ಸಾಲಕ್ಕೆ ಪಾಸ್ಪೋರ್ಟ್ ವಿವರ ಕಡ್ಡಾಯ
Team Udayavani, Mar 11, 2018, 6:35 AM IST
ಹೊಸದಿಲ್ಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ನಲ್ಲಿ 12,600 ಕೋಟಿ ರೂ. ಹಗರಣದ ನಂತರದಲ್ಲಿ ಇದೀಗ 50 ಕೋಟಿ ರೂ.ಗಿಂತ ಹೆಚ್ಚಿನ ಸಾಲ ಪಡೆಯುವ ಸಾಲಗಾರರು ಪಾಸ್ಪೋರ್ಟ್ ವಿವರ ಸಲ್ಲಿಸುವುದು ಕಡ್ಡಾಯ ವಾಗಿರಲಿದೆ.
ಈ ಬಗ್ಗೆ ಹಣಕಾಸು ಸೇವೆಗಳ ಇಲಾಖೆ ಕಾರ್ಯದರ್ಶಿ ರಾಜೀವ್ ಕುಮಾರ್ ಹೇಳಿದ್ದು, ಸುಸ್ತಿದಾರರ ವಿರುದ್ಧ ಕಠಿಣ ಹಾಗೂ ತಕ್ಷಣದ ಕ್ರಮ ಕೈಗೊಳ್ಳಲು ಇದು ಅಗತ್ಯವಾಗಿದೆ ಎಂದಿದ್ದಾರೆ. 50 ಕೋಟಿ ರೂ. ಮೇಲ್ಪಟ್ಟ ಹೊಸ ಸಾಲಗಳಿಗೆ ಪಾಸ್ಪೋರ್ಟ್ ವಿವರ ಪಡೆಯು ವುದು ಕಡ್ಡಾಯವಾಗಿದ್ದರೆ, ಹಳೆಯ ಸಾಲಗಳಿಗೆ ಮುಂದಿನ 45 ದಿನಗಳೊಳಗೆ ಪಾಸ್ಪೋರ್ಟ್ ವಿವರಗಳನ್ನು ಪಡೆಯಬೇಕು ಎಂದು ಬ್ಯಾಂಕ್ಗಳಿಗೆ ಸೂಚಿಸಲಾಗಿದೆ. ಉದ್ಯಮಿ ನೀರವ್ ಪಿಎನ್ಬಿಗೆ 12,600 ಕೋಟಿ ರೂ. ಸುಸ್ತಿದಾರರಾಗಿ, ತನಿಖಾ ಏಜೆನ್ಸಿಯಿಂದ ತಪ್ಪಿಸಿಕೊಳ್ಳಲು ವಿದೇಶ ಪ್ರಯಾಣ ಬೆಳೆಸಿದ ನಂತರದಲ್ಲಿ ಕೇಂದ್ರ ಸರಕಾರ ಈ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.