ನಂಬಿದ್ರೆ ನಂಬಿ! ಪೆಟ್ರೋಲ್ ಲೀಟರ್‌ಗೆ 34.04, ಡೀಸೆಲ್‌ಗೆ 38.67 ರೂ.
Team Udayavani, Dec 21, 2018, 5:18 PM IST
ಹೊಸದಿಲ್ಲಿ : ಯಾವುದೇ ತೆರಿಗೆ ಮತ್ತು ಡೀಲರ್ ಕಮಿಷನ್ ಸೇರದಿದ್ದಲ್ಲಿ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಲೀಟರ್ ಬೆಲೆ ಎಷ್ಟಿರುತ್ತದೆ ಗೊತ್ತೇ ?ಅನುಕ್ರಮವಾಗಿ ಕೇವಲ 34.04 ರೂ. ಮತ್ತು 38.67 ರೂ.
ಇಷ್ಟೊಂದು ಅಗ್ಗದ ಪೆಟ್ರೋಲ್ ಮತ್ತು ಡೀಸೆಲ್ ದರಗಳಿಗೆ ಸೇರುವ ತೆರಿಗೆ ಮತ್ತು ಡೀಲರ್ ಕಮಿಷನ್ ಪ್ರಮಾಣ ಅನುಕ್ರಮವಾಗಿ ಶೇ.96.9 ಮತ್ತು ಶೇ.60.3 ಆಗಿರುತ್ತದೆ ಎಂಬ ವಿಷಯವನ್ನು ಲೋಕಸಭೆಯಲ್ಲಿ ಇಂದು ಶುಕ್ರವಾರ ಸಹಾಯಕ ಹಣಕಾಸು ಸಚಿವ ಶಿವ ಪ್ರತಾಪ್ ಶುಕ್ಲಾ ಲಿಖೀತವಾಗಿ ತಿಳಿಸಿದರು.
ಅಂತೆಯೇ ಡಿ.19ರಂದು ದಿಲ್ಲಿಯಲ್ಲಿ ಪೆಟ್ರೋಲ್ ದರ ಲೀಟರಿಗೆ 70.63 ರೂ. ಇತ್ತು. ಇದರಲ್ಲಿ 17.98 ರೂ. ಕೇಂದ್ರ ಅಬಕಾರಿ ಸುಂಕ, 15.02 ರೂ. ರಾಜ್ಯ ವ್ಯಾಟ್ ಮತ್ತು 3.59 ರೂ. ಡೀಲರ್ ಕಮಿಷನ್ ಸೇರಿಕೊಂಡಿದೆ ಎಂದು ಶುಕ್ಲಾ ತಿಳಿಸಿದರು.
ಡೀಸೆಲ್ ಲೀಟರ್ ದರ 64.54ರಲ್ಲಿ 13.83 ರೂ. ಕೇಂದ್ರ ಅಬಕಾರಿ ಸುಂಕ, 9.51 ರೂ. ರಾಜ್ಯ ವ್ಯಾಟ್ ಮತ್ತು 2.53 ರೂ. ಡೀಲರ್ ಕಮಿಷನ್ ಸೇರಿಕೊಂಡಿದೆ ಎಂದವರು ತಿಳಿಸಿದರು.
ಪೆಟ್ರೋಲ್ ಮತ್ತು ಡೀಸೆಲ್ ದರಗಳು ದಿನ ನಿತ್ಯ ಮಾರುಕಟ್ಟೆಯ ಏರುಪೇರಿಗೆ ಅನುಗುಣವಾಗಿ ಬದಲಾಗುತ್ತವೆ. ಇವುಗಳ ದರ ರಾಜ್ಯದಿಂದ ರಾಜ್ಯಕ್ಕೆ ಬದಲಾಗಲು ಆಯಾ ರಾಜ್ಯಗಳಲ್ಲಿನ ವಿವಿಧ ಪ್ರಮಾಣದ ವ್ಯಾಟ್ ಕಾರಣವಾಗಿದೆ.
ಕಳೆದ ಹಣಕಾಸು ವರ್ಷದಲ್ಲಿ ಕೇಂದ್ರ ಸರಕಾರಕ್ಕೆ ಪೆಟ್ರೋಲ್ ಮಾರಾಟದಿಂದ 73,516.80 ಕೋಟಿ ರೂ. ಅಬಕಾರಿ ಸುಂಕ ಸಿಕ್ಕಿದೆ; ಡೀಸೆಲ್ ಮಾರಾಟದಿಂದ 1.5 ಲಕ್ಷ ಕೋಟಿ ರೂ. ಸಿಕ್ಕಿದೆ ಎಂದು ಸಚಿವರು ಹೇಳಿದರು.
ಹಾಲಿ ಹಣಕಾಸು ವರ್ಷದ ಮೊದಲ ಆರು ತಿಂಗಳಲ್ಲಿ ಕೇಂದ್ರ ಸರಕಾರಕ್ಕೆ ಪೆಟ್ರೋಲ್ ಮಾರಾಟದಿಂದ 25,318.10 ಕೋಟಿ ರೂ. ಮತ್ತು ಡೀಸೆಲ್ ಮಾರಾಟದಿಂದ 46,548.80 ಕೋಟಿ ರೂ. ಅಬಕಾರಿ ಸುಂಕ ಸಂಗ್ರಹವಾಗಿದೆ ಎಂದು ಸಚಿವರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.