Panaji: ರೈಲು ನಿಲ್ದಾಣದ ಬಳಿ ಭೂಕುಸಿತ; ಸತತ ಮೂರನೇ ದಿನವೂ ರೈಲು ಸೇವೆಗಳು ಸ್ಥಗಿತ
Team Udayavani, Jul 27, 2023, 2:55 PM IST
ಪಣಜಿ: ಗೋವಾದ ಕ್ಯಾಸಲ್ ರಾಕ್-ಕರಂಜೋಲ್ ರೈಲು ನಿಲ್ದಾಣದ ಬಳಿ ಭೂಕುಸಿತದಿಂದಾಗಿ ರೈಲು ಹಳಿಯ ಮೇಲೆ ಭಾರಿ ಪ್ರಮಾಣದಲ್ಲಿ ಮಣ್ಣು ತುಂಬಿಕೊಂಡಿದ್ದು ಸತತ ಮೂರನೇ ದಿನವೂ ರೈಲು ಸೇವೆಗಳು ಸ್ಥಗಿತಗೊಂಡಿವೆ.
ಆದ್ದರಿಂದ, ಈ ಮಾರ್ಗವಾಗಿ ಓಡಾಟ ನಡೆಸುವ ರೈಲುಗಳ ಮಾರ್ಗವನ್ನು ಬದಲಾಯಿಸಲಾಗಿದೆ. ಭಾರಿ ಮಳೆಯಿಂದಾಗಿ ಮಣ್ಣು ತೆರವಿಗೆ ಅಡ್ಡಿಯಾಗಿದೆ. ರೈಲ್ವೆ ಮಾರ್ಗ ಬದಲಾವಣೆಯಿಂದಾಗಿ ಸ್ಥಳೀಯ ರೈಲ್ವೆ ನಿಲ್ದಾಣದ ಬಳಿಯಿಂದ ಪ್ರಯಾಣಿಕರಿಗೆ ಬಸ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.
ರದ್ದುಗೊಂಡ ರೈಲುಗಳು ಯಶವಂತಪುರ-ವಾಸ್ಕೋ-ಡ-ಗಾಮಾ ಮಾರ್ಗದ ರೈಲು ಸಂಖ್ಯೆ 17309 ಮತ್ತು ವಾಸ್ಕೋ-ಡ-ಗಾಮ-ಯಶವಂತಪುರ ಮಾರ್ಗದ ನಂ. 17310, ಪ್ರತಿದಿನ ಸಂಚರಿಸುವ ರೈಲುಗಳನ್ನು ರದ್ದುಗೊಳಿಸಲಾಗಿದೆ.
ಜು. 27 ರಂದು ಶಾಲಿಮಾರ್-ವಾಸ್ಕೋ-ಡ-ಗಾಮ ಅಮರಾವತಿ ಎಕ್ಸ್‍ಪ್ರೆಸ್ ಹುಬ್ಬಳ್ಳಿಯಲ್ಲಿ ನಿಲುಗಡೆ ಮಾಡಲಾಗಿದೆ. ಜುಲೈ 30 ರಂದು ಶಾಲಿಮಾರ್‍ಗೆ ಅಮರಾವತಿ ಎಕ್ಸ್‍ಪ್ರೆಸ್ ವಾಸ್ಕೋಡಗಾಮಾ ಬದಲಿಗೆ ಹುಬ್ಬಳ್ಳಿಯಿಂದ ಹೊರಡಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಜುಲೈ 28 ರಂದು ಹೊರಡುವ ಕಾಚೆಗೋಡ-ವಾಸ್ಕೋ-ಡ-ಗಾಮ ರೈಲು ಹುಬ್ಬಳ್ಳಿಯಲ್ಲಿ ನಿಲುಗಡೆಯಾಗಲಿದೆ ಮತ್ತು ಜುಲೈ 30 ರಂದು ಹೊರಡುವ ರೈಲು ಹುಬ್ಬಳ್ಳಿಯಿಂದ ಹೊರಡಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕ್ಯಾಸಲ್‍ರಾಕ್ ಬಳಿ ರೈಲ್ವೆ ಹಳಿಗಳ ಮೇಲೆ ಭೂಕುಸಿತದಿಂದಾಗಿ ಕೆಲವು ನಿಲ್ದಾಣಗಳ ಮೊದಲು ಹುಬ್ಬಳ್ಳಿಯಲ್ಲಿ ರೈಲುಗಳನ್ನು ನಿಲ್ಲಿಸಲಾಗುತ್ತಿದೆ. ಹೀಗಾಗಿ ಗೋವಾಕ್ಕೆ ಬರುವ ಪ್ರಯಾಣಿಕರು ಪರದಾಡುತ್ತಿದ್ದಾರೆ.
