![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Jun 19, 2019, 5:00 AM IST
ನವದೆಹಲಿ: ಮುಂದಿನ ದಿನಗಳಲ್ಲಿ ಮಾಲ್ಗೆ ಸುತ್ತಾಡಲು ಹೋದಾಗ ಪಾರ್ಕಿಂಗ್‌ನಲ್ಲಿ ಕಾರು ನಿಲ್ಲಿಸಿದಾಗಲೇ ಪೆಟ್ರೋಲ್ ತುಂಬಿಸಿಕೊಳ್ಳಬಹುದು. ಅಷ್ಟೇ ಅಲ್ಲ, ಗ್ರಾಮೀಣ ಪ್ರದೇಶಗಳಲ್ಲೂ ಇನ್ನು ಪೆಟ್ರೋಲ್ ಬಂಕ್‌ಗಳ ಸಂಖ್ಯೆ ಜಾಸ್ತಿಯಾದೀತು.
ಪೆಟ್ರೋಲ್ ಬಂಕ್‌ಗಳ ಸ್ಥಾಪನೆ ಹಾಗೂ ಅವುಗಳ ನಿರ್ವಹಣೆ ಕುರಿತಂತೆ ಕೇಂದ್ರ ಸರ್ಕಾರ ರೂಪಿಸಿದ ಸಮಿತಿಯೊಂದು ವರದಿ ಸಲ್ಲಿಕೆ ಮಾಡಿದ್ದು, ಪೆಟ್ರೋಲ್ ಬಂಕ್ ಸ್ಥಾಪನೆಗೆ ಈಗ ಇರುವ ನಿಯಮಗಳನ್ನು ಸಡಿಲಗೊಳಿಸುವ ಪ್ರಸ್ತಾವನೆ ಮಾಡಿದೆ. ಒಂದು ವೇಳೆ ಈ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡು ಜಾರಿಗೆ ತಂದಲ್ಲಿ, ಸೂಪರ್‌ಮಾರ್ಕೆಟ್‌ಗಳು ಕೂಡ ಪೆಟ್ರೋಲ್ ಬಂಕ್‌ಗಳನ್ನು ಸ್ಥಾಪಿಸಲು ಅನುಮತಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಸದ್ಯ ತೈಲ ಉದ್ಯಮದಲ್ಲಿ 2 ಸಾವಿರ ಕೋಟಿ ರೂ. ಹೂಡಿಕೆ ಮಾಡಿರುವ ಕಂಪನಿಗಳು ಮಾತ್ರ ಪೆಟ್ರೋಲ್ ಬಂಕ್ ಸ್ಥಾಪಿಸಬಹುದು. ಇದರಿಂದ ದೊಡ್ಡ ದೊಡ್ಡ ಕಂಪನಿಗಳು ಮಾತ್ರವೇ ಪೆಟ್ರೋಲ್ ಬಂಕ್ ಸ್ಥಾಪಿಸಬಹುದಾಗಿತ್ತು. ಆದರೆ, ಈಗ ಸಮಿತಿ, ಗ್ರಾಹಕರ ಸೇವೆಯನ್ನು ಮಾಡುವಲ್ಲಿ ಒಂದು ಸಂಸ್ಥೆ ಉತ್ತಮ ಇತಿಹಾಸ ಹೊಂದಿದೆಯೇ ಎಂಬುದನ್ನು ಲೈಸೆನ್ಸ್ ನೀಡುವಾಗ ಪರಿಗಣಿಸಬೇಕು ಎಂಬುದಾಗಿ ಶಿಫಾರಸು ಮಾಡಿದೆ. 250 ಕೋಟಿ ರೂ.ಗಿಂತ ಹೆಚ್ಚು ವಹಿವಾಟು ಹೊಂದಿರುವ ಕಂಪನಿಗೆ ಲೈಸೆನ್ಸ್ ನೀಡಬಹುದು ಎಂದೂ ಹೇಳಿದೆ.
ಸರ್ಕಾರ ಈ ಪ್ರಸ್ತಾವನೆಗೆ ಒಪ್ಪಿ ಜಾರಿಗೊಳಿಸಿದರೆ, ರಿಟೇಲ್ ಔಟ್ಲೆಟ್‌ಗಳನ್ನು ಹೊಂದಿರುವ ಕಂಪನಿಗಳು ಪೆಟ್ರೋಲ್ ಪಂಪ್‌ಗ್ಳನ್ನು ಸ್ಥಾಪಿಸಬಹುದು. ಸಾಮಾನ್ಯವಾಗಿ ಸೂಪರ್‌ಮಾರ್ಕೆಟ್‌ಗಳಲ್ಲಿ ಪಾರ್ಕಿಂಗ್ ಪ್ರದೇಶ ಇರುವುದರಿಂದ, ಇವು ಪೆಟ್ರೋಲ್ ಪಂಪ್ ಸ್ಥಾಪನೆಗೆ ಆಸಕ್ತಿ ತೋರಬಹುದು. ಫ್ಯೂಚರ್ ಗ್ರೂಪ್, ರಿಲಯನ್ಸ್ ರಿಟೇಲ್ ಹಾಗೂ ಇತರ ಕಂಪನಿಗಳು ಈಗಾಗಲೇ ಈ ಕುರಿತು ಆಸಕ್ತಿ ಹೊಂದಿವೆ ಎನ್ನಲಾಗಿದೆ.
You seem to have an Ad Blocker on.
To continue reading, please turn it off or whitelist Udayavani.