ಐಸಿಯುನಲ್ಲಿ ಮುಂಬಯಿ !
Team Udayavani, Jun 2, 2020, 7:48 AM IST
ಸಾಂದರ್ಭಿಕ ಚಿತ್ರ
ಮುಂಬಯಿ: ವಾರ್ಡ್‌ಗಳು ಹೌಸ್‌ಫುಲ್, ಆಸ್ಪತ್ರೆಗಳ ಹಜಾರಗಳಲ್ಲೂ ಶವಗಳು, ಹಾಸಿಗೆ ಸಿಗದೆ ನೆಲದ ಮೇಲೆ ಒದ್ದಾಡುತ್ತಿರುವ ಇತರ ರೋಗಿಗಳು, ಗಡಿಯಾರದಂತೆ ಕೆಲಸ ಮಾಡುತ್ತಿರುವ ವೈದ್ಯರು- ದಾದಿಯರು! ಭಾರತದ ಆರ್ಥಿಕ ರಾಜಧಾನಿ ಮುಂಬಯಿ ಈಗ ತಲೆಮೇಲೆ ಕೈಹೊತ್ತು ಕುಳಿತಿದೆ. ಆಸ್ಪತ್ರೆಯಲ್ಲಿ ಬಿದ್ದಿರುವ ಶವಗಳನ್ನು ಕೊಂಡೊಯ್ಯಲೂ ಕುಟುಂಬಸ್ಥರು ಸಿದ್ಧರಿಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ.
ಅನಾಥ ಶವಗಳು: “ಕೋವಿಡ್ ಹೊಸ ಅಸ್ಪೃಶ್ಯತೆ ಹುಟ್ಟಿಹಾಕಿದೆ. ಆಸ್ಪತ್ರೆಗಳಲ್ಲಿ ಶವಗಳು ರಾಶಿಬಿದ್ದಿವೆ. ಅವುಗಳಿಗೆ ಸಂಬಂಧಿಸಿದ ಕಾಗದ ಪತ್ರಗಳೂ ಸಿದ್ಧವಾಗಿವೆ. ಆದರೆ, ಸೋಂಕು ತಗುಲುವ ಭಯದಿಂದ ಕುಟುಂಬಸ್ಥರು ಆಸ್ಪತ್ರೆಗಳತ್ತ ಬರುತ್ತಲೇ ಇಲ್ಲ’ ಎಂದು ಕಿಂಗ್ ಎಡ್ವರ್ಡ್ ಸಾರ್ವಜನಿಕ ಆಸ್ಪತ್ರೆಯ ದಾದಿ ಮಾಧುರಿ ರಾಮದಾಸ್ ಹೇಳಿದ್ದಾರೆ.
1 ಬೆಡ್‌ಗೆ 16 ಗಂಟೆ ಕಾಯಬೇಕು: ಬಹುತೇಕ ಆಸ್ಪತ್ರೆಗಳಲ್ಲಿ ಲಭ್ಯವಿರುವ ಹಾಸಿಗೆಗಳಿಗಿಂತ ದುಪ್ಪಟ್ಟು ಸೋಂಕಿತರು ಕ್ಯೂನಲ್ಲಿ ನಿಂತಿದ್ದಾರೆ. ಒಂದು ಬೆಡ್ ಪಡೆಯಲು ಕನಿಷ್ಠ 16 ಗಂಟೆ ಕಾಯಬೇಕಾಗಿದೆ. ಇತರ ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ವಾರ್ಡ್‌ಗಳನ್ನೂ ಕೊರೊನಾ ವಾರ್ಡ್‌ಗಳಾಗಿ ಮಾರ್ಪಡಿಸಲಾಗಿದೆ. ಆದರೂ ಸೋಂಕಿತರನ್ನು ನಿಯಂತ್ರಿಸಲಾಗುತ್ತಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Himachal Pradesh; ಸಿಎಂಗೆ ತಂದಿದ್ದ ಸಮೋಸಾ ಮಾಯ: ಸಿಐಡಿ ತನಿಖೆ?
Minister Sudhakar: ಸೀಟ್ ಬ್ಲಾಕಿಂಗ್ ದಂಧೆ ವಿರುದ್ಧ ಕ್ರಿಮಿನಲ್ ಕೇಸ್ ಅಸ್ತ್ರ
Trump ಗೆಲ್ಲುತ್ತಿದ್ದಂತೆ ಅಮೆರಿಕ ತೊರೆಯಲು ಜನರಿಂದ ಭರದ ಸಿದ್ಧತೆ
Yogi ‘ಬಟೇಂಗೆ’ಹೇಳಿಕೆ ಒಪ್ಪಲ್ಲ ಎಂದ ಅಜಿತ್: ಮಹಾಯುತೀಲಿ ಬಿರುಕು?
Canada; ನಮ್ಮಲ್ಲಿರುವ ಎಲ್ಲ ಹಿಂದೂಗಳು ಮೋದಿ ಬೆಂಬಲಿಗರಲ್ಲ: ಟ್ರಾಡೋ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.