Panaji: ಬಾಡಿಗೆ ಮನೆಯಿಂದಲೇ 3 ಲಕ್ಷ ಮೌಲ್ಯದ ವಸ್ತು ದೋಚಿ ಪರಾರಿಯಾಗಿದ್ದ ಕಳ್ಳ ಸೆರೆ
Team Udayavani, Oct 30, 2024, 11:37 AM IST
ಪಣಜಿ: ಗೋವಾದ ಸಾಳಗಾಂವನಲ್ಲಿ ಮನೆ ಮಾಲೀಕರ ಒಂದೂವರೆ ಲಕ್ಷ ರೂ. ಹಣ ಹಾಗೂ ಸುಮಾರು ಒಂದೂವರೆ ಲಕ್ಷ ರೂ. ಮೌಲ್ಯದ ವಿವಿಧ ವಸ್ತುಗಳ ಕಳ್ಳತನ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಬಾಗಲಕೋಟೆಯ ಅರುಣ ಪರಶುರಾಮ ಲಮಾಣಿ (21) ಎಂಬ ಆರೋಪಿಯನ್ನು ಪೋಲಿಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯು ದುಮಿಂಗೋಸ್ ಡಿಸೋಜಾ ಎಂಬವರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಬಾಡಿಗೆ ಮನೆ ಬಿಟ್ಟು ಹೋಗುವ ಸಂದರ್ಭದಲ್ಲಿ ಆರೋಪಿಯು ಮನೆ ಮಾಲೀಕರ ಹಣ ಮತ್ತು ವಿವಿಧ ವಸ್ತುಗಳ ಕಳ್ಳತನ ಮಾಡಿ ಪರಾರಿಯಾಗಿದ್ದ ಎಂಬ ಆರೋಪವಿದೆ.
ತನ್ನ ಮನೆ ದೋಚಿ ಬಾಡಿಗೆದಾರ ಪರಾರಿಯಾಗಿದ್ದಾನೆ ಎಂದು ತಿಳಿದ ಕೂಡಲೇ ಶಂಕಿತ ಆರೋಪಿಯ ಮೊಬೈಲ್ ಗೆ ಮನೆ ಮಾಲೀಕ ಕರೆ ಮಾಡಿದರೆ ಆತನನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ ಎನ್ನಲಾಗಿದೆ. ನಂತರ ಮನೆ ಮಾಲೀಕ ಸಾಳಗಾಂವ ಪೋಲಿಸ್ ಠಾಣೆಯಲ್ಲಿ ದೂರು ಸಲ್ಲಿಸಿದರು.
ಗೋವಾದ ಸಾಳಗಾಂವ ಪೋಲಿಸರು ಕರ್ನಾಟಕದ ಬಾಗಲಕೋಟೆಗೆ ತೆರಳಿ ಕರ್ನಾಟಕ ಪೋಲಿಸರ ಸಹಕಾರದೊಂದಿಗೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Speeding Car: ಮನೆಯ ಮುಂದೆ ರಂಗೋಲಿ ಹಾಕುತ್ತಿದ್ದ ಸಹೋದರಿಯರ ಮೇಲೆ ಹರಿದ ಕಾರು…
Himachal: ಪ್ಯಾರಾಗ್ಲೈಡಿಂಗ್ ಮಾಡುತ್ತಿದ್ದಾಗ ಅವಘಡ: ವಿದೇಶಿ ಪ್ಯಾರಾಗ್ಲೈಡರ್ ಮೃ*ತ್ಯು
Madhya Pradesh: ಹುಲಿ ಸಂರಕ್ಷಿತ ಪ್ರದೇಶದಲ್ಲಿ ಏಳು ಆನೆಗಳ ನಿಗೂಢ ಸಾವು, ತನಿಖೆಗೆ ಆದೇಶ
Missing ಆಗಿದ್ದ ಶಿಂಧೆ ಸೇನಾ ಶಾಸಕ 36 ಗಂಟೆಗಳ ನಂತರ ಕುಟುಂಬದ ಸಂಪರ್ಕಕ್ಕೆ!
Salman Khan; ಬಾಲಿವುಡ್ ದಿಗ್ಗಜನಿಗೆ ಮತ್ತೆ ಬೆದರಿಕೆ: 2 ಕೋಟಿ ರೂ. ಬೇಡಿಕೆ
MUST WATCH
ಹೊಸ ಸೇರ್ಪಡೆ
Speeding Car: ಮನೆಯ ಮುಂದೆ ರಂಗೋಲಿ ಹಾಕುತ್ತಿದ್ದ ಸಹೋದರಿಯರ ಮೇಲೆ ಹರಿದ ಕಾರು…
Actor Darshan: ಬೇರೆ ಅವರನ್ನು ನಿಂದಿಸಬೇಡಿ.. ದರ್ಶನ್ ಅಭಿಮಾನಿಗಳಿಗೆ ʼಡಿ ಕಂಪನಿʼ ಮನವಿ
Kota: ಸಂಚಾರಿ ಕಮ್ಮಾರಸಾಲೆ; ಇಡೀ ಕುಟುಂಬವೇ ಭಾಗಿ!
Himachal: ಪ್ಯಾರಾಗ್ಲೈಡಿಂಗ್ ಮಾಡುತ್ತಿದ್ದಾಗ ಅವಘಡ: ವಿದೇಶಿ ಪ್ಯಾರಾಗ್ಲೈಡರ್ ಮೃ*ತ್ಯು
Actor Darshan: ‘ದಾಸʼನ ಜಾಮೀನಿಗೆ ಶ್ಯೂರಿಟಿ ನೀಡಲು ಮುಂದೆ ಬಂದ ಆ ನಟ ಯಾರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.