ಸಂಸತ್ ಭದ್ರತೆಯಲ್ಲಿ ಭಾರೀ ಲೋಪ:ನಕಲಿ ರಾಜ್ಯಸಭಾ ಐಡಿ ಕಾರ್ಡ್ ಪತ್ತೆ
Team Udayavani, Jun 13, 2017, 4:14 PM IST
ಹೊಸದಿಲ್ಲಿ : ಸಂಸತ್ ಭದ್ರತೆಯಲ್ಲಿ ಭಾರೀ ಲೋಪವಾಗಿರುವುದಕ್ಕೆ ಸಾಕ್ಷಿ ಎಂಬಂತೆ ಅಧಿಕಾರಿಗಳು ಇಂದು ಮಂಗಳವಾರ ವಿವಾದಿತ ಎಐಎಡಿಎಂಕೆ ನಾಯಕ ಟಿ ಟಿ ವಿ ದಿನಕರನ್ ಅವರ ನಿಕಟವರ್ತಿಯೊಬ್ಬರಿಂದ ನಕಲಿ ರಾಜ್ಯಸಭಾ ಐಡಿ ಕಾರ್ಡ್ ವಶಪಡಿಸಿಕೊಂಡಿದ್ದಾರೆ.
ಎಐಎಡಿಎಂಕೆ ಪಕ್ಷದ ಎರಡೆಲೆ ಚುನಾವಣಾ ಚಿಹ್ನೆಯನ್ನು ಶತಾಯಗತಾಯ ಪಡೆಯುವ ಸಲುವಾಗಿ ಚುನಾವಣಾ ಆಯೋಗಕ್ಕೆ ಲಂಚ ನೀಡಲು ಮುಂದಾಗಿದ್ದ ದಿನಕರನ್ ಅವರ ನಿಕಟವರ್ತಿಯೋರ್ವರಿಂದ ಈ ನಕಲಿ ರಾಜ್ಯಸಭಾ ಐಡಿ ಕಾರ್ಡ್ ವಶವಾಗಿರುವುದನ್ನು ಟೈಮ್ಸ್ ನೌ ವರದಿ ಮಾಡಿದೆ.
ದಿನಕರನ್ ಅವರ ನಿಕಟವರ್ತಿಯ ಹೆಸರನ್ನು ಬಹಿರಂಗಪಡಿಸಲಾಗಿಲ್ಲ; ಆದರೆ ಆತನ ಕೈಗೆ ಈ ನಕಲಿ ಐಡಿ ಕಾರ್ಡ್ ಹೇಗೆ, ಎಲ್ಲಿಂದ, ಯಾವಾಗ, ಯಾರಿಂದ ಬಂತೆಂಬ ಬಗ್ಗೆ ಈಗ ಕೂಲಂಕಷ ತನಿಖೆ ನಡೆಯುತ್ತಿದೆ.
ದಿನಕರನ್ ನಿಕಟವರ್ತಿಯಾಗಿರುವ ಆರೋಪಿ ವ್ಯಕ್ತಿಯ ವಿರುದ್ಧ ಐಪಿಸಿ ಸೆ.467ರಡಿ ಕೇಸು ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tamil Nadu: ಗೋ ಮಾಂಸ ತಿನ್ನೋದು ಸರಿ ಎಂದಾದರೆ ಮೂತ್ರ ಯಾಕೆ ಬೇಡ: ಬಿಜೆಪಿ
Delhi Polls: ದಿಲ್ಲಿ ವಿಧಾನಸಭೆಯ 70 ಸ್ಥಾನಕ್ಕೆ ಬರೋಬ್ಬರಿ 699 ಅಭ್ಯರ್ಥಿಗಳು ಸ್ಪರ್ಧೆ!
Supreme Court: ಟೆಕಿ ಅತುಲ್ ಪುತ್ರನನ್ನು ಅಜ್ಜಿ ಸುಪರ್ದಿಗೆ ನೀಡಲು ಸುಪ್ರೀಂ ನಕಾರ
NRI: ಸಂಸತ್ತಿನಲ್ಲಿ ಎನ್‌ಆರ್‌ಐ ಪ್ರಾತಿನಿಧ್ಯ: ಸ್ಥಾಯಿ ಸಮಿತಿ ಸಭೇಲಿ ಚರ್ಚೆ
Dog’s Revenge: ತನಗೆ ಡಿಕ್ಕಿ ಹೊಡೆದ ಕಾರಿನ ಮೇಲೆ ಸೇಡು ತೀರಿಸಿಕೊಂಡ ಶ್ವಾನ…