ಹೆತ್ತವರು ಜಗಳಗಂಟ ಮಕ್ಕಳನ್ನು ಹೊರಗಟ್ಟಬಹುದು: ದಿಲ್ಲಿ ಹೈಕೋರ್ಟ್
Team Udayavani, Mar 16, 2017, 12:03 PM IST
ಹೊಸದಿಲ್ಲಿ : ಆಸ್ತಿಪಾಸ್ತಿಗಾಗಿ ಹೆತ್ತವರನ್ನು ಹೊಡೆದು ಬಡಿದು, ಮನೆಯಿಂದ ಹೊರಹಾಕುವುದಾಗಿ ಬೆದರಿಸಿ ಹಿಂಸಿಸುವ ಪ್ರಾಪ್ತ ವಯಸ್ಸಿನ ಗಂಡು ಅಥವಾ ಹೆಣ್ಣು ಮಕ್ಕಳನ್ನು, ವಯಸ್ಸಾದ ಹೆತ್ತವರು ತಮ್ಮೊಂದಿಗೆ ಮನೆಯಲ್ಲಿ ಇರಿಸಿಕೊಳ್ಳಬೇಕಾಗಿಲ್ಲ; ಅಂತಹ ಹಿಂಸ್ರ ಮಕ್ಕಳನ್ನು ಹೆತ್ತವರು ನಿರ್ದಾಕ್ಷಿಣ್ಯವಾಗಿ ಮನೆಯಿಂದ ಹೊರಗಟ್ಟಬಹುದು ಎಂದು ದಿಲ್ಲಿ ಹೈಕೋರ್ಟ್ ಹೇಳಿದೆ.
ವಯಸ್ಸಾದ ಹೆತ್ತವರು ಸ್ವಂತ ಮನೆಯಲ್ಲೇ ವಾಸಿಸಿಕೊಂಡಿರಲಿ, ಬಾಡಿಗೆ ಮನೆಯಲ್ಲೇ ವಾಸಿಸಿಕೊಂಡಿರಲಿ – ಅವರು ವಯಸ್ಸಿಗೆ ಬಂದ ತಮ್ಮ ಹಿಂಸ್ರ ಗಂಡು ಅಥವಾ ಹೆಣ್ಣು ಮಕ್ಕಳನ್ನು ತಮ್ಮ ಜತೆಗೆ ಮನೆಯಲ್ಲಿ ಇರಿಸಿಕೊಳ್ಳಬೇಕಾದ ಕಾನೂನು ಬದ್ಧತೆಯನ್ನು ಹೊಂದಿರುವುದಿಲ್ಲ; ವಯಸ್ಸಾದ ತಾವು ತಮ್ಮ ಮನೆಯಲ್ಲಿ ಶಾಂತಿಯುತ ಜೀವನವನ್ನು ನಡೆಸುವುದಕ್ಕಾಗಿ ಪ್ರಾಯ ಪ್ರಬುದ್ಧರಾಗಿರುವ ತಮ್ಮ ಹಿಂಸ್ರ ಮಕ್ಕಳನ್ನು ಅವರು ಮನೆಯಿಂದ ಹೊರಗಟ್ಟಬಹುದಾಗಿದೆ ಎಂದು ದಿಲ್ಲಿ ಹೈಕೋರ್ಟಿನ ಜಸ್ಟಿಸ್ ಮನಮೋಹನ್ ಅವರು 2007ರ ಹೆತ್ತವರು ಹಾಗೂ ಹಿರಿಯ ನಾಗರಿಕರ ಕಲ್ಯಾಣ ಮತ್ತು ನಿರ್ವಹಣೆ ಕಾಯಿದೆಯಲ್ಲಿನ ಅಂಶಗಳನ್ನು ವ್ಯಾಖ್ಯಾನಿಸುತ್ತಾ ಈ ರೀತಿಯಾಗಿ ಹೇಳಿದರು.
ಮಾತ್ರವಲ್ಲದೆ ಕಾಯಿದೆಯ ಸೆ.32 ಹಾಗೂ ಸೆ.22(2)ರಡಿ ಈ ಸಂಬಂಧದ ನಿಯಮಗಳಿಗೆ ಸೂಕ್ತ ತಿದ್ದುಪಡಿಯನ್ನು ಮಾಡುವಂತೆ ಎನ್ಸಿಟಿ ಗೆ ಆದೇಶಿಸಿದರು.
ಪ್ರಾಯಪ್ರಬುದ್ಧ ಮಗನು, ಮದುವೆಯಾಗಿರಲಿ ಅಥವಾ ಅಗದೇ ಇರಲಿ, ಆತನಿಗೆ ತನ್ನ ಹೆತ್ತವರ ಸ್ವಂತ ಮನೆಯಲ್ಲಿ ಅಥವಾ ಅವರು ವಾಸಿಸಿಕೊಂಡಿರುವ ಮನೆಯಲ್ಲಿ, ಅವರ ಇಚ್ಛೆಗೆ ವಿರುದ್ಧ, ಜೀವಿಸಿಕೊಂಡಿರುವ ಕಾನೂನುಸಮ್ಮತ ಹಕ್ಕನ್ನು ಹೊಂದಿರುವುದಿಲ್ಲ ಎಂದು ಕಳೆದ ವರ್ಷ 2016ರ ನವೆಂಬರ್ನಲ್ಲಿ ಕೋರ್ಟ್ ತೀರ್ಪು ನೀಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.