ಫೋನಿ ಚಂಡಮಾರುತ ಆತಂಕ
Team Udayavani, Apr 28, 2019, 6:08 AM IST
ಚೆನ್ನೈ: ಬಂಗಾಲಕೊಲ್ಲಿಯಲ್ಲಿ ಉಂಟಾಗಿರುವ “ಫೋನಿ’ ಚಂಡ ಮಾರುತವು ತಮಿಳುನಾಡು ಮತ್ತು ಆಂಧ್ರ ಪ್ರದೇಶದ ಕರಾವಳಿಯ ಮೇಲೆ ಪ್ರಭಾವ ಬೀರುವ ಆತಂಕ ಹೊಂದ ಲಾಗಿದೆ. ಫೋನಿ ಚಂಡಮಾರುತ ಮುಂದಿನ 24 ಗಂಟೆಗಳಲ್ಲಿ ತೀವ್ರ ಸ್ವರೂಪ ಪಡೆಯಲಿದೆ. ಸದ್ಯ ಇದು ನಿಧಾನ ವಾಗಿ ಗಂಟೆಗೆ 9 ಕಿ.ಮೀ. ವೇಗದಲ್ಲಿ ಚಲಿಸುತ್ತಿದ್ದು, ಮುಂದೆ ಅತೀ ತೀವ್ರತೆ ಪಡೆದು 170 ಕಿ.ಮೀ.ವರೆಗೂ ವೇಗ ಪಡೆಯಲಿದೆ. ಪ್ರಸ್ತುತ ಇದರ ಕೇಂದ್ರಬಿಂದು ಶ್ರೀಲಂಕಾ ಗಡಿಯಿಂದ 850 ಕಿ.ಮೀ. ಮತ್ತು ಚೆನ್ನೈಯಿಂದ 1,200 ಕಿ.ಮೀ. ದೂರದಲ್ಲಿದೆ.
ಎ. 30ರ ವೇಳೆಗೆ ತೀವ್ರ ಸ್ವರೂಪದ ಚಂಡಮಾರುತವಾಗಲಿದೆ. ಅನಂತರ ಕ್ರಮೇಣ ಅದರ ವೇಗ ಕಡಿಮೆಯಾಗಲಿದೆ. ಈಗಿನ ಚಲನೆಯ ಪ್ರಕಾರ ಅದು ಸಮುದ್ರದಲ್ಲಿಯೇ ತಿರುವು ಪಡೆಯಲಿದೆ. ಭಾರತದ ಕರಾವಳಿಗೆ ಅಪ್ಪಳಿಸುವ ಸಾಧ್ಯತೆ ಕಡಿಮೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar Remarks: ಕನಸಲ್ಲೂ ಅಂಬೇಡ್ಕರ್ರನ್ನು ಅವಮಾನಿಸಿಲ್ಲ: ಅಮಿತ್ ಶಾ
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.