ಕಾರ್ಮಿಕ ಸುಧಾರಣೆ ಪರ್ವ
ಸಂಸತ್‌ನಲ್ಲಿ ವೇತನ ಸಂಹಿತೆ ಮಸೂದೆಗೆ ಒಪ್ಪಿಗೆ
Team Udayavani, Aug 3, 2019, 5:46 AM IST
ಹೊಸದಿಲ್ಲಿ: ದೇಶದ ಕಾರ್ಮಿಕ ಕ್ಷೇತ್ರದ ಸುಧಾರಣೆ ನಿಟ್ಟಿನಲ್ಲಿ ಮಹತ್ವದ್ದು ಎಂದು ಬಣ್ಣಿಸಲಾಗಿರುವ ವೇತನ ಸಂಹಿತೆ ಮಸೂದೆ (ಕೋಡ್ ಆಫ್ ವೇಜಸ್) ರಾಜ್ಯ ಸಭೆ ಯಲ್ಲಿ ಅಂಗೀಕಾರವಾಗಿದೆ. ಲೋಕಸಭೆಯಲ್ಲಿ ಜು. 30 ರಂದೇ ಇದಕ್ಕೆ ಅನುಮೋದನೆ ದೊರೆತಿತ್ತು.
ಮಸೂದೆ ಪರ 85 ಮತ್ತು ವಿರುದ್ಧವಾಗಿ 8 ಮತಗಳು ಬಿದ್ದಿವೆ. ಕನಿಷ್ಠ ವೇತನ ಕಾಯ್ದೆ, ವೇತನ ಕಾಯ್ದೆ, ಬೋನಸ್ ಪಾವತಿ ಕಾಯ್ದೆ ಮತ್ತು ಸಮಾನ ವೇತನ ಕಾಯ್ದೆಗಳನ್ನು ಸೇರಿಸಿಕೊಂಡು ಹೊಸ ಮಸೂದೆ ಸಿದ್ಧಪಡಿಸಲಾಗಿದೆ. ಇದರಿಂದಾಗಿ 50 ಕೋಟಿ ಕಾರ್ಮಿಕರಿಗೆ ಅನುಕೂಲವಾಗಲಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ಹೇಳಿದ್ದಾರೆ. ಸಂಸತ್‌ನ ಸ್ಥಾಯೀ ಸಮಿತಿ ಸೂಚಿಸಿದ 24 ತಿದ್ದುಪಡಿಗಳ ಪೈಕಿ 17ನ್ನು ಸ್ವೀಕರಿಸಿರುವುದಾಗಿ ಹೇಳಿದ್ದಾರೆ. ಇದೇ ಮೊದಲ ಬಾರಿಗೆ ದೇಶದಲ್ಲಿ ಕನಿಷ್ಠ ವೇತನವನ್ನು ಪ್ರತಿ ಐದು ವರ್ಷಗಳಿಗೆ ಒಮ್ಮೆ ಪರಿಷ್ಕರಿಸಲು ಕ್ರಮ ಕೈಗೊಳ್ಳಲಾಗಿದೆ. ರಾಜ್ಯ ಸರಕಾರಗಳು ಪ್ರತಿ 2 ಅಥವಾ 3 ವರ್ಷಗಳಿಗೆ ಅದನ್ನು ಪರಿಷ್ಕರಿಸಬಹುದು ಎಂದಿದ್ದಾರೆ ಗಂಗ್ವಾರ್.
ವೇತನ ಸಂಹಿತೆ ಮಸೂದೆವನ್ನು 2017ರ ಆ.10ರಂದು ಲೋಕಸಭೆಯಲ್ಲಿ ಮಂಡಿಸಲಾಗಿತ್ತು, ಅದನ್ನು ಸಂಸತ್‌ನ ಸ್ಥಾಯೀ ಸಮಿತಿಗೆ ಒಪ್ಪಿಸಲಾಗಿತ್ತು. 2018ರ ಡಿಸೆಂಬರ್‌ನಲ್ಲಿ ಸಮಿತಿ ವರದಿ ಸಲ್ಲಿಸಿತ್ತು.
