Parliament Session: ಗೂಂಡಾಗಿರಿ ಮೂಲಕ ಸಂಸತ್‌ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ

ಜನರಿಂದ ತಿರಸ್ಕೃತಗೊಂಡವರಿಂದ ಸಂಸತ್ತಲ್ಲಿ ಗಲಾಟೆ: ಪ್ರಧಾನಿ, ಅಧಿವೇಶನದ ಮೊದಲ ದಿನವೇ ಅದಾನಿ ಗದ್ದಲ!, ಎಐಸಿಸಿ ಅಧ್ಯಕ್ಷ ಖರ್ಗೆ ಆಕ್ರೋಶ

Team Udayavani, Nov 26, 2024, 7:45 AM IST

PM-Modi-Sansad

ಹೊಸದಿಲ್ಲಿ: 80ರಿಂದ 90 ಬಾರಿ ಜನರಿಂದ ತಿರಸ್ಕೃತಗೊಂಡವರು ಗೂಂಡಾಗಿರಿ ಮಾಡುವ ಮೂಲಕ ಸಂಸತ್ತಿನ ಮೇಲೆ ಹಿಡಿತ ಸಾಧಿಸಲು ಯತ್ನಿಸುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಸೋಮವಾರ ಆರೋಪಿಸಿದ್ದಾರೆ.

ಅಧಿವೇಶನ ಆರಂಭಕ್ಕೂ ಮುನ್ನ ಮಾಧ್ಯಮಗಳ ಜತೆ ಮಾತನಾಡಿದ ಅವರು ರಾಜಕೀಯ ಲಾಭಕ್ಕಾಗಿ ಗೂಂಡಾಗಿರಿ ಮಾಡುವವರು ತಮ್ಮ ವರ್ತನೆಗಳಲ್ಲಿ ಯಶಸ್ವಿಯಾಗಲೇ ಇಲ್ಲ. ಮತದಾರರು ಅಂತಹವರನ್ನು ಸೂಕ್ತ ಸಮಯದಲ್ಲಿ ತಿರಸ್ಕರಿಸಿದರು. ಸಂಸತ್ತಿನಲ್ಲಿ ಆರೋಗ್ಯಕರ ಚರ್ಚೆ ನಡೆಯಬೇಕು. ಆದರೆ ಕೆಲವು ವ್ಯಕ್ತಿಗಳು ತಮ್ಮ ರಾಜಕೀಯ ಲಾಭಕ್ಕಾಗಿ ಸಂಸತ್ತನ್ನು ನಿಯಂತ್ರಿಸಲು ಬಯಸುತ್ತಿದ್ದಾರೆ. ಅಡೆತಡೆಯೊಡ್ಡಲು ಬಯಸುತ್ತಾರೆ ಎಂದರು.

ವಿಪಕ್ಷಗಳಲ್ಲೂ ಕೆಲವು ನಾಯಕರು ಜವಾಬ್ದಾರಿಯುತವಾಗಿ ವರ್ತಿಸುತ್ತಾರೆ. ಅವರಿಗೆ ಕೆಲಸವಾಗುವುದು ಮುಖ್ಯ. ಆದರೆ ಪದೇಪದೇ ಜನರಿಂದ ತಿರಸ್ಕಾ ರಕ್ಕೆ ಒಳಗಾಗುತ್ತಿರುವವರು, ತಮ್ಮ ಸ್ನೇಹಿತರು ನೀಡುವ ಸಲಹೆಗಳನ್ನು ಬದಿಗೊತ್ತಿ ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಮಹಾರಾಷ್ಟ್ರ ದಲ್ಲಿ ಐಎನ್‌ಡಿಐಎ ಒಕ್ಕೂಟದ ಸೋಲಿನ ಹಿನ್ನೆಲೆಯಲ್ಲಿ ಮೋದಿ ಈ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

