ʼಮಧುರಾಷ್ಟಕಂ ಪ್ರಿಯ’ರಾಗಿದ್ದ ಸಂಗೀತ ಮಾಂತ್ರಿಕ ಜಸ್‌ರಾಜ್; ನಾಸಾ ಗ್ರಹಗಳಿಗೂ ಇವರದೇ ಹೆಸರು
Team Udayavani, Aug 17, 2020, 8:08 PM IST
ಮಣಿಪಾಲ: ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ದಿಗ್ಗಜ ಪಂಡಿತ್ ಜಸ್‌ರಾಜ್ ಅವರು ತಮ್ಮ 90ನೇ ವಯಸ್ಸಿನಲ್ಲಿ ಹೃದಯ ಸ್ತಂಭನದಿಂದ ನಿಧನರಾದರು.
ಪದ್ಮವಿಭೂಷಣ್ ಪಂಡಿತ್ ಜಸ್‌ರಾಜ್ ತಮ್ಮ ಕುಟುಂಬದೊಂದಿಗೆ ಸ್ವಲ್ಪ ಸಮಯ ಅಮೆರಿಕದಲ್ಲಿದ್ದರು.
ಇಂದು ಈ ಮಹಾನ್ ಸಂಗೀತ ಮಾಂತ್ರಿಕ ನಮ್ಮ ನಡುವೆ ಇಲ್ಲದೇ ಇದ್ದರೂ ಅವರ ನೆನಪುಗಳು ಮಾತ್ರ ಅಚ್ಚಳಿಯದೇ ಉಳಿಯಲಿದೆ.
ತಮ್ಮ 80 ವರ್ಷಗಳ ಸಂಗೀತ ಜೀವನದಲ್ಲಿ ಹಲವು ಮೈಲುಗಳನ್ನು ದಾಟಿದ ಸಾಧನೆ ಇವರದ್ದು.
7ಖಂಡಗಳಲ್ಲಿ ಕಾರ್ಯಕ್ರಮ ನೀಡಿದ ಹೆಗ್ಗಳಿಕೆ ಹೊಂದಿರುವ ಇವರು, ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದಿಂದಲೂ ಗೌರವ ಪಡೆದವರು. ಇವರ ಸಂಗೀತ ಸಾಧನೆಗಳಿಗೆ ಇವರೇ ಸರಿಸಾಟಿ.
ಹರಿರ್ಯಾಣದ ಹಿಸಾರ್‌ನಲ್ಲಿ 1930ರ ಜನವರಿ 28ರಂದು ಜನಿಸಿದ ಪಂಡಿತ್ ಜಸರಾಜ್ ಅವರು 4 ತಲೆಮಾರುಗಳಿಂದ ಶಾಸ್ತ್ರೀಯ ಸಂಗೀತದ ಸಂಪ್ರದಾಯವನ್ನು ಮುಂದುವರೆಸುತ್ತಿರುವ ಕುಟುಂಬಕ್ಕೆ ಸೇರಿದರಾಗಿದ್ದಾರೆ. ಖಯಾಲ್ ಶೈಲಿಯ ಗಾಯನವು ಪಂಡಿತ್ ಜಸ್‌ರಾಜ್ ಅವರ ವಿಶೇಷತೆಯಾಗಿತ್ತು. ಅವರ ತಂದೆ ಪಂಡಿತ್ ಮೋತಿರಾಮ್ ಅವರು ಖ್ಯಾತ ಮೇವತಿ ಘರಾನಾದ ಸಂಗೀತಗಾರರಾಗಿದ್ದರು.