ಅಣೆಕಟ್ಟು ಮಸೂದೆಕ್ಕೆ ಒಪ್ಪಿಗೆ: ಲೋಕಸಭೆಯಲ್ಲಿ ಅಣೆಕಟ್ಟುಗಳ ಸುರಕ್ಷತೆಗಾಗಿ ಇರುವ ಮಸೂದೆಕ್ಕೆ ಒಪ್ಪಿಗೆ ಸೂಚಿಸಲಾಗಿದೆ. ದೇಶದಲ್ಲಿ ಇರುವ ಅಣೆಕಟ್ಟುಗಳ ಉಸ್ತು ವಾರಿ, ನಿರ್ವಹಣೆ, ಪರಿಶೀಲನೆಗಾಗಿ ಅದನ್ನು ರಚಿಸಲಾಗಿದೆ. ಅದಕ್ಕಾಗಿ ರಾಷ್ಟ್ರೀಯ ಸಮಿತಿ ರಚಿಸಲಾಗುತ್ತದೆ. ಕೇಂದ್ರ ಜಲ ಆಯೋಗದ ಅಧ್ಯಕ್ಷರು ಅದರ ಮುಖ್ಯಸ್ಥರಾಗಿರುತ್ತಾರೆ. 7 ಮಂದಿ ರಾಜ್ಯಗಳ ಪ್ರತಿನಿಧಿಗಳೂ ಇರುತ್ತಾರೆ ಮತ್ತು ಮೂವರು ಅಣೆಕಟ್ಟು ತಜ್ಞರು ಇರುತ್ತಾರೆ. ರಾಷ್ಟ್ರ ಮತ್ತು ರಾಜ್ಯಗಳ ಮಟ್ಟದಲ್ಲಿ ಅಣೆಕಟ್ಟು ಸುರಕ್ಷಾ ಪ್ರಾಧಿಕಾರಗಳ ರಚನೆಗೂ ಮಸೂದೆದಲ್ಲಿ ಅವಕಾಶ ಇದೆ.
ಸುಮಲತಾ ಬೆಂಬಲ: ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಮಾತನಾಡಿ, ‘ಸ್ವತಂತ್ರ ಸಂಸದರಿಗೆ ಕಡಿಮೆ ಅವಧಿ ನೀಡಲಾಗುತ್ತದೆ. ಅಣೆಕಟ್ಟು ಸುರಕ್ಷತಾ ಮಸೂದೆಕ್ಕೆ ನನ್ನ ಬೆಂಬಲ ಇದೆ’ ಎಂದರು.
ಉತ್ತರದಾಯಿತ್ವ ಇರಲಿ: ಅಣೆಕಟ್ಟುಗಳ ಸುರಕ್ಷತೆ ಮತ್ತು ಮಾಲಕತ್ವಕ್ಕೆ ಸಂಬಂಧಿಸಿ ಅಧಿಕಾರಿಗಳಿಗೆ ಉತ್ತರದಾಯಿತ್ವ ಇರುವಂತೆ ಮಾಡಬೇಕು ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ. ಸೂಚಿಸ ಲಾಗುವ ನಿಯಮಗಳ ಜಾರಿಗೆ ನಿರುತ್ಸಾಹ ತೋರಿದರೆ ಇಂಥ ಕ್ರಮಗಳು ಅಗತ್ಯ ಎಂದರು.
58 ಕಾನೂನು ರದ್ದು: ಕೇಂದ್ರ ಸರಕಾರದ ವ್ಯಾಪ್ತಿಯಲ್ಲಿ ಬರುವ 58 ಹಳೆಯ ಕಾನೂನುಗಳನ್ನು ರದ್ದು ಮಾಡುವ ನಿಟ್ಟಿನಲ್ಲಿ ಇರುವ ರದ್ದು ಮಾಡುವ ಮತ್ತು ತಿದ್ದುಪಡಿ ಮಸೂದೆ 2019ಕ್ಕೆ ರಾಜ್ಯಸಭೆ ಅನುಮೋದನೆ ನೀಡಿದೆ. ಧ್ವನಿಮತದಿಂದ ಅದಕ್ಕೆ ಸಮ್ಮತಿ ಸೂಚಿಸಲಾಗಿದೆ. ಸರಕಾರದ ಸಮಿತಿ 1,824 ಹಳೆಯ ಕಾನೂನುಗಳನ್ನು ಗುರುತಿಸಿದೆ. ಈ ಪೈಕಿ 1,428 ಕಾನೂನುಗಳನ್ನು ರದ್ದು ಮಾಡಲಾಗಿದೆ.
ಉಗ್ರ ಕೃತ್ಯಗಳೆಂದು ಪರಿಗಣಿಸಿ: ಮರ್ಯಾದೆಗೇಡು ಹತ್ಯೆ, ಗುಂಪು ಥಳಿತ ಕೃತ್ಯಗಳನ್ನು ಉಗ್ರ ಕೃತ್ಯಗಳೆಂದು ಪರಿಗಣಿಸ ಬೇಕು ಎಂದು ಲೋಕಸಭೆಯಲ್ಲಿ ಡಿಎಂಕೆ ಸಂಸದ ರವಿ ಕುಮಾರ್ ಒತ್ತಾಯಿಸಿದ್ದಾರೆ.