ಮೋದಿಗೆ “ಏಕ್‌ ಹೇ ತೋ ಸೇಫ್ ಹೇ’ ಸ್ವಾಗತ
ಪ್ರಧಾನಿ ಮೋದಿ ಸದನದೊಳಕ್ಕೆ ಕಾಲಿಡುತ್ತಿದ್ದಂತೆ ಆಡಳಿತಾರೂಢ ಎನ್‌ಡಿಎ ಸಂಸದರು “ಏಕ್‌ ಹೇ ತೋ ಸೇಫ್ ಹೇ’ ಎಂಬ ಉದ್ಘೋಷದೊಂದಿಗೆ ಅವರನ್ನು ಸ್ವಾಗತಿಸಿದರು. ಮಹಾರಾಷ್ಟ್ರ, ಝಾರ್ಖಂಡ್‌ ಚುನಾವಣೆ ಪ್ರಚಾರದ ವೇಳೆ ಈ ಸ್ಲೋಗನ್‌ ಚಾಲ್ತಿಗೆ ಬಂದಿತ್ತು.

ಅದಾನಿ ವಿರುದ್ಧದ ಲಂಚ ಆರೋಪ ಚರ್ಚೆಗೆ ವಿಪಕ್ಷ ಸಂಸದರ ಪಟ್ಟು, ಚರ್ಚೆಗೆ ಒಪ್ಪದ ಸರಕಾರ
ಹೊಸದಿಲ್ಲಿ:
ಸಂಸತ್‌ನ ಚಳಿಗಾಲದ ಅಧಿವೇಶನ ಸೋಮವಾರ ಆರಂಭವಾಗಿದ್ದು, ಮೊದಲ ದಿನವೇ “ಅದಾನಿ ಬಿರುಗಾಳಿ’ಗೆ ಕಲಾಪ ಧೂಳಿಪಟವಾಗಿದೆ. ಸಂಸತ್‌ನ ಎರಡೂ ಸದನಗಳಲ್ಲಿ ವಿಪಕ್ಷಗಳು ತೀವ್ರ ಗದ್ದಲ ಉಂಟು ಮಾಡಿದ ಕಾರಣ, ಕಲಾಪವನ್ನು ಬುಧವಾರಕ್ಕೆ ಮುಂದೂಡಲಾಗಿದೆ.

ಲೋಕಸಭೆಯಲ್ಲಿ ಕಲಾಪ ಆರಂಭವಾಗುತ್ತಿದ್ದಂತೆಯೇ ವಿಪಕ್ಷಗಳ ಸಂಸದರು ಉದ್ಯಮಿ ಗೌತಮ್‌ ಅದಾನಿ ವಿರುದ್ಧದ ಲಂಚದ ಆರೋಪ ಕುರಿತು ಚರ್ಚೆಯಾಗಬೇಕು ಮತ್ತು ಈ ಪ್ರಕರಣದ ತನಿಖೆಗೆ ಜೆಪಿಸಿ(ಜಂಟಿ ಸಂಸದೀಯ ಸಮಿತಿ) ರಚಿಸಬೇಕು ಎಂದು ಆಗ್ರಹಿಸಿ ಘೋಷಣೆಗಳನ್ನು ಕೂಗತೊಡಗಿದರು.

ಇನ್ನು, ರಾಜ್ಯಸಭೆಯಲ್ಲೂ ಕಾಂಗ್ರೆಸ್‌ ನೇತೃತ್ವದ ವಿಪಕ್ಷಗಳು ರೂಲ್‌ 267 ಅನ್ವಯ 13 ನೋಟಿಸ್‌ಗಳನ್ನು ನೀಡಿದರಾದರೂ, ಅದನ್ನು ಸಭಾಧ್ಯಕ್ಷ ಜಗದೀಪ್‌ ಧನ್ಕರ್‌ ತಿರಸ್ಕರಿಸಿದರು. ಈ ಪೈಕಿ 7 ನೋಟಿಸ್‌ಗಳು ಅದಾನಿ ಪ್ರಕರಣ ಕುರಿತು ಚರ್ಚೆಗೆ ಆಗ್ರಹಿಸಿರುವಂಥದ್ದೇ ಆಗಿತ್ತು. ಧನ್ಕರ್‌ ನಿರ್ಧಾರದಿಂದ ಆಕ್ರೋಶಗೊಂಡ ವಿಪಕ್ಷಗಳು ಸದನದಲ್ಲಿ ಕೋಲಾಹಲ ಎಬ್ಬಿಸಿದ ಕಾರಣ, ಕಲಾಪವನ್ನು ಮುಂದೂಡಲಾಯಿತು. ಮಂಗಳವಾರ “ಸಂವಿಧಾನ ದಿನ’ದ ವಿಶೇಷ ಕಾರ್ಯಕ್ರಮವಿರುವ ಹಿನ್ನೆಲೆಯಲ್ಲಿ ಕಲಾಪ ನಡೆಯದ ಕಾರಣ, ಬುಧವಾರಕ್ಕೆ ಕಲಾಪ ಮುಂದೂಡಿಕೆಯಾಗಿದೆ.