ಪಂಡಿತ್ ಜಸ್‌ರಾಜ್ ಕೇವಲ ಮೂರರಿಂದ ನಾಲ್ಕು ವರ್ಷದವರಿದ್ದಾಗ ತಂದೆಯನ್ನು ಕಳೆದುಕೊಂಡರು. ತಂದೆಯಂತೆ ಇವರಿಗೂ ಸಂಗೀತದ ಆಸಕ್ತಿ ಮೂಡಿತ್ತು. ಎಳೆಯ ಪ್ರಾಯದಲ್ಲೇ ಸಂಗೀತವನ್ನು ಸೃಜಿಸಿಕೊಂಡ ಇವರು, ತಮ್ಮ 14ನೇ ವಯಸ್ಸಿನ ವರೆಗೆ ತಬಲಾ ಕಲಿಯುತ್ತಿದ್ದರು. ಬಳಿಕ ಕಂಠಸಿರಿಯತ್ತ ಚಿತ್ತ ಹರಿದ ಕಾರಣಕ್ಕೆ ಹಾಡುಗಾರಿಕೆಯನ್ನು ಪ್ರಾರಂಭಿಸಿದರು. ಮೂವತ್ತು ವಾರಗಳ ವರೆಗೆ ಶುದ್ಧ ಉಚ್ಚಾರಣೆ ಮತ್ತು ಸ್ಪಷ್ಟತೆಯನ್ನು ಇಟ್ಟುಕೊಂಡು ಮೇವತಿ ಘರಾನಾದ ವಿಶಿಷ್ಟತೆಯನ್ನು ಅವರು ಮುಂದಿನ ತಲೆಮಾರಿಗೆ ದಾಟಿಸುವಲ್ಲಿ ಯಶಸ್ವಿಯಾದರು.
ಚರ್ಮ ಬಡಿದದ್ದು ಸಾಕು ಎಂದು ಗದರಿಸಿದ್ದ ಗುರು!
14ನೇ ವಯಸ್ಸಿನಲ್ಲಿನ ಒಂದು ಘಟನೆಯು ನನ್ನನ್ನು ಹಾಡುವ ಕಡೆಗೆ ತಿರುಗಿಸಿತು. 1945ರಲ್ಲಿ ಲಾಹೋರ್‌ನಲ್ಲಿ ನಾನು ಕುಮಾರ ಗಂಧರ್ವ ಅವರೊಂದಿಗೆ ತಬಲಾ ಕುರಿತು ಸಂಗೀತ ಕಾರ್ಯಕ್ರಮ ಮಾಡುತ್ತಿದ್ದೆ. ಕಾರ್ಯಕ್ರಮದ ಮರುದಿನ ಕುಮಾರ್ ಗಂಧರ್ವ ಅವರು ಜಸರಾಜ್ ನೀವು ಸತ್ತ ಚರ್ಮವನ್ನು ಹೊಡೆದಿದ್ದೀರಿ, ರಾಗ್ಧಾರಿ ಬಗ್ಗೆ ನಿಮಗೆ ಏನೂ ತಿಳಿದಿಲ್ಲ ಎಂದು ಗದರಿಸಿದರು. ಆ ದಿನದಿಂದ ನಾನು ಎಂದಿಗೂ ತಬಲಾ ಮೇಲೆ ಕೈ ಹಾಕಿಲ್ಲ. ಬಳಿಕ ಹಾಡಲು ಪ್ರಾರಂಭಿಸಿದೆ.
ಇಂದೋರ್ ಸಾಕಷ್ಟು ಪ್ರಸಿದ್ಧವಾಗಿದೆ. ಉಸ್ತಾದ್ ಅಮೀರ್ ಖಾನ್, ಪಂಡಿತ್ ಕುಮಾರ್ ಗಂಧರ್ವ, ಲತಾ ಮಂಗೇಶ್ಕರ್, ಕಿಶೋರ್ ಕುಮಾರ್ ಸೇರಿದಂತೆ ಅನೇಕ ಗಣ್ಯರು ಇಲ್ಲಿನವರೇ ಇದ್ದಾರೆ. ಕೆಲವೊಮ್ಮೆ ನಾನು ಹರಿಯಾಣದಲ್ಲಿ ಜನಿಸಿದ್ದೇನೆ ಎಂದು ಭಾವಿಸುತ್ತೇನೆ. ದೇವರು ಇಂದೋರ್ನಲ್ಲಿಯೇ ಜನ್ಮ ನೀಡಿದ್ದರೆ, ಅವನಿಗೆ ಅವನ ಗೌರವ ದೊರೆಯುತ್ತಿತ್ತು ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿದ್ದರು.
