ಪುದುಚೆರಿ ಚುನಾವಣೆಯು ಬಿಜೆಪಿಯ ಅಂತ್ಯಕ್ಕೆ ನಾಂದಿ ಹಾಡುತ್ತದೆ : ಮೊಯ್ಲಿ
ಕಾಂಗ್ರೆಸ್ ಮತ್ತೆ ಪುದುಚೆರಿಯ ಅಧಿಕಾರವನ್ನು ಹಿಡಿಯುತ್ತದೆ : ಮೊಯ್ಲಿ ವಿಶ್ವಾಸ
Team Udayavani, Feb 24, 2021, 5:07 PM IST
ನವ ದೆಹಲಿ : ಪುದುಚೆರಿಯಲ್ಲಿ ಕಾಂಗ್ರೆಸ್ ತನ್ನ ಅದಿಕಾರವನ್ನು ಕಳೆದುಕೊಳ್ಳುವುದಕ್ಕೆ ಬಿಜೆಪಿಯ ಹಣಬಲವೇ ಕಾರಣ ಎಂದು ಕಾಂಗ್ರೆಸ್ ಆರೋಪ ಮಾಡಿದೆ.
ಮುಂದಿನ ಚುನಾವಣೆಯಲ್ಲಿ ತಕ್ಕ ಉತ್ತರವನ್ನು ಬಿಜೆಪಿಗೆ ಜನರು ನೀಡಲಿದ್ದಾರೆ ಎಂದು ಕಾಂಗ್ರೆಸ್ ನ ಹಿರಿಯ ನಾಯಕ ವೀರಪ್ಪ ಮೊಯ್ಲಿ ಹೇಳಿದ್ದಾರೆ.
ಕಾಂಗ್ರೆಸ್ ತನ್ನ ಮೈತ್ರಿಯನ್ನು ಡಿ ಎಮ್ ಕೆ(Dravida Munnetra Kazhagam) ಯೊಂದಿಗೆ ಮುಂದುವರಿಸುತ್ತದೆ. ಮುಂದಿನ ಚುನಾವಣೆಯಲ್ಲಿ ಬಹುಮತದಿಂದ ಗೆದ್ದು ಅಧಿಕಾರವನ್ನು ಹಿಡಿಯುತ್ತದೆ ಎಂದು ಕೇಂದ್ರಾಡಳಿ ಪ್ರದೇಶಗಳ ಚುನಾವಣಾ ವೀಕ್ಷಕರಾದ ವೀರಪ್ಪ ಮೊಯ್ಲಿ ಹೇಳಿದ್ದಾರೆ.
ಓದಿ :ಮಹಾನಗರ ಪಾಲಿಕೆ ಅಧಿಕಾರ ಚುಕ್ಕಾಣಿ ಯಾರಿಗೆ?
ಪುದುಚೆರಿ ಚುನಾವಣೆಯು ಬಿಜೆಪಿಯ ಅಂತ್ಯಕ್ಕೆ ನಾಂದಿ ಹಾಡುತ್ತದೆ. ಕಾಂಗ್ರೆಸ್ ನ ಹೊಸ ಆರಂಭಕ್ಕೆ ಸಾಕ್ಷಿಯಾಗಲಿದೆ ಎಂದು ಮೊಯ್ಲಿ ಪಿಟಿಐ ನ ಸಂದರ್ಶನದಲ್ಲಿ ಹೇಳಿದ್ದಾರೆ.
ಪುದುಚೆರಿಯಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಸುಗಮವಾಗಿ ಆಡಳಿತ ನಡೆಸಲು ಆಗಿನ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಅವಕಾಶ ನೀಡಿರಲಿಲ್ಲ ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ಕಾಲಕಾಲಕ್ಕೆ ಕಾರ್ಯ ನಿರ್ವಹಿಸಲು ಬಿಡದಂತೆ ಮಾಡುವುದೇ ಕಿರಣ್ ಬೇಡಿಯವರ ಮುಖ್ಯ ಧ್ಯೆಯವಾಗಿತ್ತು. ನಾವು ಈ ವಿಚಾರವನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಗಮನಕ್ಕೂ ತಂದಿದ್ದೆವು. ಮುಖ್ಯಮಂತ್ರಿ ನಾರಾಯಣ ಸ್ವಾಮಿ ಮಾಧ್ಯಮಗಳ ಮೂಲಕ ಕೂಡ ಗಮನಕ್ಕೆ ತರುವಂತಹ ಪ್ರಯತ್ನ ಮಾಡಿದ್ದರು. ಆದರೆ, ಅವರು ಈ ಬಗ್ಗೆ ಏನೂ ಗಮನ ಹರಿಸಿಲ್ಲ ಎಂದು ಮೊಯ್ಲಿ ಹೇಳಿದ್ದಾರೆ.
