ಅಭ್ಯಾಸ ಪಂದ್ಯಗೆದ್ದ ಇಂಗ್ಲೆಂಡ್
Team Udayavani, Jan 11, 2017, 3:45 AM IST
ಮುಂಬಯಿ: ಮಂಗಳವಾರ ನಡೆದ ಮೊದಲ ಅಭ್ಯಾಸ ಪಂದ್ಯದಲ್ಲಿ ಇಂಗ್ಲೆಂಡ್ ಇಲೆವೆನ್ 3 ವಿಕೆಟ್‌ಗಳಿಂದ ಭಾರತ “ಎ’ ತಂಡವನ್ನು ಸೋಲಿಸಿದೆ.
ಬ್ಯಾಟಿಂಗಿಗೆ ಇಳಿಸಲ್ಪಟ್ಟ ಧೋನಿ ಪಡೆ 5 ವಿಕೆಟಿಗೆ 304 ರನ್ ಪೇರಿಸಿದರೆ, ಮಾರ್ಗನ್ ಬಳಗ 48.5 ಓವರ್‌ಗಳಲ್ಲಿ 7 ವಿಕೆಟಿಗೆ 307 ರನ್ ಬಾರಿಸಿ ಗೆದ್ದು ಬಂದಿತು.
ಆರಂಭಿಕರಾದ ಜಾಸನ್ ರಾಯ್ (62), ಅಲೆಕ್ಸ್ ಹೇಲ್ಸ್ (40), ವನ್‌ಡೌನ್ ಬ್ಯಾಟ್ಸ್‌ಮನ್ ಸ್ಯಾಮ್ ಬಿಲ್ಲಿಂಗ್ಸ್ (93), ಜಾಸ್ ಬಟ್ಲರ್ (46), ಲಿಯಮ್ ಡಾಸನ್ (41) ಇಂಗ್ಲೆಂಡ್ ಚೇಸಿಂಗ್‌ನಲ್ಲಿ ಮಹತ್ವದ ಪಾತ್ರ ವಹಿಸಿದರು. ಆತಿಥೇಯರ ಪರ ಕುಲದೀಪ್ ಯಾದವ್ 5 ವಿಕೆಟ್ ಕಿತ್ತರು. ಅಂಬಾಟಿ ರಾಯುಡು ಶತಕ ವ್ಯರ್ಥವಾಯಿತು.
ರಾಯುಡು ಶತಕದಾಟ
ಭಾರತ ತಂಡದ ಆಕರ್ಷಣೆಯೆಂದರೆ ಅಂಬಾಟಿ ರಾಯುಡು ಅವರ ಶತಕದಾಟ. ಇಂಗ್ಲೆಂಡ್ ಎದುರಿನ ಯಾವುದೇ ಸರಣಿಯಲ್ಲಿ ಭಾರತ ತಂಡದಲ್ಲಿ ಸ್ಥಾನವನ್ನೇ ಸಂಪಾದಿಸದ ರಾಯುಡು 97 ಎಸೆತಗಳಿಂದ ಭರ್ತಿ 100 ರನ್ ಬಾರಿಸಿ ನಿವೃತ್ತರಾದರು. ಇದರಲ್ಲಿ 11 ಬೌಂಡರಿ ಹಾಗೂ ಒಂದು ಸಿಕ್ಸರ್ ಒಳಗೊಂಡಿತ್ತು.
ಗಾಯಾಳಾಗಿ ಚೇತರಿಸಿದ ಆರಂಭಕಾರ ಶಿಖರ್ ಧವನ್, ಬಹಳ ಕಾಲದ ಬಳಿಕ ಏಕದಿನ ತಂಡಕ್ಕೆ ಮರಳಿದ ಯುವರಾಜ್ ಸಿಂಗ್ ಹಾಗೂ ಕೊನೆಯ ಸಲ ಭಾರತ ತಂಡವೊಂದರ ಚುಕ್ಕಾಣಿ ಹಿಡಿದ ಮಹೇಂದ್ರ ಸಿಂಗ್ ಧೋನಿ ಅವರೆಲ್ಲ ಅರ್ಧ ಶತಕ ಬಾರಿಸಿ ಉತ್ತಮ ಬ್ಯಾಟಿಂಗ್ ಅಭ್ಯಾಸ ನಡೆಸಿದರು. ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದು ಓಪನರ್ ಮನ್‌ದೀಪ್ ಸಿಂಗ್ (8) ಮತ್ತು ಸಂಜು ಸ್ಯಾಮ್ಸನ್ ಮಾತ್ರ (0).
