ಕಾಲ್ ಡ್ರಾಪ್ ತಡೆಗೆ ಕ್ರಮ: 58 ಲಕ್ಷ ರೂ. ದಂಡ ವಸೂಲಿ
Team Udayavani, Jan 4, 2019, 11:33 AM IST
ಹೊಸದಿಲ್ಲಿ : ಕೇಂದ್ರ ಸರಕಾರ ಕಾಲ್ ಡ್ರಾಪ್ ತಡೆಗೆ ಕಠಿನ ಕ್ರಮ ತೆಗೆದುಕೊಂಡಿದೆ. ಅಂತೆಯೇ ಐಡಿಯಾ ಮತ್ತು ಬಿಎಸ್ಎನ್ಎಲ್ ಸೇರಿದಂತೆ ಹಲವು ಟೆಲಿಕಾಂ ಸೇವೆ ಪೂರೈಕೆದಾರ ಸಂಸ್ಥೆಗಳಿಗೆ ಕಾಲ್ ಡ್ರಾಪ್ ಗಾಗಿ 58 ಲಕ್ಷ ರೂ. ದಂಡ ವಿಧಿಸಿದೆ.
ಕಳೆದ ಜೂನ್ ತ್ತೈಮಾಸಿಕದಲ್ಲಿ ಬಿಎಸ್ಎನ್ಎಲ್ಗೆ ನಾಲ್ಕು ಲಕ್ಷ ರೂ. ಕಾಲ್ ಡ್ರಾಪ್ ಡಂಡ ವಿಧಿಸಲಾಗಿದ್ದರೆ ಅದೇ ಅವಧಿಯಲ್ಲಿ ಐಡಿಯಾ ಸಂಸ್ಥೆಗೆ 12 ಲಕ್ಷ ರೂ. ದಂಡ ಹೇರಲಾಗಿದೆ ಎಂದು ಟೆಲಿಕಾಂ ಸಚಿವ ಮನೋಜ್ ಸಿನ್ಹಾ ಅವರಿಂದು ರಾಜ್ಯಸಭೆಗೆ ತಿಳಿಸಿದರು.
ಕಾಲ್ ಡ್ರಾಪ್ ದಂಡ ವಿಧಿಸುವ ಕ್ರಮ ಆರಂಭಿಸಲಾದ ಬಳಿಕ ಪರಿಸ್ಥಿತಿ ಸಾಕಷ್ಟು ಸುಧಾರಿಸಿದೆ. ಅಂತೆಯೇ 2014ರಲ್ಲಿ 8 ಲಕ್ಷ ಇದ್ದ ಬಿಟಿಎಸ್ ಕೌಂಟ್ ಕಳೆದ ನಾಲ್ಕು ವರ್ಷಗಳಲ್ಲಿ 20 ಲಕ್ಷಕ್ಕೆ ಏರಿದೆ ಎಂದು ಸಚಿವ ಸಿನ್ಹಾ ತಿಳಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.