Pension crisis; ಹುತಾತ್ಮ ಯೋಧನ ಪಿಂಚಣಿ ಹೆತ್ತವರು, ಪತ್ನಿಗೆ ಹಂಚಿಕೆ?
ಬಿಕ್ಕಟ್ಟು ತಪ್ಪಿಸಲು ಕೇಂದ್ರ ಪರಿಶೀಲನೆ
Team Udayavani, Aug 11, 2024, 6:45 AM IST
ಹೊಸದಿಲ್ಲಿ: ಹುತಾತ್ಮ ಯೋಧರ ಪಿಂಚಣಿಯನ್ನು ಇನ್ನು ಮುಂದೆ ಅವರ ಪತ್ನಿ ಮತ್ತು ಹೆತ್ತವರಿಗೆ ವಿಭಜಿಸಿ ನೀಡುವ ನಿಯಮವನ್ನು ಜಾರಿಗೆ ತರುವ ಬಗ್ಗೆ ಕೇಂದ್ರ ಸರಕಾರ ಪರಿಶೀಲಿಸಲಿದೆ.ಹೀಗೆಂದು ರಕ್ಷಣ ಖಾತೆಯ ಸಹಾ ಯಕ ಸಚಿವ ಸಂಜಯ್ ಸೇಠ್ ಶುಕ್ರ ವಾರ ಲೋಕಸಭೆಗೆ ತಿಳಿಸಿದ್ದಾರೆ. ಈ ಮೂಲಕ ಹುತಾತ್ಮ ಯೋಧರ ಪಿಂಚಣಿ ಹಂಚಿಕೆ ವಿಷಯದಲ್ಲಿ ಉಂಟಾಗುವ ಗೊಂದಲಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹೆಜ್ಜೆಯಿಡಲು ಸರಕಾರ ಮುಂದಾಗಿದೆ.
ಹುತಾತ್ಮ ಯೋಧರ ಪಿಂಚಣಿ ಮೊತ್ತವನ್ನು ವಿಭಜಿಸಿ ನೀಡುವ ಬಗ್ಗೆ ನಿಯಮದಲ್ಲಿ ತಿದ್ದುಪಡಿ ತರಬೇಕು ಎಂದು ಯೋಧರ ಕುಟುಂಬಗಳಿಂದ ಕೋರಿಕೆಗಳು ಬಂದಿವೆಯೇ ಎಂದು ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಲೋಕಸಭೆಯಲ್ಲಿ ಪ್ರಶ್ನಿಸಿದ್ದರು. ಉತ್ತರಿಸಿದ ಸಚಿವ ಸಂಜಯ್ ಸೇs…, “ಪಿಂಚಣಿಯನ್ನು ಪತ್ನಿ ಮತ್ತು ಹೆತ್ತವರಿಗೆ ವಿಭಜಿಸಿ ನೀಡುವ ಕುರಿತ ಪ್ರಸ್ತಾವನೆಗಳು ಬಂದಿದ್ದು, ಅದನ್ನು ಪರಿಶೀಲಿಸುತ್ತಿದ್ದೇವೆ’ ಎಂದಿದ್ದಾರೆ. ಭಾರತೀಯ ಸೇನೆ ಕೂಡ ಈ ನಿಯಮ ಬದಲಾವಣೆ ಮಾಡುವ ಬಗ್ಗೆ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.
ಹುತಾತ್ಮ ಯೋಧರ ಪಿಂಚಣಿ ಮತ್ತು ಇತರ ಸೌಲಭ್ಯಗಳು ಪತ್ನಿಗೆ ಮಾತ್ರ ಸಿಗುವುದರ ಬಗ್ಗೆ ಹೆತ್ತವರು ತಕರಾರು ಎತ್ತಿರುವ, ಇದೇ ಕಾರಣಕ್ಕೆ ಕುಟುಂಬಗಳಲ್ಲಿ ವೈಮನಸ್ಸು ಉಂಟಾಗಿರುವ ಅನೇಕ ಘಟನೆಗಳು ನಡೆದಿವೆ. ಕಳೆದ ವರ್ಷ ಸಿಯಾಚಿನ್‌ನಲ್ಲಿ ಹುತಾತ್ಮರಾದ ಕ್ಯಾಣ ಅಂಶುಮಾನ್ ಸಿಂಗ್ ಅವರ ಪಿಂಚಣಿ, ಇತರ ವಿತ್ತೀಯ ಸವಲತ್ತುಗಳನ್ನು ಹಂಚಿಕೊಳ್ಳುವ ವಿಚಾರವಾಗಿ ಪತ್ನಿ ಮತ್ತು ಹೆತ್ತವರ ನಡುವೆ ಉಂಟಾಗಿದ್ದ ಜಗಳ ಭಾರೀ ಸುದ್ದಿಯಾಗಿತ್ತು.
ಈಗಿರುವ ನಿಯಮವೇನು?
ಪ್ರಸ್ತುತ ನಿಯಮ ಪ್ರಕಾರ ಹುತಾತ್ಮ ಯೋಧನ ಕೌಂಟುಂಬಿಕ ಪಿಂಚಣಿ ಮೊತ್ತವನ್ನು ಪತ್ನಿಗೆ ಮಾತ್ರ ನೀಡಲಾಗುತ್ತದೆ. ಆ ಯೋಧ ಅವಿವಾಹಿತನಾಗಿದ್ದರೆ ಮಾತ್ರ ಪಿಂಚಣಿ ಮೊತ್ತ ಹೆತ್ತವರಿಗೆ ಸಿಗುತ್ತದೆ. ಇನ್ನು ಗ್ರಾಚುಯಿಟಿ, ವಿಮೆ, ಭವಿಷ್ಯ ನಿಧಿ ಇತ್ಯಾದಿ ಹುತಾತ್ಮನ ನಾಮಿನಿಗೆ ನೀಡಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
Adani Group: ಲಂಚ, ಸತ್ಯ ಮರೆಮಾಚಿದ ಕಾರಣಕ್ಕೆ ಗೌತಮ್ ಅದಾನಿ ವಿರುದ್ದ ಅಮೆರಿಕದಲ್ಲಿ ಕೇಸು
MUST WATCH
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಹೊಸ ಸೇರ್ಪಡೆ
IFFI 2024: ತಾಲಿಯಾ..ತಾಲಿಯಾ…ಜೋರ್ ದಾರ್ ತಾಲಿಯಾ..!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
KMC: ನವೀಕೃತ ವೈದ್ಯಕೀಯ ಆಂಕೊಲಾಜಿ ಹೊರರೋಗಿ, ಕಿಮೊಥೆರಪಿ ಡೇ ಕೇರ್ ಕೇಂದ್ರ ಉದ್ಘಾಟನೆ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.