60 ಹಳೆ ಕಾನೂನು ರದ್ದು ಮಾಡುವ ಮಸೂದೆ ಸಂಸತ್‌ನಲ್ಲಿ ಮಂಡನೆ
ಕಡಲ್ಗಳ್ಳತನ ನಿಗ್ರಹ ಮಸೂದೆ ಗೆ ಅಸ್ತು
Team Udayavani, Dec 20, 2022, 6:50 AM IST
ಹೊಸದಿಲ್ಲಿ: ಕಡಲ್ಗಳ್ಳತನಕ್ಕೆ ಸಂಬಂಧಿಸಿದ ಅಪರಾಧಗಳಿಗೆ ಜೀವಾವಧಿ ಶಿಕ್ಷೆ ಮತ್ತು ಮರಣದಂಡನೆ ವಿಧಿಸಲು ಅವಕಾಶ ಇರುವ ಮಸೂದೆ ಲೋಕಸಭೆಯಲ್ಲಿ ಸೋಮವಾರ ಅಂಗೀಕಾರವಾಗಿದೆ.
ಕಡಲ್ಗಳ್ಳತನ ನಿಗ್ರಹ ಮಸೂದೆಯನ್ನು ಲೋಕಸಭೆ ಸ್ಪೀಕರ್ ಧ್ವನಿ ಮತಕ್ಕೆ ಹಾಕಿದ್ದು, ಅದು ಅಂಗೀಕಾರವಾಗಿದೆ. “ಅಪರೂಪದ ಪ್ರಕರಣಗಳಲ್ಲಿ ಮಾತ್ರ ಮರಣದಂಡನೆ ಶಿಕ್ಷೆಯಾಗಬೇಕು ಎಂಬ ಸುಪ್ರೀಂ ಕೋರ್ಟ್ ಅವಲೋಕನವನ್ನು ಗಮನದಲ್ಲಿಟ್ಟುಕೊಂಡು ಹಾಗೂ ಮರಣದಂಡನೆ ವಿಧಿಸುವ ದೃಷ್ಟಿಯಿಂದ ಅನೇಕ ರಾಷ್ಟ್ರಗಳು ಆರೋಪಿ ಗಳನ್ನು ಹಸ್ತಾಂತರಿಸುವುದಿಲ್ಲ ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡು ಜೀವಾವಧಿ ಶಿಕ್ಷೆಯ ಆಯ್ಕೆಯನ್ನು ಸರಕಾರ ಸೇರಿಸಿದೆ,’ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಹೇಳಿದರು.
ಕಡಲ್ಗಳ್ಳತನ ನಿಗ್ರಹ ಮಸೂದೆಯನ್ನು 2019ರಲ್ಲಿ ಪ್ರಸ್ತಾವಿಸಲಾಗಿತ್ತು. ಸಂಸದೀಯ ಸಮಿತಿಯ ಪರಿಶೀಲನೆಗೆ ಒಳಗಾದ ಅನಂತರ ಸರಕಾರವು ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ತಿದ್ದುಪಡಿಗಳನ್ನು ತಂದಿತ್ತು.
10.09 ಲಕ್ಷ ಕೋಟಿ ಸಾಲ ಮನ್ನಾ: ಕಳೆದ 5 ಹಣಕಾಸು ವರ್ಷಗಳಲ್ಲಿ ಷೆಡ್ನೂಲ್ಡ್ ವಾಣಿಜ್ಯ ಬ್ಯಾಂಕ್‌ಗಳು ಒಟ್ಟು 10,09,511 ಕೋಟಿ ರೂ. ಸಾಲ ಮನ್ನಾ ಮಾಡಿವೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಗೆ ಮಾಹಿತಿ ನೀಡಿದ್ದಾರೆ. ಜತೆಗೆ ಸಾಲಗಾರರಿಂದ ಬಾಕಿ ಮೊತ್ತವನ್ನು ವಸೂಲು ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದೂ ತಿಳಿಸಿದ್ದಾರೆ.