ಖ್ಯಾತ ಜಸ್ರಂಗಿ ಜುಗಲ್ಬಂದಿ
ಪಂಡಿತ್ ಜಸರಾಜ್ ಅವರು ವಿಶೇಷವಾದ “ಜಸ್ರಂಗಿ ಜುಗಲ್ಬಂದಿ’ ಎಂಬ ಜುಗಲ್ಬಂದಿಸಂಯೋಜಿಸಿದ್ದರು. ಇದರಲ್ಲಿ ಸ್ತ್ರೀ ಮತ್ತು ಪುರುಷ ಗಾಯಕರು ವಿಭಿನ್ನ ರಾಗಗಳಲ್ಲಿ ಒಟ್ಟಿಗೆ ಹಾಡಲಾಗುತ್ತದೆ. ಬಳಿಕ ಈ ಜುಗಲ್ಬಂದಿಗೆ ಜಸರಂಗಿ ಎಂದು ಹೆಸರಿಡಲಾಯಿತು.
ಮಧುರಾಷ್ಟಕಂ ಪ್ರಿಯರಾಗಿದ್ದರು
ಇವರ ಪ್ರತಿಯೊಂದು ಕಾರ್ಯಕ್ರಮಗಳಲ್ಲಿಯೂ ಮಧುರಾಷ್ಟಕಂ ಹಾಡುತ್ತಿದ್ದರು. ಇದು ಇವರ ನೆಚ್ಚಿನ ಹಾಡೂ ಹೌದಾಗಿತ್ತು. ಇದನ್ನು ಪ್ರತಿ ಮನೆ ಮನೆಗಳಿಗೆ ತಲುಪಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ʼಅಧರಮ್ ಮಧುರಂ… ವದನಂ ಮಧುರಂ, ನಯನಂ ಮಧುರಂ… ಹಸಿತಂ ಮಧುರಂ… ʼ ಆ ಹಾಡಿನಲ್ಲಿ ಮತ್ತೆ ಮತ್ತೆ ನೆನಪಿಗೆ ಬರುವಂತಹ ಸಾಲುಗಳು.
ಗ್ರಹಕ್ಕೆ ಜಸ್ರಾಜ್ ಹೆಸರು
ಸೆಪ್ಟೆಂಬರ್ 2019, ಪಂಡಿತ್ ಜಸರಾಜ್ ಅವರಿಗೆ ಅಮೆರಿಕ ಒಂದು ವಿಶಿಷ್ಟ ಗೌರವವನ್ನು ನೀಡಿತ್ತು. 13 ವರ್ಷಗಳ ಹಿಂದೆ ಪತ್ತೆಯಾದ ಗ್ರಹಕ್ಕೆ ಅವರ ಹೆಸರನ್ನು ಇಡಲಾಗಿತ್ತು. ನಾಸಾ ಮತ್ತು ಅಂತಾರಾಷ್ಟ್ರೀಯ ಖಗೋಳ ಒಕ್ಕೂಟದ ವಿಜ್ಞಾನಿಗಳು ಈ ಗ್ರಹವನ್ನು ಕಂಡುಹಿಡಿದಿದ್ದರು. ಈ ಗ್ರಹದ ಸಂಖ್ಯೆ ಪಂಡಿತ್ ಜಸ್‌ರಾಜ್ ಅವರ ಜನ್ಮ ದಿನಾಂಕಕ್ಕೆ ಹತ್ತಿರವಾಗಿತ್ತು. ಅವರ ಜನ್ಮ ದಿನಾಂಕ 28/01/1930 ಮತ್ತು ಗ್ರಹದ ಸಂಖ್ಯೆ 300128 ಎಂದು ನಾಸಾ ಹೇಳಿತ್ತು. ಇನ್ನುಮುಂದೆ ಪಂಡಿತ್ ಜಸ್‌ರಾಜ್ ಗ್ರಹವು ನಮ್ಮ ಸೌರಮಂಡಲದಲ್ಲಿ ಗುರು ಮತ್ತು ಮಂಗಳ ಗ್ರಹಗಳ ನಡುವೆ ಸೂರ್ಯನನ್ನು ಪರಿಭ್ರಮಿಸುತ್ತಾ ಇರಲಿದ್ದಾರೆ.