ಖರ್ಗೆ ಹೇಳಿಕೆಗೆ ಕಡತದಿಂದ ಕೊಕ್‌:
ಚರ್ಚೆಗೆ ಅವಕಾಶ ನೀಡದ್ದರಿಂದ ಆಕ್ರೋಶಗೊಂಡ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, “ಇಡೀ ದೇಶದ ಮೇಲೆ ಪರಿಣಾಮ ಬೀರುವಂಥ ವಿಚಾರದ ಬಗ್ಗೆ ಚರ್ಚೆಗೆ ಏಕೆ ಅವಕಾಶ ನೀಡುತ್ತಿಲ್ಲ ಎಂದು ಉತ್ತರಿಸಬೇಕು. ಅದಾನಿ ಪ್ರಕರಣದಿಂದ ಭಾರತದ ವರ್ಚಸ್ಸಿಗೆ ಕಳಂಕ ಉಂಟಾಗಿದೆ. ಆದರೂ ಪ್ರಧಾನಿ ಮೋದಿಯವರು ಅದಾನಿಯನ್ನು ಬೆಂಬಲಿಸುತ್ತಿದ್ದಾರೆ’ ಎಂದು ಆರೋಪಿಸಿದರು. ಕೂಡಲೇ ಖರ್ಗೆ ಅವರ ಈ ಹೇಳಿಕೆಯನ್ನು ಕಡತದಿಂದ ತೆಗೆದುಹಾಕುವಂತೆ ಸಭಾಪತಿ ಧನ್ಕರ್‌ ಸೂಚಿಸಿದರು.

ಲೋಕಸಭೆಯಲ್ಲಿ ಡಿಜಿಟಲ್‌ ಹಾಜರಾತಿ
ಸೋಮವಾರದಿಂದ ಲೋಕಸಭೆಯಲ್ಲಿ ಸಂಸದರಿಗೆ ಡಿಜಿಟಲ್‌ ಹಾಜರಾತಿ ವ್ಯವಸ್ಥೆ ಜಾರಿಗೆ ತರಲಾಗಿದೆ. ಎಲೆಕ್ಟ್ರಾನಿಕ್‌ ಟ್ಯಾಬ್‌ನಲ್ಲಿ ತಮ್ಮ ಹೆಸರನ್ನು ಆಯ್ಕೆ ಮಾಡಿ, ಡಿಜಿಟಲ್‌ ಪೆನ್‌ನಿಂದ ಸಹಿ ಹಾಕುವ ಮೂಲಕ ಸಂಸದರು ಹಾಜರಾತಿಯನ್ನು ದೃಢಪಡಿಸಬೇಕು. ಸಂಸತ್ತನ್ನು ಕಾಗದರಹಿತ ಮಾಡುವ ಉದ್ದೇಶದಿಂದ ಇದನ್ನು ಜಾರಿಮಾಡಲಾಗಿದೆ.