ಉಕ್ಕು ಉತ್ಪಾದನೆ ದಾಖಲೆ: ಭಾರತದ ಉಕ್ಕು ಉತ್ಪಾದನೆಯು ಐತಿಹಾಸಿಕ ಮಟ್ಟಕ್ಕೇರಿದ್ದು, ಪ್ರತೀ ವರ್ಷ 120 ದಶಲಕ್ಷ ಟನ್ ಉತ್ಪಾದನೆ ಮಾಡಲಾಗುತ್ತಿದೆ. ಈ ಮೂಲಕ ಭಾರತವು ಜಗತ್ತಿನಲ್ಲೇ 2ನೇ ಅತೀದೊಡ್ಡ ಉಕ್ಕು ಉತ್ಪಾದಕ ದೇಶ ಎಂಬ ಹೆಗ್ಗಳಿಕೆ ಗಳಿಸಿದೆ ಎಂದು ರಾಜ್ಯಸಭೆಗೆ ಉಕ್ಕು ಸಚಿವ ಜ್ಯೋತಿರಾದಿತ್ಯ ಸಿಂದಿಯಾ ಮಾಹಿತಿ ನೀಡಿದ್ದಾರೆ.
ಹಳೆ ಕಾನೂನು ರದ್ದು?
137 ವರ್ಷಗಳ ಹಿಂದೆ ಜಾರಿಯಾದ ಒಂದು ಕಾನೂನು ಸಹಿತ ಒಟ್ಟಾರೆ 60ರಷ್ಟು ಹಳೆಯ ಕಾನೂನುಗಳನ್ನು ರದ್ದು ಮಾಡುವಂಥ ಮಸೂ ದೆ ಯನ್ನು ಸೋಮವಾರ ಲೋಕಸಭೆಯಲ್ಲಿ ಮಂಡಿಸಲಾಗಿದೆ. ಇದು ಅಂಗೀಕಾರಗೊಂಡರೆ 1885ರ ಭೂಸ್ವಾಧೀನ(ಗಣಿ) ಕಾಯ್ದೆ, ಟೆಲಿಗ್ರಾಫ್ ವಯರ್ಸ್ ಕಾಯ್ದೆ 1950 ಸಹಿತ 60 ಕಾನೂನುಗಳು ರದ್ದಾಗಲಿವೆ.
ಕೆಲವು ಎಡಪಂಥೀಯ ಹೋರಾಟ ಗಾರರು ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ದೇಶದ ಸಾಂಸ್ಕೃತಿಕ ಮೌಲ್ಯಕ್ಕೆ ವಿರುದ್ಧವಾದ ಆದೇಶವನ್ನು ನ್ಯಾಯಾಂಗವು ನೀಡಬಾರದು. ಇದು ಸಾಮಾಜಿಕ ಮಹತ್ವದ ಸಂಗತಿಯಾಗಿದ್ದು ಇಬ್ಬರು ಜಡ್ಜ್ಗಳು ಕುಳಿತು ನಿರ್ಧರಿಸುವ ವಿಚಾರವಲ್ಲ.
-ಸುಶೀಲ್ ಮೋದಿ, ಬಿಜೆಪಿ ರಾಜ್ಯಸಭೆ ಸದಸ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Issue: ನಾಳೆಯಿಂದ ಜೆಪಿಸಿ ಎದುರು ಕರ್ನಾಟಕ ಸೇರಿ 6 ರಾಜ್ಯಗಳ ಪ್ರತಿನಿಧಿಗಳು ಹಾಜರು
ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು
Uttarakhand: ಕಂದಕಕ್ಕೆ ಬಿದ್ದ ಬಸ್ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ
Uttar Pradesh: 16 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾ*ಚಾರ; ಇಬ್ಬರ ಬಂಧನ
Atul Subhash Case: ಮೊಮ್ಮಗನನ್ನು ನೀಡದಿದ್ದರೆ ಆತ್ಮಹತ್ಯೆ; ಅತುಲ್ ತಂದೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸಿ.ಟಿ.ರವಿ ಮನಸ್ಸಲ್ಲೇ ಕೊಳೆ ತುಂಬಿದೆ, ಫೆನಾಯಿಲ್ ಹಾಕಿ ತೊಳೆದುಕೊಳ್ಳಲಿ: ಸಚಿವೆ ಲಕ್ಷ್ಮೀ
Bantwal: ತುಂಬೆ ಜಂಕ್ಷನ್; ಸರಣಿ ಅಪಘಾತ
Kasaragod ಅಪರಾಧ ಸುದ್ದಿಗಳು: ವಿದ್ಯಾರ್ಥಿನಿಯರಿಗೆ ಕಿರುಕುಳ; ಕೇಸು ದಾಖಲು
Brahmavar: ಆರೂರು; ಬೆಂಕಿ ತಗಲಿ ಗಾಯಗೊಂಡಿದ್ದ ಮಹಿಳೆ ಸಾವು
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.