7 ಖಂಡಗಳಲ್ಲಿ ಸಾಹಿತ್ಯ ಪ್ರದರ್ಶನ
2012ರಲ್ಲಿ ಪಂಡಿತ್ ಜಸ್‌ರಾಜ್ ಅವರು ಅಂಟಾಕ್ಟಿìಕಾದಲ್ಲಿ ಒಂದು ವಿಶಿಷ್ಟ ಸಾಧನೆ ಮಾಡಿದ್ದರು. ತಮ್ಮ 82ನೇ ವಯಸ್ಸಿನಲ್ಲಿ ಅವರು ಅಂಟಾಕ್ಟಿìಕಾದ ದಕ್ಷಿಣ ಧ್ರುವದಲ್ಲಿ ಪ್ರದರ್ಶನ ನೀಡಿದ್ದರು. ಇದರೊಂದಿಗೆ, ಏಳು ಖಂಡಗಳಲ್ಲಿ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಪಂಡಿತ್ ಜಸ್‌ರಾಜ್ ಅವರು ಜನವರಿ 8, 2012ರ ಜನವರಿ 8ರಂದು ಅಂಟಾಕ್ಟಿಕಾ ಕರಾವಳಿಯ “ಸೀ ಸ್ಪಿರಿಟ…’ ಎಂಬ ವಿಹಾರ ನೌಕೆಯಲ್ಲಿ ಹಾಡುವ ಕಾರ್ಯಕ್ರಮವನ್ನು ಪ್ರದರ್ಶಿಸಿದರು. ಪಂಡಿತ್ ಜಸ್‌ರಾಜ್ ಈ ಹಿಂದೆ 2010 ರಲ್ಲಿ ಪತ್ನಿ ಮಧುರಾ ಅವರೊಂದಿಗೆ ಉತ್ತರ ಧ್ರುವಕ್ಕೆ ಭೇಟಿ ನೀಡಿದ್ದರು.
ಹತ್ತು ಹಲವು ಪುರಸ್ಕಾರಗಳು
ಭಾರತದ ಸರ್ವೋತ್ಛ ನಾಗರಿಕ ಪ್ರಶಸ್ತಿಗಳಾದ ಪದ್ಮಶ್ರೀ ಹಾಗೂ ಪದ್ಮಭೂಷಣ್ ನೀಡುವ ಮೂಲಕ ಅವರನ್ನು ಗೌರವಿಸಲಾಗಿತ್ತು. 80 ವರ್ಷಗಳ ಕಾಲ ಸಂಗೀತದೊಂದಿಗೆ ವೃತ್ತಿಜೀವನ ನಡೆಸಿದ ಅವರು ಪದ್ಮಶ್ರೀ, ಪದ್ಮಭೂಷಣ್ ಮತ್ತು ಪದ್ಮವಿಭೂಷಣ್ ಸೇರಿದಂತೆ ವಿವಿಧ ಪ್ರತಿಷ್ಠಿತ ಪ್ರಶಸ್ತಿಗಳು ಮತ್ತು ಗೌರವಗಳನ್ನು ಪಡೆದಿದ್ದಾರೆ. ಇವರು ಖ್ಯಾತ ಚಲನಚಿತ್ರ ನಿರ್ದೇಶಕ ವಿ.ಶಾಂತಾರಾಮ್ ಅವರ ಪುತ್ರಿ ಮಧುರಾ ಶಾಂತಾರಾಮ್ ಅವರನ್ನು ವಿವಾಹವಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Mohan Bhagwat; ತಿಳಿವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.