ಪೆಟ್ರೋಲ್ ಬಂಕ್ ನಲ್ಲಿ ಟ್ಯಾಂಕರ್‌ಗೆ ಬೆಂಕಿ: ತಪ್ಪಿದ ದುರಂತ!
Team Udayavani, Mar 26, 2018, 11:45 AM IST
ಹೊಸದಿಲ್ಲಿ : ಮಧ್ಯ ಪ್ರದೇಶದಲ್ಲಿ ನಿನ್ನೆ ಭಾನುವಾರ ರಾತ್ರಿ ಪೆಟ್ರೋಲ್ ಪಂಪ್ ಒಂದರಲ್ಲಿ ಪೆಟ್ರೋಲ್ ವರ್ಗಾವಣೆ ಮಾಡುವ ವೇಳೆ ಟ್ಯಾಂಕರ್‌ಗೆ ಬೆಂಕಿ ಹೊತ್ತಿ ಕೊಂಡಾಗ ಅದರ ಚಾಲಕನು ಸಮಯಪ್ರಜ್ಞೆ ತೋರಿ ಧೈರ್ಯ ಸಾಹಸದಿಂದ ಟ್ಯಾಂಕರನ್ನು ಖಾಲಿ ಪ್ರದೇಶಕ್ಕೆ ಒಯ್ದು ಭೀಕರ ಅವಘಡ ಸಂಭವಿಸುವುದನ್ನು ತಪ್ಪಿಸಿರುವ ಘಟನೆ ವರದಿಯಾಗಿದೆ.
ಹೊತ್ತಿ ಉರಿಯುತ್ತಿದ್ದ ಟ್ಯಾಂಕರನ್ನು ಚಾಲಕನು ಧೈರ್ಯದಿಂದ ಚಲಾಯಿಸಿಕೊಂಡು ಖಾಲಿ ಪ್ರದೇಶಕ್ಕೆ ಒಯ್ದು ನಿಲ್ಲಿಸಿದಾಗ ಧಾವಿಸಿ ಬಂದ ಅಗ್ನಿ ಶಾಮಕ ದಳದವರು ಬೆಂಕಿಯನ್ನು ನಂದಿಸುವಲ್ಲಿ ಸಫಲರಾದರು.
#WATCH Truck driver Sajid who drove a burning petrol tanker truck away from a petrol pump in an attempt to save lives on 25th March, in Madhya Pradesh’s Narsignhpur (Mobile phone footage, quality as incoming) pic.twitter.com/LfhZenBulW
— ANI (@ANI) March 26, 2018
ಈ ಘಟನೆ ನಡೆದದ್ದು ಮಧ್ಯ ಪ್ರದೇಶದ ರಾಜಧಾನಿಯಾಗಿರುವ ಭೋಪಾಲ್ ನಿಂದ ಸುಮಾರು 220 ಕಿ.ಮೀ. ದೂರದಲ್ಲಿರುವ ನರಸಿಂಗಪುರದಲ್ಲಿ.
ಟ್ಯಾಂಕರ್‌ನಿಂದ ಪಂಪ್‌ಗೆ ಪೆಟ್ರೋಲ್ ವರ್ಗಾವಣೆ ಮಾಡುವಾಗ ಟ್ಯಾಂಕರ್ ಗೆ ಹೇಗೆ ಬೆಂಕಿ ಹೊತ್ತಿಕೊಂಡಿತು ಎಂಬುದು ಗೊತ್ತಾಗಿಲ್ಲ. ಟ್ಯಾಕರ್ ಮುಂಭಾಗಕ್ಕೆ ಹೊತ್ತಿಕೊಂಡು ಬೆಂಕಿಯು ಕೂಡಲೇ ಭೂಗತ ಬಂಕರ್‌ಗಳಿಗೂ ತಾಗಿತು. ಇದರಿಂದ ಭಾರೀ ಸ್ಫೋಟವಾಗುವ ಸಾಧ್ಯತೆ ಇತ್ತು.
ಆದರೆ ಇದನ್ನು ಮನಗಂಡ ಟ್ಯಾಂಕರ್ ಚಾಲಕನು ಒಡನೆಯೇ, ಹೊತ್ತಿ ಉರಿಯುತ್ತಿದ್ದ ಟ್ಯಾಂಕರನ್ನು ವಾಹನ ದಟ್ಟನೆಯ ರಸ್ತೆಯಲ್ಲೇ ಚಲಾಯಿಸಿಕೊಂಡು ಖಾಲಿ ಪ್ರದೇಶಕ್ಕೆ ಒಯ್ದು ಅಲ್ಲಿ ನಿಲಿಸುವಲ್ಲಿ ಸಫಲನಾದ. ಆತನ ಈ ಸಮಯ ಪ್ರಜ್ಞೆಯಿಂದ ಸಂಭಾವ್ಯ ಭಾರೀ ದುರಂತ ತಪ್ಪಿತು ಎಂದು ಅಗ್ನಿ ಶಾಮಕ ದಳದವರು ಹೇಳಿದರು.
ಕೈಗೆ ಸುಟ್ಟಗಾಯಗಳಾಗಿರುವ ಟ್ಯಾಂಕರ್ ಚಾಲಕನನ್ನು ಆಸ್ಪತ್ರೆಗೆ ಒಯ್ಯುವಾಗ ಸ್ಥಳದಲ್ಲಿದ್ದವರು ಆತನ ಸಮಯ ಪ್ರಜ್ಞೆ, ಧೈರ್ಯ ಸಾಹಸ ಮೆಚ್ಚಿ ಚಪ್ಪಾಳೆ ಹೊಡೆದು ಅಭಿನಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.