ಪಾಸ್ಪೋರ್ಟ್ ಶ್ರೇಯಾಂಕ: 85ನೇ ಸ್ಥಾನ ಪಡೆದ ಭಾರತ
Team Udayavani, Jan 13, 2021, 7:30 AM IST
ಹೊಸದಿಲ್ಲಿ: ಪ್ರಸಕ್ತ ಸಾಲಿನ ಜಗತ್ತಿನ ಅತ್ಯಂತ ಪ್ರಭಾವಶಾಲಿ ಪಾಸ್ಪೋರ್ಟ್ ಶ್ರೇಯಾಂಕ ಬಿಡುಗಡೆಯಾಗಿದೆ. ಈ ಪಟ್ಟಿಯಲ್ಲಿ ಭಾರತದ ಪಾಸ್ಪೋರ್ಟ್ 58 ಅಂಕಗಳನ್ನು ಗಳಿಸಿ 85ನೇ ಸ್ಥಾನ ಪಡೆದುಕೊಂಡಿದೆ.
ಕಳೆದ ವರ್ಷ ಭಾರತ 84ನೇ ಸ್ಥಾನದಲ್ಲಿತ್ತು. 58 ಅಂಕಗಳು ಎಂದರೆ ನಮ್ಮ ದೇಶದ ಪಾಸ್ಪೋರ್ಟ್ ಹೊಂದಿದವರು ಪೂರ್ವ ನಿಗದಿತ ವೀಸಾ ಇಲ್ಲದೆ 58 ದೇಶಗಳಿಗೆ ಭೇಟಿ ನೀಡಲು ಸಾಧ್ಯವಿದೆ. ಈ ಶ್ರೇಯಾಂಕದ ಪಟ್ಟಿಯಲ್ಲಿ ಜಪಾನ್ ನಂ.1 ಸ್ಥಾನದಲ್ಲಿದೆ. ಅದು 191 ಅಂಕಗಳನ್ನು ಪಡೆದು ಸತತ ಮೂರು ವರ್ಷಗಳಿಂದ ಅಗ್ರ ಶ್ರೇಯಾಂಕ ಪಡೆದುಕೊಂಡಿದೆ ಎಂದು ಹೆನ್ಲ ಆ್ಯಂಡ್ ಪಾರ್ಟ್ನರ್ಸ್ ಪಾಸ್ಪೋರ್ಟ್ ಇಂಡೆಕ್ಸ್ 2021ರಲ್ಲಿ ಅಭಿಪ್ರಾಯಪಡಲಾಗಿದೆ. ಒಟ್ಟು 190 ಅಂಕಗಳನ್ನು ಪಡೆದಿರುವ ಸಿಂಗಾಪುರ ದ್ವಿತೀಯ, ಮೂರನೇ ಸ್ಥಾನದಲ್ಲಿ ದಕ್ಷಿಣ ಕೊರಿಯಾ ಮತ್ತು ಜರ್ಮನಿ, ಫಿನ್ಲಂಡ್, ಇಟಲಿ, ಲಕ್ಸೆಂಬರ್ಗ್ ಮತ್ತು ಸ್ಪೇನ್ 4ನೇ ಸ್ಥಾನದಲ್ಲಿವೆ. ಜಗತ್ತಿನ ಅತ್ಯಂತ ಪ್ರಬಲ ಮತ್ತು ಶ್ರೀಮಂತ ರಾಷ್ಟ್ರಗಳು ಎನಿಸಿಕೊಂಡಿರುವ ಅಮೆರಿಕ ಮತ್ತು ಯು.ಕೆ.ಯ ಪಾಸ್ಪೋರ್ಟ್ಗಳಿಗೆ 7ನೇ ಸ್ಥಾನ. ಅವುಗಳ ಜತೆಗೆ ಬೆಲ್ಜಿಯಂ, ನ್ಯೂಜಿಲೆಂಡ್, ನಾರ್ವೆ, ಸ್ವಿಟ್ಸರ್ಲೆಂಡ್ ಇವೆ. ಭಾರತದ ನೆರೆಯ ರಾಷ್ಟ್ರ ಪಾಕಿಸ್ಥಾನ 107, ನೇಪಾಲ 104ನೇ ಸ್ಥಾನದಲ್ಲಿವೆ. ಅಫ್ಘಾನಿಸ್ಥಾನ ಈ ಪಟ್ಟಿಯಲ್ಲಿ ಕೊನೇ ಸ್ಥಾನದಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!
ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್ಸಿ ಸೇರಿ 2 ಅಧ್ಯಯನ ವರದಿ
ಶೀಘ್ರವೇ ದೇಶದ ಬುಲೆಟ್; ರೈಲು ವಿನ್ಯಾಸ ಅಂತಿಮ: ಮುಂಬಯಿ-ಅಹ್ಮದಾಬಾದ್ ಬುಲೆಟ್ ರೈಲು ಯೋಜನೆ
Jammu- Kashmir: ಆಯ್ಕೆಯಾಗಿ 2 ತಿಂಗಳಾದ್ರೂ ಶಾಸಕರಿಗೆ ಮೊದಲ ವೇತನ ಸಿಕ್ಕಿಲ್ಲ!
Enforcement Directorate: ಕ್ರಿಮಿನಲ್ ಪಿತೂರಿಯಡಿ ಮಾತ್ರವೇ ಅಕ್ರಮ ಹಣ ವರ್ಗ ಕೇಸು ಬೇಡ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BBK11: ನಡುರಾತ್ರಿ ದೇವರ ಮುಂದೆ ಒಂಟಿಯಾಗಿ ಕೂತು ಪ್ರಾರ್ಥಿಸಿದ ಚೈತ್ರಾ.!
Ex-US President: ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಆಸ್ಪತ್ರೆಗೆ ದಾಖಲು
Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್ ಪ್ರತಾಪ್ ಜಾಮೀನು ಮಂಜೂರು
Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!
Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.