ದ್ವಿತೀಯ ವಿಕೆಟಿಗೆ ಜತೆಗೂಡಿದ ಧವನ್-ರಾಯುಡು 111 ರನ್ ಪೇರಿಸಿ ಇಂಗ್ಲೆಂಡ್ ದಾಳಿಗೆ ಸವಾಲಾದರು. ಧವನ್ ಗಳಿಕೆ 84 ಎಸೆತಗಳಿಂದ 63 ರನ್ (8 ಬೌಂಡರಿ, 1 ಸಿಕ್ಸರ್). ಅಭಿಮಾನಿಗಳಲ್ಲಿ ವಿಪರೀತ ಕಾತರ, ನಿರೀಕ್ಷೆ ಮೂಡಿಸಿದ್ದ ಯುವರಾಜ್ ಸಿಂಗ್ 48 ಎಸೆತಗಳಿಂದ 56 ರನ್ ಸಿಡಿಸಿದರು. ಯುವಿ ಇನ್ನಿಂಗ್ಸಿನಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಯಲ್ಪಟ್ಟಿತು.
5ನೇ ಕ್ರಮಾಂಕದಲ್ಲಿ ಬ್ಯಾಟ್ ಹಿಡಿದು ಬಂದ ಧೋನಿ 40 ಎಸೆತ ಗಳಿಂದ 68 ರನ್ ಬಾರಿಸಿ ಅಜೇಯರಾಗಿ ಉಳಿದರು. 8 ಬೌಂಡರಿ, 2 ಸಿಕ್ಸರ್ ಬಾರಿಸಿ ಅಭಿಮಾನಿಗಳನ್ನು ರಂಜಿಸಿದರು.
ಸಂಕ್ಷಿಪ್ತ ಸ್ಕೋರ್: ಭಾರತ “ಎ’-5 ವಿಕೆಟಿಗೆ 304 (ರಾಯುಡು 100, ಧೋನಿ ಔಟಾಗದೆ 68, ಧವನ್ 63, ಯುವರಾಜ್ 56, ವಿಲ್ಲಿ 55ಕ್ಕೆ 2, ಬಾಲ್ 61ಕ್ಕೆ 2). ಇಂಗ್ಲೆಂಡ್ ಇಲೆವೆನ್-48.5 ಓವರ್‌ಗಳಲ್ಲಿ 7 ವಿಕೆಟಿಗೆ 307 (ಬಿಲ್ಲಿಂಗ್ಸ್ 93, ರಾಯ್ 62, ಬಟ್ಲರ್ 46, ಡಾಸನ್ 41, ಕುಲದೀಪ್ 60ಕ್ಕೆ 5).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ
Mumbai: 13000 ಸಂಬಳ ಪಡೆಯುವ ಗುತ್ತಿಗೆ ನೌಕರನಿಂದ ಗೆಳತಿಗೆ BMWಕಾರು, 4BHK ಫ್ಲಾಟ್ ಗಿಫ್ಟ್
Sonu Sood: ನನಗೆ ಸಿಎಂ, ಡಿಸಿಎಂ ಹುದ್ದೆಗೆ ಆಫರ್ ಬಂದಿತ್ತು ಆದರೆ, ಸೋನು ಸೂದ್ ಹೇಳಿದ್ದೇನು?
Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Controversy: ಕಾಂಗ್ರೆಸ್ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Ullala: ಗ್ಯಾಸ್ ಸಿಲಿಂಡರ್ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.