ಏಸು ಕ್ರಿಸ್ತರೊಡನೆ ಪಾರೀಕರ್ ಹೋಲಿಸಿದ ಗೋವಾ ಸಚಿವ: ಕಾಂಗ್ರೆಸ್ ಟೀಕೆ
Team Udayavani, Feb 2, 2019, 11:17 AM IST
ಪಣಜಿ : ‘ಗೋವಾ ಮುಖ್ಯಮಂತ್ರಿ ಮನೋಹರ್ ಪಾರೀಕರ್ ಅವರು ಏಸು ಕ್ರಿಸ್ತನ ಹಾಗೆ; ಪಾರೀಕರ್ ಅವರು ಬೈಬಲ್ ಉಕ್ತಿಯ ಪ್ರಕಾರ ಸೇತುವೆ ಕಟ್ಟಿದ್ದಾರೆ; ಗೋಡೆಯನ್ನಲ್ಲ’ ಎಂದು ಗೋವಾ ಸಚಿವ ವಿಜಯ್ ಸರ್‌ದೇಸಾಯ್ ಹೇಳಿರುವ ಮಾತುಗಳಲ್ಲಿ ‘ಪಾರೀಕರ್ ಅವರನ್ನು ಏಸು ಕ್ರಿಸ್ತರೊಡನೆ ಹೋಲಿಸಿರುವುದು ಸರಿಯಲ್ಲ; ಹಾಗೆ ಮಾಡುವ ಮೂಲಕ ಅವರು ಕ್ರೈಸ್ತರ ಧಾರ್ಮಿಕ ಭಾವನೆಗಳನ್ನು ನೋಯಿಸಿದ್ದಾರೆ’ ಎಂದು ಕಾಂಗ್ರೆಸ್ ನೀಡಿರುವ ಪ್ರತಿಕ್ರಿಯೆಗೆ ಸಚಿವ ಸರ್‌ದೇಸಾಯಿ ಉತ್ತರ ನೀಡಿದ್ದಾರೆ.
‘ಬೈಬಲ್ ನಲ್ಲಿ ಹೇಳಿರುವ ಪ್ರಕಾರ ಸೇತುವೆ ಎಂದರೆ ಮನುಷ್ಯ-ಮನುಷ್ಯರ ನಡುವೆ ಉತ್ತಮ ಸಂಬಂಧಗಳನ್ನು ಜೋಡಿಸುವ ಸೇತುವೆಯೇ ವಿನಾ ಕಾಂಗ್ರೆಸಿಗರು ಅರ್ಥ ಮಾಡಿಕೊಂಡಿರುವ ಹಾಗೆ ಕಾಂಕ್ರೀಟ್ ಸೇತುವೆ ಅಲ್ಲ’ ಎಂದು ಸರ್‌ದೇಸಾಯಿ ತಿರುಗೇಟು ನೀಡಿದ್ದಾರೆ.
‘ಸಿಎಂ ಪಾರೀಕರ್ ಅವರು ಮನುಷ್ಯ-ಮನುಷ್ಯರ ನಡುವೆ ಉತ್ತಮ ಸಂಬಂಧಗಳ ಸೇತುವೆ ನಿರ್ಮಿಸಿದ್ದರಿಂದಲೇ ನಾವು ಇವತ್ತು ಬಿಜೆಪಿಯೊಂದಿಗೆ ಇದ್ದೇವೆ’ ಎಂದು ಗೋವಾ ಫಾರ್ವರ್ಡ್ ಬ್ಲಾಕ್ ಶಾಸಕರಾಗಿದ್ದು, ನಗರ ಮತ್ತು ಗ್ರಾಮೀಣ ಸಚಿವರಾಗಿರುವ ಸರ್‌ದೇಸಾಯಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Earthquakes: ಹಿಮಾಲಯದ ತಪ್ಪಲಲ್ಲಿ ಅತೀ ಹೆಚ್ಚು ಭೂಕಂಪ ಸಂಭವಿಸುವುದೇಕೆ?
Bharatpol: ಅಂತಾರಾಷ್ಟ್ರೀಯ ಪೊಲೀಸ್ ಸಹಕಾರಕ್ಕೆ “ಭಾರತ್‌ಪೋಲ್’
Kerala: 20 ವರ್ಷದಿಂದ ಪಾಳು ಬಿದಿದ್ದ ಮನೆಯ ಫ್ರಿಡ್ಜಲ್ಲಿ ತಲೆಬುರುಡೆ ಪತ್ತೆ!
Galaxy: ಹೊಸ ಗ್ಯಾಲಕ್ಸಿ ಸೃಷ್ಟಿಯನ್ನು ಕಂಡುಹಿಡಿದ ಭಾರತದ ಖಗೋಳ ವಿಜ್ಞಾನಿಗಳು!
AI: ಶಾರುಖ್ ಪತ್ನಿ ಗೌರಿ ಮತಾಂತರ?: ಡೀಪ್ ಫೇಕ್ ಫೋಟೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gangavathi; ಸಿಲಿಂಡರ್ ಸ್ಪೋ*ಟಗೊಂಡು ಅಗ್ನಿ ಅವಘಡ: ವೈದ್ಯೆ ಸೇರಿ ಇಬ್ಬರಿಗೆ ತೀವ್ರ ಗಾಯ
Karnataka Lokayukta; ಬೆಟಗೇರಿ ನಗರಸಭೆ ಇಂಜಿನಿಯರ್ ಗೆ ಬೆಳ್ಳಂಬೆಳಗ್ಗೆ ಶಾಕ್..!
Belagavi; ಸಂಘದ ಹೆಸರಲ್ಲಿ ಮಹಿಳೆಯರಿಗೆ 19.35 ಕೋಟಿ ರೂ. ಮಹಾ ವಂಚನೆ!
Vitla; ನಿವೃತ್ತ ಶಿಕ್ಷಕ, ಅರ್ಥಧಾರಿ ಪಕಳಕುಂಜ ಶ್ಯಾಮ ಭಟ್ ವಿಧಿವಶ
Trump warns; ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ನರಕ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.