ಕಾಶ್ಮೀರದಲ್ಲಿ ಮತ್ತೆ ಗಲಭೆ ಎಬ್ಬಿಸಲು ಉಗ್ರ ಸಂಘಟನೆಗಳ ಸಭೆ ಸೇರಿದ ಐಎಸ್ ಐ
Team Udayavani, Sep 10, 2019, 11:51 AM IST
ಇಸ್ಲಮಾಬಾದ್: ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದಾದ ನಂತರ ಚಡಪಡಿಸುತ್ತಿರುವ ಪಾಕಿಸ್ಥಾನ, ಕಣಿವೆ ರಾಜ್ಯದಲ್ಲಿ ಮತ್ತೆ ಗಲಭೆ ಎಬ್ಬಿಸಲು ಸಂಚು ನಡೆಸಿದೆ. ಮಹತ್ತರ ಬೆಳವಣಿಗೆಯಲ್ಲಿ ಪಾಕ್ ನ ಗುಪ್ತಚರ ಸಂಸ್ಥೆ ಐಎಸ್ ಐ ಇಸ್ಲಮಾಬಾದ್ ನಲ್ಲಿ ಉಗ್ರ ಸಂಘಟನೆಗಳೊಂದಿಗೆ ಸಭೆ ನಡೆಸಿದೆ.
ಪಾಕ್ ಮೂಲದ ಪ್ರಮುಖ ಉಗ್ರ ಸಂಘಟನೆಗಳಾದ ಜೈಶ್ ಎ ಮೊಹಮ್ಮದ್, ಲಶ್ಕರ್ ಎ ತೈಬಾ, ಹಿಜ್ಬುಲ್ ಮುಜಾಹಿದ್ದೀನ್, ಖಲಿಸ್ಥಾನಿ ಜಿಂದಾಬಾದ್ ಫೋರ್ಸ್ ಸಂಘಟನೆಗಳೊಂದಿಗೆ ಸಭೆ ನಡೆಸಿರುವ ಐಎಸ್ ಐ ಭಾರತದ ಮೇಲೆ ಉಗ್ರ ದಾಳಿ ನಡೆಸುವ ಬಗ್ಗೆ ಚರ್ಚಿಸಿದೆ ಎಂದು ವರದಿಯಾಗಿದೆ.
ಅಂತಾರಾಷ್ಟ್ರೀಯ ಗಮನ ಸೆಳೆಯುವ ಪುಲ್ವಾಮಾ ಮಾದರಿಯ ಮತ್ತೊಂದು ದಾಳಿಯನ್ನು ಜಮ್ಮು ಕಾಶ್ಮೀರದಲ್ಲಿ ನಡೆಸಲು ಪಾಕ್ ಯೋಜನೆ ರೂಪಿಸಿದೆ. ಈ ಯೋಜನೆಗೆ ಖಲಿಸ್ಥಾನಿ ಜಿಂದಾಬಾದ್ ಉಗ್ರರ ಸಹಾಯ ಪಡೆಯಲು ಅದು ಯೋಚಿಸಿದೆ ಎಂದು ವರದಿಯಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.