ಪುರಚ್ಚಿ ತಲೈವಿ ಆಡಳಿತ ಸ್ಥಾಪಿಸುವ ತನಕ ಧರ್ಮಯುದ್ಧ: ಪನ್ನೀರ್ ಶಪಥ
Team Udayavani, Feb 16, 2017, 4:26 PM IST
ಚೆನ್ನೈ : ನಿರ್ಗಮನ ಮುಖ್ಯಮಂತ್ರಿ ಓ ಪನ್ನೀರ್ ಸೆಲ್ವಂ ಅವರಿಂದು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ ಕೆ ಶಶಿಕಲಾ ನಟರಾಜನ್ ಹಾಗೂ ಆಕೆಯ ಕುಟುಂಬದ ವಿರುದ್ಧದ ಧರ್ಮ ಯುದ್ಧವನ್ನು, ರಾಜ್ಯದಲ್ಲಿ ಜೆ ಜಯಲಲಿತಾ ಅವರ ಆಡಳಿತೆಯನ್ನು ಪುನರ್ ಸ್ಥಾಪಿಸುವ ತನಕವೂ, ಮುಂದುವರಿಸುವುದಾಗಿ ಶಪಥ ಮಾಡಿದ್ದಾರೆ.
“ಪಕ್ಷ ಮತ್ತು ಸರಕಾರ ಪುನಃ ಏಕ ಕುಟುಂಬದ ಕೈವಶವಾಗುವುದನ್ನು ನಾವೆಲ್ಲರೂ ಒಗ್ಗೂಡಿ ತಡೆಯೋಣ; ರಾಜ್ಯದ ಜನರ ಆಶೋತ್ತರಗಳಿಗೆ ಅನುಗುಣವಾಗಿ ಜನತಾ ಸರಕಾರವನ್ನು ಸ್ಥಾಪಿಸಲು ನಾವು ಶ್ರಮಿಸೋಣ; ಅಲ್ಲಿಯ ವರೆಗೂ ನಮ್ಮ ಹೋರಾಟವನ್ನು ನಾವು ಜತೆಗೂಡಿ ಮುಂದುವರಿಸೋಣ’ ಎಂದು ಪನ್ನೀರ್‌ಸೆಲ್ವಂ ಹೇಳಿದರು.
“ಪುರಚ್ಚಿ ತೈಲವಿ ಅಮ್ಮಾ ಸರಕಾರ ಪುನರ್ ಸ್ಥಾಪನೆಯಾಗುವ ತನಕವೂ ನಾವು ಧರ್ಮ ಯುದ್ಧವನ್ನು ಮುಂದುವರಿಸೋಣ’ ಎಂದು ಪನ್ನೀರ್ ಸೆಲ್ವಂ ಅವರು, ರಾಜ್ಯಪಾಲ ಸಿ ವಿದ್ಯಾಸಾಗರ ರಾವ್ ಅವರು ಶಶಿಕಲಾ ನಿಷ್ಠ ಹಾಗೂ ಎಐಎಡಿಎಂಕೆ ಶಾಸಕಾಂಗ ಪಕ್ಷದ ನಾಯಕನಾಗಿರುವ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರಿಗೆ ಸರಕಾರ ರಚಿಸುವಂತೆ ಆಹ್ವಾನ ನೀಡಿದ ಬಳಿಕದಲ್ಲಿ ಹೊರಗೆಡಹಿದ ತಮ್ಮ ಮೊದಲ ಪ್ರತಿಕ್ರಿಯೆಯಲ್ಲಿ ಹೇಳಿದರು.
ಮಾಜಿ ಸಚಿವ ಕೆ ಪಿ ಮುನುಸಾಮಿ ಸಹಿತವಾಗಿ ತಮ್ಮ ಪಕ್ಷದ ನಾಯಕರೊಡಗೂಡಿ ಮಾಧ್ಯಮದೊಂದಿಗೆ ಮಾತನಾಡಿದ ಪನ್ನೀರ್ ಸೆಲ್ವಂ, ತಮ್ಮನ್ನು ಬೆಂಬಲಿಸಿದ ಹಿಂಬಾಲಕರು ಹಾಗೂ ಜನರಿಗೆ ಕೃತಜ್ಞತೆ ಹೇಳಿದರು.
ಜಯಲಲಿತಾ ಅವರ ಜೀವಂತವಿದ್ದಾಗ ಎರಡು ಬಾರಿ ತಾತ್ಕಾಲಿಕ ಮುಖ್ಯಮಂತ್ರಿಯಾಗಿ, ಜಯಲಲಿತಾ ಅಪೇಕ್ಷೆ ಪ್ರಕಾರ, ಕರ್ತವ್ಯ ನಿಭಾಯಿಸಿದ್ದ ಪನ್ನೀರ್ ಸೆಲ್ವಂ, “ಅಮ್ಮಾ ಅನುಯಾಯಿಗಳ ಬೆಂಬಲದಿಂದ ನಾವು ಈ ಹೋರಾಟವನ್ನು ಜಯಿಸಿಯೇ ತೀರುವೆವು’ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
MUST WATCH
ಹೊಸ ಸೇರ್ಪಡೆ
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.