ಏತನ್ಮಧ್ಯೆ, ರೈಲ್ವೆ ಇಲಾಖೆ ಇದನ್ನು ಗಮನಿಸಿ ಪ್ರಯಾಣಿಕರಿಗೆ ಉಚಿತ ಬಸ್ ಸೇವೆಗಳನ್ನು ಆಯೋಜಿಸಿದೆ. ಹಜರತ್ ನಿಜಾಮುದ್ದೀನ್ ಎಕ್ಸ್‍ಪ್ರೆಸ್‍ನಿಂದ 255 ಪ್ರಯಾಣಿಕರಿಗೆ ನೈರುತ್ಯ ರೈಲ್ವೆ ವಿಭಾಗದಿಂದ ಎಂಟು ಬಸ್‍ಗಳನ್ನು ಉಚಿತವಾಗಿ ವ್ಯವಸ್ಥೆ ಮಾಡಲಾಗಿದ್ದು, ವಾಸ್ಕೋ ಬದಲಿಗೆ ಬೆಳಗಾವಿಯಲ್ಲಿ ರೈಲು ನಿಲ್ಲಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Encroached; ಉತ್ತರಪ್ರದೇಶದಲ್ಲಿ ಬುಲ್ಡೋಜರ್ ಬಳಸಿ ಬಿಜೆಪಿ ಕಚೇರಿಯೇ ತೆರವು!
Kasganj: ವಿವಾಹಿತನಿಗೆ ಪೊಲೀಸ್ ಠಾಣೆಯಲ್ಲಿ ಬಲವಂತದಿಂದ ಮತ್ತೊಂದು ವಿವಾಹ!SPಗೆ ದೂರು!
Uttara Pradesh: ಬುಲ್ಡೋಜರ್ ಬಳಸಿ ಬಿಜೆಪಿ ಕಚೇರಿಯನ್ನೇ ತೆರವುಗೊಳಿಸಿದ ಯುಪಿ ಸರ್ಕಾರ
Manipur ಗಲಭೆಗಳಲ್ಲಿ ‘ಸ್ಟಾರ್‌ಲಿಂಕ್’ ಬಳಕೆ: ಆರೋಪ ನಿರಾಕರಿಸಿದ ಎಲಾನ್ ಮಸ್ಕ್
AAP; ಸಂಜಯ್ ಸಿಂಗ್ ವಿರುದ್ಧ ಗೋವಾ ಸಿಎಂ ಪತ್ನಿಯಿಂದ 100 ಕೋಟಿ ಮಾನನಷ್ಟ ಮೊಕದ್ದಮೆ
MUST WATCH
ಹೊಸ ಸೇರ್ಪಡೆ
Encroached; ಉತ್ತರಪ್ರದೇಶದಲ್ಲಿ ಬುಲ್ಡೋಜರ್ ಬಳಸಿ ಬಿಜೆಪಿ ಕಚೇರಿಯೇ ತೆರವು!
Coastalwood: ರೂಪೇಶ್ ಶೆಟ್ಟಿ ನಿರ್ದೇಶನದ “ಜೈ” ಸಿನಿಮಾದ ಎರಡನೇ ಹಂತದ ಚಿತ್ರೀಕರಣ ಮುಕ್ತಾಯ
Kundapura: ರಾಷ್ಟ್ರೀಯ ಹೆದ್ದಾರಿ; ಮುಗಿಯದ ಕಿರಿಕಿರಿ
Mangaluru; ಕೆಲರೈ- ವಾಮಂಜೂರು ಸಂಪರ್ಕ ರಸ್ತೆ ಅವ್ಯವಸ್ಥೆ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.