ವಕ್ಫ್ ಸಮಿತಿ ಅವಧಿ ವಿಸ್ತರಣೆಗೆ ಮನವಿ
ವಕ್ಫ್ ತಿದ್ದುಪಡಿ ಮಸೂದೆ ಪರಿಶೀಲನೆಗೆಂದು ರಚಿಸಲಾದ ಜಂಟಿ ಸಂಸದೀಯ ಸಮಿತಿಯ ಅವಧಿಯನ್ನು ಮತ್ತಷ್ಟು ವಿಸ್ತರಣೆ ಮಾಡುವಂತೆ ಲೋಕಸಭಾ ಸ್ಪೀಕರ್‌ಗೆ ವಿಪಕ್ಷ ನಾಯಕರು ಮನವಿ ಮಾಡಿದ್ದಾರೆ. ಮಸೂದೆಯ ಕುರಿತು ವಿಸ್ತೃತ ಚರ್ಚೆ ಹಾಗೂ ಸಮಾಲೋಚನೆ ಅಗತ್ಯವಿದೆ ಎಂದೂ ಅವರು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

ಟಾಪ್ ನ್ಯೂಸ್

ಉಳ್ಳಾಲದ ಸಿಂಧೂರ ಈಗ ವಿಜ್ಞಾನ ಸಿಂಧೂರ !

ಉಳ್ಳಾಲದ ಸಿಂಧೂರ ಈಗ ವಿಜ್ಞಾನ ಸಿಂಧೂರ !

ಬ್ರೇಕಪ್‌ ನಿಜ: ಮೌನ ಮುರಿದ ನಟಿ ಮಲೈಕಾ ಅರೋರಾ!

Mumbai: ಬ್ರೇಕಪ್‌ ನಿಜ: ಮೌನ ಮುರಿದ ನಟಿ ಮಲೈಕಾ ಅರೋರಾ!

3rd ODI ವನಿತಾ ಏಕದಿನ: ವಿಂಡೀಸ್‌ ವಿರುದ್ಧ ಸರಣಿ ಕ್ಲೀನ್‌ ಸ್ವೀಪ್‌ಗೆ ಭಾರತ ಸಜ್ಜು

3rd ODI ವನಿತಾ ಏಕದಿನ: ವಿಂಡೀಸ್‌ ವಿರುದ್ಧ ಸರಣಿ ಕ್ಲೀನ್‌ ಸ್ವೀಪ್‌ಗೆ ಭಾರತ ಸಜ್ಜು

Uppinangady ಕೀಲಿಕೈ ಚಮತ್ಕಾರ!ಯಾರದೋ ಸ್ಕೂಟರನ್ನು ಯಾರೋ ಕೊಂಡೊಯ್ದರು!

Uppinangady ಕೀಲಿಕೈ ಚಮತ್ಕಾರ!ಯಾರದೋ ಸ್ಕೂಟರನ್ನು ಯಾರೋ ಕೊಂಡೊಯ್ದರು!

Mangaluru: ಹೊಸ ವರ್ಷದ ಪಾರ್ಟಿಗಳಿಗೆ ನಿರ್ಬಂಧ ಹೇರಲು ವಿಹಿಂಪ, ಬಜರಂಗದಳ ಆಗ್ರಹ

Mangaluru: ಹೊಸ ವರ್ಷದ ಪಾರ್ಟಿಗಳಿಗೆ ನಿರ್ಬಂಧ ಹೇರಲು ವಿಹಿಂಪ, ಬಜರಂಗದಳ ಆಗ್ರಹ

B.C.Road: ಗರ್ಭಿಣಿ-ಬಾಲಕಿಗೆ ಹಲ್ಲೆ ಪ್ರಕರಣ: ರಾಜ್ಯ ಮಹಿಳಾ ಆಯೋಗಕ್ಕೆ ನಿಯೋಗ ದೂರು

B.C.Road: ಗರ್ಭಿಣಿ-ಬಾಲಕಿಗೆ ಹಲ್ಲೆ ಪ್ರಕರಣ: ರಾಜ್ಯ ಮಹಿಳಾ ಆಯೋಗಕ್ಕೆ ನಿಯೋಗ ದೂರು

MM-Singh

ದೇಶದ ಆರ್ಥಿಕತೆಗೆ ಹೊಸ ಭಾಷ್ಯ ಬರೆದ ಡಾ. ಮನಮೋಹನ್‌ ಸಿಂಗ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬ್ರೇಕಪ್‌ ನಿಜ: ಮೌನ ಮುರಿದ ನಟಿ ಮಲೈಕಾ ಅರೋರಾ!

