ಪ್ರವಾಸಿ ಸ್ಥಳಗಳನ್ನು ನೋಡಲೆಂದೇ ಕಾಂಚನಗಂಗಾ ರೈಲು ಏರುವ ಜನರು
ಪಶ್ಚಿಮ ಬಂಗಾಲ ಸೇರಿ ಐದು ರಾಜ್ಯಗಳಲ್ಲಿ 1,551 ಕಿ.ಮೀ. ರೈಲು ಸಂಚಾರ
Team Udayavani, Jun 18, 2024, 6:25 AM IST
ಹೊಸದಿಲ್ಲಿ: ಸಿಯಾಲ್ಡಾ ಕಾಂಚನಗಂಗಾ ರೈಲು ಈಶಾನ್ಯ ಭಾರತ ಮತ್ತು ದೇಶದ ಉಳಿದ ಭಾಗಗಳಿಗೆ ಸಂಪರ್ಕ ಕಲ್ಪಿಸುವ ವಿಶೇಷ ರೈಲಾಗಿದೆ. ಅದು ಕೋಲ್ಕತಾದ ಸಿಯಾಲ್ಡಾ ರೈಲು ನಿಲ್ದಾಣದಿಂದ ತ್ರಿಪುರಾ ರಾಜಧಾನಿ ಅಗರ್ತಲಾಕ್ಕೆ ಸಂಚರಿಸುತ್ತದೆ.
ಈ ರೈಲು ಪ್ರವಾಸಿಗರ ರೈಲು ಎಂದೇ ಜನಪ್ರಿಯ. ಪಶ್ಚಿಮ ಬಂಗಾಲ ಮತ್ತು ಈಶಾನ್ಯ ರಾಜ್ಯಗಳಲ್ಲಿ ಹೆಚ್ಚಿನ ಪ್ರವಾಸಿ ಸ್ಥಳಗಳು ಇರುವು ದರಿಂದ ಅಲ್ಲಿಗೆ ಭೇಟಿ ನೀಡುವ ನಿಟ್ಟಿನಲ್ಲಿ ಈ ರೈಲನ್ನೇ ಹೆಚ್ಚು ಆಶ್ರಯಿಸುತ್ತಾರೆ. ಪೂರ್ವ ರೈಲ್ವೇ ವಿಭಾಗವು ಈ ರೈಲನ್ನು ನಿಯಂತ್ರಿಸುತ್ತದೆ. 24 ಪ್ರಮುಖ ನಿಲ್ದಾಣಗಳ ಸೇರಿ 35 ರಿಂದ 40 ನಿಲ್ದಾಣಗಳ ನಡುವೆ ಸಂಚರಿಸುವ ಈ ರೈಲು 1,551 ಕಿ.ಮೀ. ದೂರ ಕ್ರಮಿಸುತ್ತದೆ.
1960ರಲ್ಲಿ ರೈಲು ಸಿಯಾಲ್ಡಾದಿಂದ ನ್ಯೂ ಜಲ್ಪಾಯಿಗುರಿವರೆಗೆ ಸಂಚರಿಸುತ್ತಿತ್ತು. ಇಲ್ಲಿಂದ ಕಾಂಚನ ಗಂಗಾ ಶಿಖರ ಗೋಚ ರಿಸುತ್ತದೆ. ಹೀಗಾಗಿ, ರೈಲಿಗೆ ಕಾಂಚನಗಂಗಾ ಹೆಸರನ್ನು ಇರಿಸಲಾಗಿದೆ.
ಎಲ್ಲಿಂದ ಎಲ್ಲಿಗೆ?: ಸಿಯಾಲ್ಡಾದಿಂದ ಅಗರ್ತಲಾಕ್ಕೆ
ಈ ರಾಜ್ಯಗಳಲ್ಲಿ ಸಂಚಾರ: ಪಶ್ಚಿಮ ಬಂಗಾಲ, ಝಾರ್ಖಂಡ್, ಬಿಹಾರ, ಅಸ್ಸಾಂ ಹಾಗೂ ತ್ರಿಪುರಾ
ವಿಭಾಗ: ಪೂರ್ವ ರೈಲ್ವೇ
ಪ್ರಮುಖ ನಿಲುಗಡೆ: 24 ನಿಲ್ದಾಣಗಳು
ಒಟ್ಟು ಸಂಚರಿಸುವ ದೂರ: 1,551 ಕಿ.ಮೀ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Proposes: ಪುರುಷ ಟೈಲರ್ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
Aligarh ಮುಸ್ಲಿಮ್ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.