18 ದಿನಗಳಲ್ಲಿ ಪೆಟ್ರೋಲ್ ಬೆಲೆ 4.05 ರೂ. ಇಳಿಕೆ
Team Udayavani, Nov 5, 2018, 9:05 AM IST
ಹೊಸದಿಲ್ಲಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ದರ ಇಳಿಮುಖವಾಗಿರುವುದು ಭಾರತೀಯ ಗ್ರಾಹಕರಲ್ಲಿ ನೆಮ್ಮದಿ ಮೂಡಿಸಿದೆ. ಸತತ 18 ದಿನಗಳಿಂದಲೂ ದೇಶ ದಲ್ಲಿ ಪೆಟ್ರೋಲ್, ಡೀಸೆಲ್ ದರದಲ್ಲಿ ಇಳಿಕೆಯಾಗಿದ್ದು, ರವಿವಾರ ಲೀಟರ್ ಪೆಟ್ರೋಲ್‌ಗೆ 21 ಪೈಸೆ ಮತ್ತು ಡೀಸೆಲ್‌ಗೆ 17 ಪೈಸೆ ಇಳಿಕೆಯಾಗಿದೆ. ಈ ಮೂಲಕ 18 ದಿನಗಳಲ್ಲಿ ಒಟ್ಟಾರೆಯಾಗಿ ಪೆಟ್ರೋಲ್ ಬೆಲೆ ಲೀ.ಗೆ 4.05 ರೂ. ಮತ್ತು ಡೀಸೆಲ್ ಬೆಲೆ 2.33 ರೂ. ಇಳಿಕೆಯಾದಂತಾಗಿದೆ.
ಆಗಸ್ಟ್ 16ರಿಂದ ಒಂದೇ ಸಮನೆ ಏರಿಕೆಯಾಗುತ್ತಾ ಸಾಗಿದ್ದ ತೈಲ ದರ ಅಕ್ಟೋಬರ್ 18ರಿಂದ ಇಳಿಮುಖವಾಗ ತೊಡಗಿತು. ಅಕ್ಟೋಬರ್ 4ರಂದು ದಿಲ್ಲಿಯಲ್ಲಿ ಪೆಟ್ರೋಲ್ ದರ ಲೀ.ಗೆ 84 ಮತ್ತು ಮುಂಬೈನಲ್ಲಿ 91.34 ರೂ. ತಲುಪಿ ದಾಖಲೆ ನಿರ್ಮಿಸಿತ್ತು. ಆ. 16ರಿಂದ ಅ. 4ರ ವರೆಗಿನ ಅವಧಿ ಯಲ್ಲಿ ಒಟ್ಟಾರೆ ಪೆಟ್ರೋಲ್ ಮತ್ತು ಡೀಸೆಲ್ ದರ ಲೀ.ಗೆ ಕ್ರಮವಾಗಿ 6.86 ಮತ್ತು 6.73 ರೂ. ಹೆಚ್ಚಳವಾಗಿತ್ತು. ಅ.18 ರಿಂದ ಕಚ್ಚಾ ತೈಲದ ದರದಲ್ಲಿ ಆದ ಇಳಿಕೆ ಮತ್ತು ಡಾಲರ್ ಎದುರು ರುಪಾಯಿ ಮೌಲ್ಯ ಏರಿಕೆಯು ಪೆಟ್ರೋಲ್, ಡೀಸೆಲ್ ದರ ಇಳಿಯಲು ಕಾರಣವಾಯಿತು. ಆಗಸ್ಟ್, ಸೆಪ್ಟೆಂ ಬರ್ ತಿಂಗಳಲ್ಲಿ ಏರಿಕೆಯಾದ ಬೆಲೆಗಿಂತಲೂ ಹೆಚ್ಚಿನ ಬೆಲೆ ಇಳಿಕೆ ಕಳೆದ 18 ದಿನಗಳಲ್ಲಿ ಕಂಡುಬಂದಿದೆೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Assam: ಕಲ್ಲಿದ್ದಲು ಗಣಿ ಒಳಗೆ ಪ್ರವಾಹ: 3 ಸಾವು, 6 ಕಾರ್ಮಿಕರು ನಾಪತ್ತೆ!
Life threat: ಸಲ್ಮಾನ್ ಮನೆ ಬಾಲ್ಕನಿಗೆ ಬುಲೆಟ್‌ಪ್ರೂಫ್ ಗಾಜು
GDP: ಈ ವರ್ಷ ಶೇ.6.4ರಷ್ಟು ಜಿಡಿಪಿ ಪ್ರಗತಿ ನಿರೀಕ್ಷೆ: 4 ವರ್ಷಗಳ ಕನಿಷ್ಠ
Car Crash: ಕಾರು ರೇಸ್ ತರಬೇತಿ ವೇಳೆ ನಟ ಅಜಿತ್ ಕುಮಾರ್ ಕಾರು ಅಪಘಾತ!
Ayodhya: ಕನ್ನಡಕದಲ್ಲಿ ರಹಸ್ಯ ಕ್ಯಾಮರಾ ಬಳಸಿ ರಾಮಮಂದಿರದ ಒಳದೃಶ್ಯಗಳ ಸೆರೆಹಿಡಿದ ಯುವಕ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.