Mumbai: ಬ್ರೇಕಪ್‌ ನಿಜ: ಮೌನ ಮುರಿದ ನಟಿ ಮಲೈಕಾ ಅರೋರಾ!

Pushpa 2: 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ

Pushpa 2film : 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ

Uttar Pradesh: ಸಂಭಲ್‌ನ ಪ್ರಾಚೀನ ಬಾವಿಯ ಉತ್ಖನನ, ನವೀಕರಣಕ್ಕೆ ಚಾಲನೆ

Uttar Pradesh: ಸಂಭಲ್‌ನ ಪ್ರಾಚೀನ ಬಾವಿಯ ಉತ್ಖನನ, ನವೀಕರಣಕ್ಕೆ ಚಾಲನೆ

Uttarakhand ಹೈಕೋರ್ಟ್‌ ಸಿ.ಜೆ. ಆಗಿ ನರೇಂದ್ರ ಪ್ರಮಾಣ ವಚನ ಸ್ವೀಕಾರ

Uttarakhand ಹೈಕೋರ್ಟ್‌ ಸಿ.ಜೆ. ಆಗಿ ನರೇಂದ್ರ ಪ್ರಮಾಣ ವಚನ ಸ್ವೀಕಾರ

PM Modi: ತಂತ್ರಜ್ಞಾನವನ್ನು ಅರಿತು ಅಳವಡಿಸಿಕೊಳ್ಳಬೇಕು: ಯವಜನಕ್ಕೆ ಮೋದಿ ಕರೆ

PM Modi: ತಂತ್ರಜ್ಞಾನವನ್ನು ಅರಿತು ಅಳವಡಿಸಿಕೊಳ್ಳಬೇಕು: ಯವಜನಕ್ಕೆ ಮೋದಿ ಕರೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಉಳ್ಳಾಲದ ಸಿಂಧೂರ ಈಗ ವಿಜ್ಞಾನ ಸಿಂಧೂರ !

ಉಳ್ಳಾಲದ ಸಿಂಧೂರ ಈಗ ವಿಜ್ಞಾನ ಸಿಂಧೂರ !

ಬ್ರೇಕಪ್‌ ನಿಜ: ಮೌನ ಮುರಿದ ನಟಿ ಮಲೈಕಾ ಅರೋರಾ!

Mumbai: ಬ್ರೇಕಪ್‌ ನಿಜ: ಮೌನ ಮುರಿದ ನಟಿ ಮಲೈಕಾ ಅರೋರಾ!

3rd ODI ವನಿತಾ ಏಕದಿನ: ವಿಂಡೀಸ್‌ ವಿರುದ್ಧ ಸರಣಿ ಕ್ಲೀನ್‌ ಸ್ವೀಪ್‌ಗೆ ಭಾರತ ಸಜ್ಜು

3rd ODI ವನಿತಾ ಏಕದಿನ: ವಿಂಡೀಸ್‌ ವಿರುದ್ಧ ಸರಣಿ ಕ್ಲೀನ್‌ ಸ್ವೀಪ್‌ಗೆ ಭಾರತ ಸಜ್ಜು

Uppinangady ಕೀಲಿಕೈ ಚಮತ್ಕಾರ!ಯಾರದೋ ಸ್ಕೂಟರನ್ನು ಯಾರೋ ಕೊಂಡೊಯ್ದರು!

Uppinangady ಕೀಲಿಕೈ ಚಮತ್ಕಾರ!ಯಾರದೋ ಸ್ಕೂಟರನ್ನು ಯಾರೋ ಕೊಂಡೊಯ್ದರು!

Mangaluru: ಹೊಸ ವರ್ಷದ ಪಾರ್ಟಿಗಳಿಗೆ ನಿರ್ಬಂಧ ಹೇರಲು ವಿಹಿಂಪ, ಬಜರಂಗದಳ ಆಗ್ರಹ

Mangaluru: ಹೊಸ ವರ್ಷದ ಪಾರ್ಟಿಗಳಿಗೆ ನಿರ್ಬಂಧ ಹೇರಲು ವಿಹಿಂಪ, ಬಜರಂಗದಳ ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.