ಪಾಸ್ಪೋರ್ಟ್ ಸಸ್ಪೆಂಡ್
Team Udayavani, Feb 17, 2018, 6:35 AM IST
ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ಪ್ರಮುಖ ಆರೋಪಿಗಳಾದ ನೀರಜ್ ಮೋದಿ ಹಾಗೂ ಅವರ ಸಂಬಂಧಿ ಮೆಹುಲ್ ಚೌಕ್ಸಿ ಅವರ ಪಾಸ್ಪೋರ್ಟ್ಗಳನ್ನು ವಿದೇಶಾಂಗ ಇಲಾಖೆ ನಾಲ್ಕು ವಾರಗಳವರೆಗೆ ಅಮಾನತುಗೊಳಿಸಿದೆ.
ಮೋದಿ ಹಾಗೂ ಚೋಕ್ಸಿ ಅವರು ಒಂದು ವಾರದೊಳಗೆ ಪ್ರತಿಕ್ರಿಯೆ ನೀಡದೇ ಇದ್ದರೆ, ಅವರ ಪಾಸ್ ಪೋರ್ಟ್ಗಳನ್ನು ಶಾಶ್ವತವಾಗಿ
ರದ್ದುಗೊಳಿಸುವುದಾಗಿ ಇಲಾಖೆ ಎಚ್ಚರಿಸಿದೆ.
ಸುಮಾರು 11 ಸಾವಿರ ಕೋಟಿ ರೂ. ಹಗರಣದ ಆರೋಪ ಎದುರಿಸುತ್ತಿರುವ ಈ ಇಬ್ಬರೂ ಈಗಾಗಲೇ ದೇಶ ತೊರೆದಿರುವುದರಿಂದ ಅವರ ಪಾಸ್ ಪೋರ್ಟ್ಗಳನ್ನು ಅಮಾನತು ಮಾಡುವಂತೆ ಪ್ರಕರಣದ ತನಿಖೆಯ ಜವಾಬ್ದಾರಿ ಹೊತ್ತಿರುವ ಕೇಂದ್ರೀಯ ತನಿಖಾ ಸಂಸ್ಥೆ(ಸಿಬಿಐ) ಹಾಗೂ ಜಾರಿ ನಿರ್ದೇಶನಾಲಯ (ಇಡಿ) ಕೇಂದ್ರ ಸರ್ಕಾರವನ್ನು ಕೋರಿದ್ದವು.
ಭಾರತೀಯ ಪಾಸ್ಪೋರ್ಟ್ ರದ್ದಾಗಿದ್ದರೂ, ಈಗಾಗಲೇ ಬಲ್ಗೇರಿಯಾದ ನಾಗರಿಕತ್ವ ಪಡೆದಿರುವ ಮೋದಿ, ಆ ದಾಖಲೆಗಳನ್ನು ಉಪಯೋಗಿಸಿಕೊಂಡು ಮತ್ತೇನಾದರೂ ತಂತ್ರ ಹೂಡಬಹುದೆಂಬ ಸಂದೇಹ ಇದೀಗ ತನಿಖಾಧಿಕಾರಿಗಳಲ್ಲಿ ಮೂಡಿದೆ ಎಂದು ಕೆಲ ಮೂಲಗಳು ತಿಳಿಸಿವೆ.
ಅತ್ತ, ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಇಡಿ), ನೀರವ್ ಮೋದಿ ಹಾಗೂ ಆತನ ವ್ಯವಹಾರಗಳಲ್ಲಿನ ಪಾಲುದಾರ ಮೆಹುಲ್ ಚೋಕ್ಸಿ ವಿರುದ್ಧ ಸಮನ್ಸ್ ಜಾರಿಗೊಳಿಸಿದೆ.
ಸಮನ್ಸ್ಗಳನ್ನು ಈ ಇಬ್ಬರಿಗೆ ಸಂಬಂಧಿಸಿದ ಕಂಪನಿಗಳ ನಿರ್ದೇಶಕರಿಗೆ ಹಸ್ತಾಂತರಿಸಲಾಗಿದ್ದು, ಒಂದು ವಾರದೊಳಗೆ ವಿಚಾರಣೆಗೆ ಹಾಜರಾಗುವಂತೆ ಗಡುವು ನೀಡಲಾಗಿದೆ.
