ಪನಾಮಾ ದಾಖಲೆ: 5 ಕಂಪೆನಿಗಳ ವಿಚಾರಣೆ ಶುರು
Team Udayavani, Sep 10, 2017, 8:25 AM IST
ಹೊಸದಿಲ್ಲಿ : ಕಳೆದ ವರ್ಷ ಬಹಿರಂಗಗೊಂಡಿದ್ದ ಪನಾಮಾ ದಾಖಲೆಗಳಲ್ಲಿ ಉಲ್ಲೇಖಗೊಂಡಿದ್ದ ಭಾರತೀಯ ಕಂಪೆನಿಗಳು, ಟ್ರಸ್ಟ್ಗಳ ಪೈಕಿ ಐದರ ವಿರುದ್ಧ ದೇಶದ ವಿವಿಧ ಕೋರ್ಟ್ಗಳಲ್ಲಿ ವಿಚಾರಣೆ ನಡೆಸುವ ಪ್ರಕ್ರಿಯೆ ಶುರುವಾಗಿದೆ. ಈ ಬಗ್ಗೆ ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಮಾಹಿತಿ ನೀಡಿದೆ.
ಐದು ಟ್ರಸ್ಟ್ ಯಾ ಕಂಪೆನಿಗಳ ವಿರುದ್ಧ 13 ದೇಶಗಳಿಂದ ಸಾಕ್ಷ್ಯಗಳು ಲಭಿಸಿವೆ. ಹೀಗಾಗಿ ಅವುಗಳು ತೆರಿಗೆ ಸ್ವರ್ಗ ರಾಷ್ಟ್ರಗಳಲ್ಲಿ ಹೂಡಿಕೆ ಮಾಡಿರುವ ಬಗ್ಗೆ ಖಚಿತ ಮಾಹಿತಿ ಸಿಕ್ಕಂತಾಗಿದೆ ಎಂದು “ದ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ. ಕಪ್ಪುಹಣ ವಿರುದ್ಧ 2015ರಲ್ಲಿ ಅಂಗೀಕಾರಗೊಂಡ ಹೊಸ ಕಾಯ್ದೆಯನ್ವಯವೂ ಈ ಕಂಪೆನಿಗಳ ವಿರುದ್ಧ ಮೊಕದ್ದಮೆ ಹೂಡಲಾಗುತ್ತದೆ. ವರ್ಷದ ಆರಂಭದಲ್ಲಿ ವಿವಿಧ ದೇಶಗಳಿಗೆ 283 ಪ್ರಕರಣಗಳಲ್ಲಿ ಮಾಹಿತಿ ಕೇಳಿ ಕೋರಿಕೆ ಸಲ್ಲಿಸಿತ್ತು. ಆ ಸಂಖ್ಯೆ ಈಗ 300 ದಾಟಿದೆ. ಒಟ್ಟಾರೆ 240 ಪ್ರಕರಣಗಳ ಪೈಕಿ ಕ್ರಮ ಕೈಗೊಳ್ಳಬಹುದಾದ 70 ಕೇಸುಗಳನ್ನು ಕೈಗೆತ್ತಿಕೊಳ್ಳಲು ಆದಾಯ ತೆರಿಗೆ ಇಲಾಖೆ ನಿರ್ಧರಿಸಿದೆ. ಬಹು ತನಿಖಾ ಸಂಸ್ಥೆಗೆ ಈಗ ಬ್ರಿಟಿಷ್ ವರ್ಜಿನ್ ದ್ವೀಪಗಳು, ಸೈಪ್ರಸ್ ಮತ್ತು ಸೆಷಲ್ಸ್ನಿಂದಲೂ ಮಾಹಿತಿಗಳು ಬರುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ
NCB ನಿರಂತರ ಕಾರ್ಯಾಚರಣೆ: ಡ್ರಗ್ಸ್ ಜಾಲ ಮುರಿಯಲು ಆಪರೇಷನ್ ಸಾಗರ ಮಂಥನ
J. P. Nadda: ನುಸುಳುಕೋರರಿಗೆ ಮದ್ರಸಾದಲ್ಲಿ ಆಶ್ರಯ ಕೊಟ್ಟ ಜೆಎಂಎಂ
Delhi: ಮಿತಿ ಮೀರಿದ ಮಾಲಿನ್ಯ: ಟ್ರಕ್ಗಳ ಪ್ರವೇಶಕ್ಕೆ ನಿರ್ಬಂಧ
Maharashtra: ಕಾಂಗ್ರೆಸ್ ಸರಕಾರ ಬಂದರೆ ಮುಸ್ಲಿಂ ಮೀಸಲು: ರೇವಂತ್ ರೆಡ್ಡಿ
MUST WATCH
ಹೊಸ ಸೇರ್ಪಡೆ
Question paper leak ಶಂಕೆ: ಪಿಡಿಒ ಪರೀಕ್ಷೆ ಬಹಿಷ್ಕರಿಸಿ ಪ್ರತಿಭಟನೆ
Kanakadasa Jayanthi ಇಂದು; ಕನಕದಾಸರ ತಣ್ತೀಗಳು ಹಿಂದೆಂದಿಗಿಂತ ಇಂದಿಗೆ ಹೆಚ್ಚು ಪ್ರಸ್ತುತ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.