ವಿಡಿಯೋ…: ಕಾರಿನ ಮೇಲೊಂದು ಅಂಗಡಿಯ ಮಾಡಿ… ವಾಹ್! ಎಂಥಾ ಐಡಿಯಾ ಮಾರ್ರೆ
Team Udayavani, Nov 25, 2022, 2:57 PM IST
ಮನುಷ್ಯನ ತಲೆ ಹೇಗೆಲ್ಲಾ ಓಡಾಡುತ್ತದೆ ಎಂಬುದಕ್ಕೆ ಇಲ್ಲಿಯ ಚಿತ್ರವೇ ಒಳ್ಳೆಯ ಉದಾಹರಣೆ.. ಹೊಸ ಹೊಸ ತಂತ್ರಜ್ಞಾನ ಬಂದಂತೆಲ್ಲಾ ಜನ ಅದಕ್ಕೆ ಸಮನಾಗಿ ಹೊಂದಿಕೊಂಡು ಹೋಗುತ್ತಾರೆ. ಅಷ್ಟೇ ಅಲ್ಲದೆ ಕೆಲವು ಮಂದಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅದರಲ್ಲೂ ಹೊಸ ಆವಿಷ್ಕಾರಗಳನ್ನು ಮಾಡುತ್ತಾರೆ.
ನೀವೀಗ ನೋಡುತ್ತಿರುವ ಚಿತ್ರ ಲಕ್ನೋ ಪ್ರದೇಶದ್ದು ಸಾಮಾಜಿಕ ಜಾಲತಾಣದಲ್ಲಿ ಈ ಚಿತ್ರಕ್ಕೆ ಭಾರಿ ಪ್ರಶಂಸೆ ವ್ಯಕ್ತವಾಗಿದೆ, ಕೆಲವೊಂದು ಮಂದಿ ಇಂತಹ ವ್ಯವಸ್ಥೆ ನಾನು ನೋಡಿಯೇ ಇಲ್ಲ ಎಂದು ಬರೆದುಕೊಂಡಿದ್ದಾರೆ, ಈ ಆವಿಷ್ಕಾರ ಮಾಡಿದವನಿಗೊಂದು ನಮಸ್ಕಾರ ಎಂದು ಇನ್ನೊಂದಷ್ಟು ಮಂದಿ ಪ್ರತಿಕ್ರಿಯೆ ನೀಡಿದ್ದಾರೆ.
ಅಂದಹಾಗೆ ಈ ಚಿತ್ರವನ್ನು ಐಪಿಎಸ್ ಅಧಿಕಾರಿ ಪಂಕಜ್ ನೈನ್ ಎಂಬವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮಾರುತಿ 800 ಕಾರಿನ ಮೇಲ್ಬಾಗವನ್ನು ಕತ್ತರಿಸಿ ಪಾನ್ ಶಾಪ್ ಮಾಡಿಕೊಂಡಿದ್ದಾರೆ. ಇದರ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಇದೊಂದು ವ್ಯಾಪಾರ ಮಾಡುವ ಹೊಸ ವಿಧಾನವೂ ಹೌದು ಎನ್ನಬಹುದು, ವ್ಯಾಪಾರಿಗಳು ತಮ್ಮ ಗ್ರಾಹಕರನ್ನು ಸೆಳೆಯಲು ಹೊಸ ಹೊಸ ರೀತಿಯಲ್ಲಿ ಆಲೋಚನೆ ಮಾಡುತ್ತಾರೆ ಸದ್ಯ ವೈರಲ್ ಆಗುತ್ತಿರುವ ವಿಡಿಯೋದಿಂದಾಗಿ ಹೆಚ್ಚಿನ ಮಂದಿ ಇಲ್ಲಿಗೆ ಬಂದು ಪಾನ್ ಖರೀದಿಸುತ್ತಿದ್ದಾರಂತೆ.
ಅಷ್ಟೇ ಅಲ್ಲದೆ ಒಂದು ವೇಳೆ ಅಂಗಡಿ ಸ್ಥಳಾಂತರ ಮಾಡುವ ಸಂದರ್ಭ ಬಂದರೂ ಯಾವುದೇ ತೊಂದರೆ ಇಲ್ಲದೆ ಇನ್ನೊಂದು ಕಡೆಗೆ ಸುಲಭವಾಗಿ ಸ್ಥಳಾಂತರಿಸಬಹುದಾಗಿದೆ.
ಏನೇ ಆಗಲಿ ಕಾರನ್ನು ಉಪಯೋಗಿಸಿ ಹೊಸ ಆವಿಷ್ಕಾರ ಮಾಡಿದ ವ್ಯಕ್ತಿಗೆ ನಮ್ಮದೊಂದು ಮೆಚ್ಚುಗೆ ಇದೆ.
ಇದನ್ನೂ ಓದಿ: ನೇಣು ಬಿಗಿದ ಸ್ಥಿತಿಯಲ್ಲಿ ಆಪ್ ನಾಯಕ ಸಂದೀಪ್ ಭಾರದ್ವಾಜ್ ಶವ ಪತ್ತೆ! ತನಿಖೆಗೆ ಬಿಜೆಪಿ ಒತ್ತಾಯ
This is quite innovative ?
( Pc – SM) pic.twitter.com/mfF96IE921— Pankaj Nain IPS (@ipspankajnain) November 22, 2022
कल शाम को मैं भाई की दुकान पर गया और एक मीठा पान खाया ।
अपनी रोजी रोटी कमाने के लिए भाई ने अच्छा दिमाग लगाया और कार को ही दुकान बना दिया । रोज रोज गुमटी हटाने से फुर्सत हो गई
भाई का स्वभाव बहुत अच्छा है और अपनी रोजी रोटी कमाने के लिए ऐसे कदम उठाना कोई गलत काम नही है
??? pic.twitter.com/7U93xQ3ukZ— ? मानव ?❣️ ?? (@MANAVSINGH_IND) November 23, 2022
— ? मानव ?❣️ ?? (@MANAVSINGH_IND) November 23, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Mohan Bhagwat; ತಿಳಿವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.