಹಿಂದೆ ಕುಖ್ಯಾತ ಪಾಕ್ ಬೇಹು ಸಂಸ್ಥೆ ಐಎಸ್‌ಐ ಕೈವಾಡ ಇರುವುದನ್ನು ಶಂಕಿಸಲಾಗಿದೆ. ಈ ಬಗ್ಗೆ ಭಾರತೀಯ ಗುಪ್ತಚರ ದಳಕ್ಕೆ ಕೆಲವು ಸೂಕ್ಷ್ಮ ಮಾಹಿತಿಗಳು ಲಭಿಸಿವೆ ಎಂದು ವರದಿಗಳು ತಿಳಿಸಿವೆ.
ಕಾಶ್ಮೀರ ವಿಮೋಚನೆಗಾಗಿ ಜಿಹಾದ್ ವಿಮೋಚನಾ ಸಮರದಲ್ಲಿ ಭಾಗಿಯಾಗಿರುವ ಉಗ್ರರ ವಿರುದ್ಧ ಭಾರತೀಯ ಸೇನೆ ನಡೆಸುತ್ತಿರುವ ಕಾರ್ಯಾಚರಣೆಯಿಂದ ಧೃತಿಗೆಟ್ಟಿರುವ ಪಾಕ್ ಐಎಸ್‌ಐ, ಭಾರತಕ್ಕೆ ಬುದ್ದಿ ಕಲಿಸುವ ಹುನ್ನಾರದಲ್ಲಿ ಯೋಧ ಔರಂಜೇಬ್ ಅವರನ್ನು ಹತ್ಯೆಗೈದಿರವುದಾಗಿ ಮಾಧ್ಯಮ ವರದಿಗಳು ತಿಳಿಸಿವೆ.
ಯೋಧ ಔರಂಗಜೇಬ್ ಅವರು ಅಪಹರಣಕ್ಕೆ ಗುರಿಯಾದ ಕೆಲವೇ ತಾಸುಗಳಲ್ಲಿ ಶವವಾಗಿ ಪತ್ತೆಯಾಗಿದ್ದರು. ಔರಂಗಜೇಬ್ ಅವರು ಹಿಜ್ಬುಲ್ ಮುಜಾಹಿದೀನ್ ಉಗ್ರ ಸಮೀರ್ ಟೈಗರ್ ನನ್ನು ಕಳೆದ ಮೇ ತಿಂಗಳಲ್ಲಿ ಎನ್‌ಕೌಂಟರ್‌ನಲ್ಲಿ ಹತ್ಯೆಗೈದ ಭಾರತೀಯ ಸೇನಾ ತಂಡದ ಸದಸ್ಯರಾಗಿದ್ದಾರು.
ಕಾಶ್ಮೀರದಲ್ಲಿನ ವಿಮೋಚನಾ ಜಿಹಾದಿಗಳು ಭಾರತೀಯ ಸೇನಾ ಪಡೆಯ ಕಾರ್ಯಾಚರಣೆಗೆ ಬೆದರುವುದಿಲ್ಲ ಎಂಬ ಸಂದೇಶ ರವಾನೆಯ ಉದ್ದೇಶದಲ್ಲಿ ಪಾಕ್ ಐಎಸ್‌ಐ ಯೋಧ ಔರಂಗಜೇಬ ಅವರ ಅಪಹರಣ ಮತ್ತು ಹತ್ಯೆಯನ್ನು ಆಯೋಜಿಸಿತ್ತು ಎಂದು ಮಾಧ್ಯಮ ವರದಿಗಳು ಹೇಳಳಿವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.