ಅರುಣಾಚಲ ಸಿಎಂ ವಿರುದ್ಧ ಅತ್ಯಾಚಾರ ಆರೋಪ
Team Udayavani, Mar 16, 2019, 12:30 AM IST
ಹೊಸದಿಲ್ಲಿ: 2008ರಲ್ಲಿ ಅರುಣಾಚಲ ಮುಖ್ಯಮಂತ್ರಿ ಪೆಮಾ ಖಂಡು ಸೇರಿದಂತೆ ನಾಲ್ವರು ತಮ್ಮ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆಂದು ಆರೋಪಿಸಿ ಮಹಿಳೆಯೊಬ್ಬರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಆದರೆ, ಈ ವಿಚಾರದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂಕೋರ್ಟ್ ನಿರಾಕರಿಸಿದ್ದು, ಕೇಸು ದಾಖಲಿಸಲು ಮಾಡಿರುವ ವಿಳಂಬದ ಬಗ್ಗೆ ಪ್ರಶ್ನಿಸಿದೆ. ಜತೆಗೆ, ಹೈಕೋರ್ಟ್ ಮೊರೆ ಹೋಗಿ, ಅಗತ್ಯವಿರುವ ಪೊಲೀಸ್ ರಕ್ಷಣೆ ಪಡೆಯುವಂತೆ ಸೂಚಿಸಿದೆ. ತನಗೆ 15 ವರ್ಷವಾಗಿದ್ದಾಗ ಸಿಎಂ ಪೆಮಾ ಖಂಡು ಹಾಗೂ ಇತರರು ಸರಕಾರಿ ಕೆಲಸ ಕೊಡಿಸುವುದಾಗಿ ಕರೆಸಿಕೊಂಡು, ಪೇಯದಲ್ಲಿ ಅಮಲು ಬರುವ ಪದಾರ್ಥ ಸೇರಿಸಿ, ನನಗೆ ಕುಡಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.