ಜಲಿಯನ್ ವಾಲಾ ಬಾಗ್ ಟ್ರಸ್ಟ್: ಕಾಂಗ್ರೆಸ್‌ಗಿಲ್ಲ ಸ್ಥಾನ
ಲೋಕಸಭೆ ಚುನಾವಣೆಗಳಲ್ಲಿ ಸೋತಿರುವ ಕಾಂಗ್ರೆಸ್‌ಗೆ ಮತ್ತೂಂದು ಹಿನ್ನಡೆಯಾಗಿದೆ. ಜಲಿಯನ್ ವಾಲಾ ಬಾಗ್ ರಾಷ್ಟ್ರೀಯ ಸ್ಮಾರಕದಲ್ಲಿ ಇನ್ನು ಕಾಂಗ್ರೆಸ್ ಅಧ್ಯಕ್ಷರು ಟ್ರಸ್ಟಿ ಹುದ್ದೆಯಲ್ಲಿ ಇರುವುದಿಲ್ಲ. ಅದರ ಬದಲಾಗಿ ಲೋಕಸಭೆಯಲ್ಲಿ ಎರಡನೇ ಅತ್ಯಂತ ದೊಡ್ಡ ಪಕ್ಷದ ನಾಯಕ ಟ್ರಸ್ಟಿಯಾಗಿರುತ್ತಾರೆ. ಅದಕ್ಕೆ ಸಂಬಂಧಿಸಿದ ಜಲಿಯನ್‌ವಾಲಾಬಾಗ್ ರಾಷ್ಟ್ರೀಯ ಸ್ಮಾರಕ (ತಿದ್ದುಪಡಿ) ಮಸೂದೆಕ್ಕೆ ಲೋಕಸಭೆ ಅನುಮೋದನೆ ನೀಡಿದೆ. ಕೇಂದ್ರ ಸಂಸ್ಕೃತಿ ಸಚಿವ ಪ್ರಹ್ಲಾದ್ ಪಟೇಲ್ ಮಸೂದೆ ಮಂಡಿಸಿದರು. ಅದರ ಬಗ್ಗೆ ಮಾತನಾಡುತ್ತಿರಬೇಕಾದರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಲೋಕಸಭೆಗೆ ಪ್ರವೇ ಶಿಸಿದರು. ಮಸೂದೆ ಪ್ರಕಾರ ಅದರ ನಿರ್ವಹಣೆಗೆ ಟ್ರಸ್ಟ್ ರಚಿಸುವ ಅವಕಾಶವನ್ನೂ ಕಲ್ಪಿಸಿಕೊಡುತ್ತದೆ. ಕೇಂದ್ರ ಸರಕಾರ ಮೂವರು ಟ್ರಸ್ಟಿಗಳನ್ನು 5 ವರ್ಷ ಕಾಲ ನೇಮಕ ಮಾಡುತ್ತದೆ. ಅವರನ್ನು ಮುಂದುವರಿಸುವ ಮತ್ತು ಅವಧಿಗಿಂತ ಮೊದಲೇ ಸದಸ್ಯತ್ವ ರದ್ದು ಮಾಡಲು ಸರಕಾರಕ್ಕೆ ಅಧಿಕಾರವಿದೆ. ಇದೇ ವಿಚಾರ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ಬಿಜೆಪಿ ಇತಿಹಾಸವನ್ನು ಪುನಾರಚಿಸಲು ಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಸದಸ್ಯರು ಆರೋಪಿಸಿ, ಸದನ ದಿಂದ ಹೊರನಡೆದರು. 1951ರಲ್ಲಿ ಜಾರಿಗೆ ಬಂದ ಕಾಯ್ದೆಗೆ ತಿದ್ದುಪಡಿ ಇದಾಗಿದೆ.
ವೇತನ ಸಂಹಿತೆ ಮಸೂದೆಯಲ್ಲಿ ಏನಿದೆ?
•ಕಾರ್ಮಿಕ ಒಕ್ಕೂಟಗಳು, ಉದ್ಯೋಗದಾತರು ಮತ್ತು ರಾಜ್ಯ ಸರಕಾರಗಳು ಸೇರಿ ದೇಶಾದ್ಯಂತ ವೇತನ ನಿಗದಿ ಮಾಡುತ್ತಾರೆ.
•ದಿನ, ವಾರ ಅಥವಾ ಪ್ರತಿ ತಿಂಗಳು ವೇತನ ನೀಡಿಕೆಯಲ್ಲಿ ಇರುವ ಸಮಸ್ಯೆಗೆ ಪರಿಹಾರ ಸಿಕ್ಕಿದಂತಾಗುತ್ತದೆ.
•ಮಹಿಳೆ, ಪುರುಷ ಅಥವಾ ತೃತೀಯ ಲಿಂಗಿ ಎಂಬ ಕಾರಣಕ್ಕೆ ವೇತನದಲ್ಲಿ ತಾರತಮ್ಯ ಮಾಡಲು ಅವಕಾಶ ಇರುವುದಿಲ್ಲ.
•ನಿಗದಿತ ಅವಧಿಗಿಂತ ಹೆಚ್ಚಿನ ವೇಳೆ ಕೆಲಸ ಮಾಡಿದಕ್ಕೆ ಅದಕ್ಕೆ ಹೆಚ್ಚುವರಿ ಭತ್ಯೆ (ಓವರ್ ಟೈಮ್) ನೀಡಬೇಕು.
•ವೇತನದಿಂದ ದಂಡ, ಕರ್ತವ್ಯಕ್ಕೆ ಹಾಜರಾಗದೇ ಇದ್ದರೆ, ವಸತಿ ಬಗ್ಗೆ ಮೊತ್ತ ಕಳೆದುಕೊಳ್ಳಲು ಅವಕಾಶ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.