ಇಂಟರ್ ಪೋಲ್ಗೆ ಮೊರೆ:ಈಗಾಗಲೇ ದೇಶ ತೊರೆದು ಹೋಗಿರುವ ನೀರವ್, ಪತ್ನಿ ಆ್ಯಮಿ, ಸೋದರ ನಿಶಾಲ್ ಹಾಗೂ ಸಂಬಂಧಿಕ ಮೆಹುಲ್ ಚೋಕ್ಸಿ ವಿರುದಟಛಿ ಗುರುವಾರ ಲುಕ್ಔಟ್ ನೋಟಿಸ್ ಜಾರಿಗೊಳಿಸಿದ್ದ ಸಿಬಿಐ, ಶುಕ್ರವಾರ,ಆರೋಪಿಗಳ ಪತ್ತೆಗೆ ಇಂಟರ್ಪೋಲ್ನ ನೆರವು ಕೋರಿದೆ.
ಆರೋಪಿಗಳ ವಿರುದ್ಧ ಡಿಫ್ಯೂಷನ್ ನೋಟಿಸ್ ಜಾರಿಗೊಳಿಸುವಂತೆ ಇಂಟರ್ ಪೋಲ್ ಅನ್ನು ಸಿಬಿಐ ಕೋರಿದ್ದು, ಆ ನೋಟಿಸ್ನಿಂದ ಆರೋಪಿಗಳು ಇರುವ ಖಚಿತ ಸ್ಥಳಗಳು ಪತ್ತೆಯಾಗುವ ಆಶಾಭಾವದಲ್ಲಿ ಸಿಬಿಐ ಇದೆ. ಎಸ್ಬಿಐಗೂ ನಷ್ಟ: ಪಂಜಾಬ್ ನ್ಯಾಷನಲ್ ಬ್ಯಾಂಕ್ನ ಹಗರಣ, ಆ ಬ್ಯಾಂಕ್ನ ಜತೆ ಆರ್ಥಿಕ ವ್ಯವಹಾರ ಹೊಂದಿರುವ ಭಾರತೀಯ ಸ್ಟೇಟ್ ಬ್ಯಾಂಕ್ಗೂ (ಎಸ್ಬಿಐ) 1,300 ಕೋಟಿ ರೂ. ನಷ್ಟ ತಂದಿದೆ ಎಂದು ಎಸ್ಬಿಐ ಹೇಳಿದೆ.
ನ್ಯೂಯಾರ್ಕ್ನಲ್ಲಿ ನೀರವ್ ಮೋದಿ?
ಪಿಎನ್ಬಿಗೆ ಪಂಗನಾಮ ಹಾಕಿ ದೇಶ ಬಿಟ್ಟಿರುವ ನೀರವ್, ನ್ಯೂಯಾರ್ಕ್ನ ಮ್ಯಾನ್ಹ್ಯಾಟನ್ನಲ್ಲಿರುವ ಹೋಟೆಲ್ನಲ್ಲಿದ್ದಾರೆ ಎಂದು ಎನ್ಡಿಟಿವಿ ವರದಿ ಮಾಡಿದೆ. ಇಲ್ಲಿ ಜೆ ಡಬ್ಲೂé ಮಾರಿಯೆಟ್ನ ಎಸ್ಸೆಕ್ಸ್ ಹೌಸ್ನಲ್ಲಿರುವ ಸೂಟ್ನಲ್ಲಿ ನೀರವ್, ಪತ್ನಿ ಹಾಗೂ ಮಕ್ಕಳು ನೆಲೆಸಿದ್ದಾರೆ. ಅಲ್ಲಿಗೆ ವರದಿಗಾರರು ತೆರಳಿದ್ದಾಗ ಹೋಟೆಲ್ನ ಸಿಬ್ಬಂದಿ, “ನೀರವ್ ಮತ್ತು ಪತ್ನಿ ಹೊರಗೆ ಹೋಗಿದ್ದಾರೆ. ಈಗ ಮಕ್ಕಳಷ್ಟೇ ಕೊಠಡಿಯಲ್ಲಿದ್ದಾರೆ’ ಎಂದು ತಿಳಿಸಿದ್ದಾಗಿ ಸುದ್ದಿವಾಹಿನಿಯ ವರದಿ ಹೇಳಿದೆ.
ಅಲ್ಲದೆ, “ಅವರ ಕುರಿತ ಸುದ್ದಿಯೆಲ್ಲ ಭಾರತದಲ್ಲಿ ತಾನೇ? ಅಮೆರಿಕದಲ್ಲಿ ಅವರು ಸುರಕ್ಷಿತವಾಗಿದ್ದಾರೆ’ ಎಂದೂ ಆ ಸಿಬ್ಬಂದಿ ಹೇಳಿದ್ದಾಗಿ ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್
540 ಅಡಿ ಆಳದ ಬೋರ್ವೆಲ್ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…
Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್
540 ಅಡಿ ಆಳದ ಬೋರ್ವೆಲ್ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.