ಏರ್‌ಪೋರ್ಟ್‌ಗಳಲ್ಲಿ ಭೌತಿಕ ತಪಾಸಣೆಗೆ ಶೀಘ್ರ ಕಡಿವಾಣ
ದೇಶಾದ್ಯಂತ ವಿಮಾನ ನಿಲ್ದಾಣಗಳಲ್ಲಿ ಸಂಪೂರ್ಣ ಬಾಡಿ ಸ್ಕ್ಯಾನರ್‌ಗಳ ಅಳವಡಿಕೆ
Team Udayavani, Jun 21, 2023, 7:45 AM IST
ನವದೆಹಲಿ: ಇನ್ನು ಕೆಲವೇ ದಿನಗಳಲ್ಲಿ ಭಾರತದ ವಿಮಾನ ನಿಲ್ದಾಣಗಳಲ್ಲಿ ಭೌತಿಕ ಭದ್ರತಾ ತಪಾಸಣೆಗೆ ಕಡಿವಾಣ ಬೀಳಲಿದೆ. ಎಲ್ಲಾ ಪ್ರಮುಖ ವಿಮಾನ ನಿಲ್ದಾಣಗಳಲ್ಲೂ ಸಂಪೂರ್ಣ ಬಾಡಿ ಸ್ಕ್ಯಾನರ್‌ಗಳನ್ನು ಅಳವಡಿಸಲು ನಾಗರಿಕ ವಿಮಾನಯಾನ ಸಚಿವಾಲಯ ಮುಂದಾಗಿದೆ.
“ದೇಶಾದ್ಯಂತ ವಿಮಾನ ನಿಲ್ದಾಣಗಳಲ್ಲಿ 2ರಿಂದ 4 ಸಂಪೂರ್ಣ ಬಾಡಿ ಸ್ಕ್ಯಾನರ್‌ಗಳು ಮತ್ತು ಮೆಟಲ್ ಡಿಟೆಕ್ಟರ್‌ಗಳನ್ನು ಅಳವಡಿಸಲಾಗುವುದು. ಎಲ್ಲಾ ಪ್ರಯಾಣಿಕರು ಇದರ ಮೂಲಕ ಹಾದುಹೋಗಬೇಕು. ಒಂದು ವೇಳೆ ಅನುಮಾನ ಬಂದರೆ, ಆ ಸಂದರ್ಭಗಳಲ್ಲಿ ಮಾತ್ರ ಅಂಥ ವ್ಯಕ್ತಿಗಳನ್ನು ತೀವ್ರವಾಗಿ ಭೌತಿಕ ತಪಾಸಣೆಗೆ ಒಳಪಡಿಸಲಾಗುವುದು,’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಸಂಪೂರ್ಣ ಬಾಡಿ ಸ್ಕ್ಯಾನರ್‌ಗಳನ್ನು ಅಳವಡಿಸಿದ ನಂತರ ಭೌತಿಕ ಭದ್ರತಾ ತಪಾಸಣೆಗೆ ಕಡಿವಾಣ ಬೀಳಲಿದೆ. ವಿಮಾನ ನಿಲ್ದಾಣ ಸಿಬ್ಬಂದಿ ಮತ್ತು ವಿಮಾನ ಸಿಬ್ಬಂದಿ ಕೂಡ ಬಾಡಿ ಸ್ಕ್ಯಾನರ್‌ಗಳ ಮೂಲಕ ಹಾದುಹೋಗಬೇಕು,’ ಎಂದು ಹೇಳಿದ್ದಾರೆ.
“ಲೋಹವಲ್ಲದ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ಮೆಟಲ್ ಡಿಟೆಕ್ಟರ್‌ಗಳು ಗುರುತಿಸುವುದಿಲ್ಲ. ಹಾಗಾಗಿ ಸಂಪೂರ್ಣ ಬಾಡಿ ಸ್ಕ್ಯಾನರ್ ಅಗತ್ಯವಿದೆ. ಇತ್ತೀಚಿನ ಒಂದು ಪ್ರಕರಣದಲ್ಲಿ ದೆಹಲಿ ವಿಮಾನ ನಿಲ್ದಾಣದಲ್ಲಿ ಕೀನ್ಯಾ ಮಹಿಳೆಯೊಬ್ಬಳು ಎರಡು ವಿಸ್ಕಿ ಬಾಟಲ್‌ಗಳಲ್ಲಿ ದ್ರವ ರೂಪದ ಕೊಕೇನ್ ಕಳ್ಳಸಾಗಣೆ ಮಾಡುತ್ತಿದ್ದಳು. ಇದನ್ನು ಭೌತಿಕ ತಪಾಸಣೆ ಮೂಲಕ ಕಂಡುಹಿಡಿಯಲಾಯಿತು,’ ಎಂದು ವಿವರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Liquor Policy Case:ಕೇಜ್ರಿ, ಸಿಸೋಡಿಯಾ ವಿರುದ್ಧ ಪ್ರಾಸಿಕ್ಯೂಷನ್: EDಗೆ ಕೇಂದ್ರದ ಅನುಮತಿ
RSS ಮೋಹನ್ ಭಾಗವತ್ ದೇಶದ್ರೋಹದ ಹೇಳಿಕೆ ನೀಡಿದ್ದಾರೆ: ರಾಹುಲ್ ಗಾಂಧಿ ಕಿಡಿ
BJP ನಾಯಕನಿಂದ ಪಕ್ಷದ ಕಾರ್ಯಕರ್ತೆಯ ಅತ್ಯಾಚಾ*ರ;ಬಂಧನ,ಪಕ್ಷದಿಂದ ಉಚ್ಚಾಟನೆ
PoK ಇಲ್ಲದೆ ಜಮ್ಮು ಮತ್ತು ಕಾಶ್ಮೀರವು ಅಪೂರ್ಣ: ಪಾಕ್ ಗೆ ರಾಜನಾಥ್ ಎಚ್ಚರಿಕೆ
Delhi-NCR; ಶೂನ್ಯ ಗೋಚರತೆ: ವಿಮಾನಗಳು, ರೈಲು ಸೇವೆಗಳ ಮೇಲೆ ಪರಿಣಾಮ
MUST WATCH
ಹೊಸ ಸೇರ್ಪಡೆ
ಶಿವಮೊಗ್ಗದಲ್ಲಿ ಹೆಚ್ಚಾಯ್ತು ಪುಂಡರ ಹಾವಳಿ… ಕಚೋರಿ ವ್ಯಾಪಾರಿಗೆ ಚಾಕು ಇರಿದು ಪರಾರಿ
Manipal: ಮಣ್ಣಪಳ್ಳ ಕೆರೆಯಲ್ಲಿ ನಡೆದಿತ್ತು ಕಂಬಳ!
Belagavi ಕಾಂಗ್ರೆಸ್ ಒಳಜಗಳ: ಸತೀಶ್ ಬೆಂಬಲಕ್ಕೆ ನಿಂತ ಅಣ್ಣ ರಮೇಶ್ ಜಾರಕಿಹೊಳಿ
Madikeri: ಕಾಡಾನೆ ದಾಳಿ-ವ್ಯಕ್ತಿ ಸಾವು : ಶಾಸಕರ ಭೇಟಿ
BBK11: ಇಂದು ರಾತ್ರಿ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗೋ ಸ್ಪರ್ಧಿ ಇವರೇ..? ಶಾಕಿಂಗ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.