ಇನ್ನು, ಪುದುಚೆರಿಯಲ್ಲಿ ಪ್ರಜಾ ಪ್ರಭುತ್ವವನ್ನು ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಸಾಯಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ಶಾಸಕರು ಹಾಗೂ ಡಿ ಎಮ್ ಕೆ ಪಕ್ಷದ ಶಾಸಕರೊಬ್ಬರು ರಾಜಿನಾಮೆ ನೀಡಲು ಬಿಜೆಪಿ ಹಣದ ಆಮಿಷವೊಡ್ಡಿದೆ ಎನ್ನುವುದಕ್ಕೆ ಅನುಮಾನ ಬೇಕಿಲ್ಲ. ಶಾಸಕರ ರಾಜೀನಾಮೆ ಮತ್ತು ಪುದುಚೆರಿಯಲ್ಲಿ ಕಾಂಗ್ರೆಸ್ ಸರ್ಕಾರದ ಪತನವನ್ನು ಲೆಫ್ಟಿನೆಂಟ್ ಗವರ್ನರ್ ಮೂಲಕ ಭಾರತ ಸರ್ಕಾರವು “ನೇರವಾಗಿ ಬೆಂಬಲಿಸಿದ ಪ್ರಜಾಪ್ರಭುತ್ವದ ಮುಕ್ತ ಹತ್ಯಾಕಾಂಡ” ಎಂದು ಮೊಯ್ಲಿ ಬಣ್ಣಿಸಿದ್ದಾರೆ.
ಓದಿ : ದೇಶದ ಅತ್ಯಂತ ದೊಡ್ಡ ದಂಗೆಕೋರ ಮೋದಿ : ಮಮತಾ ಬ್ಯಾನರ್ಜಿ
ಸರ್ಕಾರ ಪತನಗೊಂಡಿದ್ದು ರಾಜಿನಾಮೆ ನೀಡಿದ ಶಾಸಕರಿಂದಲ್ಲ, ನಾಮ ನಿರ್ದೇಶಿತ ಶಾಸಕರಿಗೆ ವಿಶ್ವಾಸ ಮತಯಾಚನೆಯಲ್ಲಿ ಮತ ಚಲಾವಣೆ ಮಾಡಲು ಅವಕಾಶ ಮಾಡಲು ಕೊಟ್ಟಿರುವುದೇ ಕಾರಣ ಎಂದು ಅಭಿಪ್ರಾಯ ಪಟ್ಟರು.
ನಾಮನಿರ್ದೇಶಿತ ಮೂರು ಶಾಸಕರಿಗೆ ವಿಶ್ವಾತ ಮತ ಚಲಾವಣೆ ಮಾಡಲು ಅವಕಾಶ ನಿಡಿರುವುದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾದದ್ದು, ಈ ಬಗ್ಗೆ ನ್ಯಾಯಾಮಗ ಕೂಡ ಕ್ರಮ ತೆಗೆದುಕೊಳ್ಳುವಲ್ಲಿ ವಿಳಂಬ ಮಾಡಿತು ಎಂದು ಅವರು ಹೇಳಿದ್ದಾರೆ.
ಇನ್ನು, ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿಯವರನ್ನು ವಜಾಗೊಳಿಸಿದ ವಿಚಾರಕ್ಕೆ ಸಂಬಂಧ ಪಟ್ಟಂತೆ, ಇದು ಅವರಿಗೆ(ಬಿಜೆಪಿ) ಚುನಾಚನೆಯಲ್ಲಿ ಸಹಾಯ ಆಗಬಹುದೆಂದು ಅಂದುಕೊಂಡಿದ್ದಾರೆ. ಮತದಾರರು ಅವರತ್ತ ತಿರುಗಬಹುದು ಅಂತಂದುಕೊಂಡಿದ್ದಾರೆ. ಆದರೇ ಅದು ಹಾಗಾಗಲಾರದು ಎಂದು ಅವರು ಅಭಿಪ್ರಾಯ ಪಟ್ಟರು.
ಈಗ ಎಲ್ಲವನ್ನೂ ಕಿರಣ್ ಬೇಡಿ ಅವರ ತಲೆ ಮೇಲೆ ಹೇರುತ್ತಾರೆ. ಗೊಂಬೆಯಂತೆ ಕಿರಣ್ ಬೇಡಿಯವರನ್ನು ಬಳಸಿಕೊಂಡರು. ಈಗ ಅವರನ್ನು ದೂರುತ್ತಾರೆ. ಅವರು ಹೇಳಿದಂತೆ ಕಿರಣ್ ಬೇಡಿ ಇದ್ದರು. ಇವೆಲ್ಲವೂ ಕಾಂಗ್ರೆಸ್ ವಿರುದ್ಧ ಬಿಜೆಪಿ ನಡೆಸಿದ ಆಟ ಎಂದು ಅವರು ಆರೋಪಿಸಿದರು.
ಇನ್ನು, ಕಾಂಗ್ರೆಸ್ ಮತ್ತೆ ಪುದುಚೆರಿಯ ಅಧಿಕಾರವನ್ನು ಹಿಡಿಯುತ್ತದೆ ಎಂದು ವೀರಪ್ಪ ಮೊಯ್ಲಿ ವಿಶ್ವಾಸ ವ್ಯಕ್ತ ಪಡಿಸಿದರು.
ಓದಿ : ಉತ್ತರಾಖಂಡ ದುರಂತದಲ್ಲಿ ತಂದೆ ಕಳೆದುಕೊಂಡ 4 ಮಕ್ಕಳ ದತ್ತು ಪಡೆದ ನಟ ಸೋನು !
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.