ಪಣಜಿ: ಮಣಿಪುರ ವಿಚಾರ… ಸದನದ ಬಾವಿಗಿಳಿದು ಪ್ರತಿಪಕ್ಷ ಶಾಸಕರಿಂದ ಧರಣಿ
Team Udayavani, Aug 2, 2023, 3:32 PM IST
ಪಣಜಿ: ಗೋವಾ ವಿಧಾನಸಭೆಯ ಮುಂಗಾರು ಅಧಿವೇಶನದಲ್ಲಿ ನಿನ್ನೆ ಅಮಾನತುಗೊಂಡಿದ್ದ ಏಳು ಪ್ರತಿಪಕ್ಷಗಳ ಶಾಸಕರು ತಮ್ಮ ಅಮಾನತು ಅವಧಿ ಇಂದು ಮುಕ್ತಾಯಗೊಂಡ ನಂತರ ಮತ್ತೆ ವಿಧಾನಸಭೆಯಲ್ಲಿ ಮಣಿಪುರದ ವಿಷಯದ ಬಗ್ಗೆ ಚರ್ಚೆಗೆ ಒತ್ತಾಯಿಸಿದರು.
ಶಾಸಕ ವಿಜಯ್ ಸರ್ದೇಸಾಯಿ ಹೊರತುಪಡಿಸಿ ಆರು ಪ್ರತಿಪಕ್ಷಗಳ ಶಾಸಕರು ಬುಧವಾರ ಮತ್ತೆ ಸ್ಪೀಕರ್ ಮುಂದೆ ಸದನದ ಬಾವಿಗೆ ಇಳಿದು ಧರಣಿ ನಡೆಸಿ ಮಣಿಪುರದ ವಿಷಯದ ಬಗ್ಗೆ ಚರ್ಚೆಗೆ ಒತ್ತಾಯಿಸಿದರು. ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಅವರು ಶಾಸಕ ಸರ್ದೇಸಾಯಿ ಅವರು ಪ್ರಸ್ತಾಪಿಸಿದ ವಿಷಯಗಳ ಆಧಾರದ ಮೇಲೆ ಅಂತಿಮವಾಗಿ ಚರ್ಚಿಸುವುದಾಗಿ ಭರವಸೆ ನೀಡಿದರು.
ವಿರೋಧ ಪಕ್ಷದ ಕೆಲ ಶಾಸಕರು ಬುಧವಾರ ಮತ್ತೆ ಕಪ್ಪು ಬಟ್ಟೆ ತೊಟ್ಟಿದ್ದರು. ನಿನ್ನೆ ಅಧಿವೇಶನದಲ್ಲಿ ಅಮಾನತುಗೊಂಡವರಲ್ಲಿ ವಿರೋಧ ಪಕ್ಷದ ನಾಯಕರಾದ ಯೂರಿ ಅಲೆಮಾವೊ, ಎಲ್ಟನ್ ಡಿ ಕೋಸ್ಟಾ, ಕಾರ್ಲೋಸ್ ಫೆರೇರಾ, ಆರ್‍ಜಿ ಶಾಸಕ ವೀರೇಶ್ ಬೋರ್ಕರ್, ಎಎಪಿ ಶಾಸಕರಾದ ವೆಂಜಿ ವಿಗಾಸ್ ಮತ್ತು ಕ್ರೂಜ್ ಸಿಲ್ವಾ ಮತ್ತು ಗೋವಾ ಫಾರ್ವರ್ಡ್ ಶಾಸಕ ವಿಜಯ್ ಸರ್ದೇಸಾಯಿ ಸೇರಿದ್ದಾರೆ. ಸ್ಪೀಕರ್ ರಮೇಶ್ ತಾವಡ್ಕರ್ ಅವರು ಏಳು ಶಾಸಕರ ಮೇಲೆ ಎರಡು ದಿನಗಳ ಕಾಲ ಅಮಾನತುಗೊಳಿಸಿದ್ದರು ವಿಧಾನಸಭೆಯ ಮಂಗಳವಾರ ಸಂಜೆ ಅಧಿವೇಶನದಲ್ಲಿ ಸಭಾಪತಿಗಳು ಅಮಾನತನ್ನು ಸಡಿಲಿಸಿ 24 ಗಂಟೆಗೆ ತಂದರು ಇದರಿಂದಾಗಿ ಈ ಶಾಸಕರು ಇಂದು ವಿಧಾನಸಭೆ ಹಾಜರಾಗಲು ಸಾಧ್ಯವಾಯಿತು.
ಈ ಸಮಯದಲ್ಲಿ, ಯೂರಿ ಅಲೆಮಾವ್ ತುಂಬಾ ಆಕ್ರಮಣಕಾರಿಯಾಗಿ ಮಾತನಾಡಿದ್ದಾರೆ, ಅಸಂಸದೀಯ ಮಾತುಗಳನ್ನಾಡಿದ್ದಾರೆ. ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮುಖ್ಯಮಂತ್ರಿ ಸಾವಂತ್, ಮಾತನ್ನು ಹಿಂದಕ್ಕೆ ತೆಗೆದುಕೊಳ್ಳುವಂತೆ ಸೂಚಿಸಿದರು. ಮುಖ್ಯಮಂತ್ರಿ ಸಾವಂತ್ ಅವರು ಮಣಿಪುರದ ವಿಷಯದ ಕುರಿತು ಅಧಿವೇಶನದಲ್ಲಿ ಚರ್ಚಿಸುವುದಾಗಿ ಭರವಸೆ ನೀಡಿದರು ಆದರೆ ಯಾವಾಗ ಎಂದು ಹೇಳಲಿಲ್ಲ.
ಇದನ್ನೂ ಓದಿ: Manipur ರಕ್ತಪಾತದ ಅಟ್ಟಹಾಸಕ್ಕೆ ಸ್ಥಳೀಯರಿಂದ ಎಕೆ 47, ಅತ್ಯಾಧುನಿಕ ಶಸ್ತ್ರಾಸ್ತ್ರ ಬಳಕೆ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ
Maharashtra; ಫಡ್ನವೀಸ್ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!
Mumbai; ಚುನಾವಣೆಗೆ ಏಕಾಂಗಿ ಸ್ಪರ್ಧೆ: ಉದ್ಧವ್ ಶಿವಸೇನೆ ಇಂಗಿತ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.