ಪನ್ನೀರ್ ಸೆಲ್ವಂ ಕ್ಯಾಂಪಿಗೆ ಇಂದು ಶಶಿಕಲಾ ಬಣದ 30 ಶಾಸಕರ ಸೇರ್ಪಡೆ ?
Team Udayavani, Feb 16, 2017, 10:59 AM IST
ಚೆನ್ನೈ : ಉಸ್ತುವಾರಿ ಮುಖ್ಯಮಂತ್ರಿ ಓ. ಪನ್ನೀರಸೆಲ್ವಂ ಅವರ ಬಣಕ್ಕೆ ಇಂದು ಶಶಿಕಲಾ ಬಣದಿಂದ ಕನಿಷ್ಠ 30 ಶಾಸಕರು ಹರಿದು ಬರುವ ಸಾಧ್ಯತೆ ಇದೆ ಎನ್ನಲಾಗಿದೆ.
ಕೆ ಪಳನಿಸ್ವಾಮಿ ಅವರು ರಾಜ್ಯಪಾಲ ಸಿ ವಿದ್ಯಾಸಾಗರ ರಾವ್ ಅವರನ್ನು ಭೇಟಿಯಾದ ಒಂದು ದಿನದ ಬಳಿಕ ತಮಿಳು ನಾಡು ರಾಜ್ಯಪಾಲರು ಎಐಎಡಿಎಂಕೆ ಶಾಸಕಾಂಗ ಪಕ್ಷದ ನಾಯಕನನ್ನು ಸರಕಾರ ರಚಿಸುವಂತೆ ಇಂದು ಗುರುವಾರ ಕರೆಯುವ ಸಾಧ್ಯತೆ ಇದೆ.
ಪಳನಿ ಸ್ವಾಮಿ ಅವರು ಎಐಎಡಿಎಂಕೆ ಪ್ರಧಾನ ಕಾರ್ಯದಶಿರ ವಿ ಕೆ ಶಶಿಕಲಾ ನಟರಾಜನ್ ಕ್ಯಾಂಪಿನ ಭಾಗವಾಗಿದ್ದಾರೆ.
ರಾಜ್ಯಪಾಲರು ಎದುರಾಳಿ ಬಣದ ನೇತಾರನಾಗಿರುವ, ಉಸ್ತುವಾರಿ ಮುಖ್ಯಮಂತ್ರಿ ಓ ಪನ್ನೀರ್ ಸೆಲ್ವಂ ಅವರನ್ನು ಕೂಡ ಭೇಟಿಯಾಗಿರುವುದು ಗಮನಾರ್ಹ ವಿದ್ಯಮಾನವೆಂದು ತಿಳಿಯಲಾಗಿದೆ.
ನಿನ್ನೆ ಬುಧವಾರ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ಅವರು ಭ್ರಷ್ಟಾಚಾರ ಪ್ರಕರಣದಲ್ಲಿ ಅಪರಾಧಿ ಎಂದು ಘೋಷಿಸಲ್ಪಟ್ಟ ಕಾರಣ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಮರಳಿದ್ದಾರೆ.
ಈ ನಡುವೆ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು “ಮೊದಲ ದಿನದಂದಲೇ ನಾನು ಶಶಿಕಲಾ ಅಥವಾ ಪಳನಿಸ್ವಾಮಿ ಅವರಿಗೆ ರಾಜ್ಯಪಾಲರು ಪ್ರಮಾಣ ವಚನವನ್ನು ಬೋಧಿಸಿ ಒಂದು ವಾರದೊಳಗೆ ಸದನ ಬಲಾಬಲ ಪರೀಕ್ಷೆಯನ್ನು ನಡೆಸಬೇಕೆಂದು ಹೇಳಿದ್ದೆ’ ಎಂದು ಇಂದು ಬೆಳಗ್ಗೆ ಟ್ವೀಟ್ ಮಾಡಿದ್ದಾರೆ.
ಇದೇ ವೇಳೆ ಪನ್ನೀರಸೆಲ್ವಂ ಕ್ಯಾಂಪಿನ ಹಿರಿಯ ನಾಯಕರೋರ್ವರು, ಇಂದು ಗಮನಾರ್ಹ ಸಂಖ್ಯೆಯ ಶಾಸಕರು ತಮ್ಮ ಬಣವನ್ನು ಸೇರಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಮಾತ್ರವಲ್ಲ ಲೋಕೋಪಯೋಗಿ ಸಚಿವ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರಿಗೆ ಸರಕಾರ ರಚಿಸುವಂತೆ ರಾಜ್ಯಪಾಲರು ಕೇಳಿಕೊಳ್ಳಲಾರರು ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
BBK11: ಕ್ಯಾಪ್ಟನ್ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.