ಭಾರೀ ಮಳೆಗೆ ಕುಸಿದ ಆಗ್ರಾ ತಾಜ್ ಮಹಲ್ ಪ್ರವೇಶ ದ್ವಾರ ಸ್ತಂಭ
Team Udayavani, Apr 12, 2018, 11:54 AM IST
ಆಗ್ರಾ : ನಿನ್ನೆ ಬುಧವಾರ ರಾತ್ರಿ ಸುರಿದ ಭಾರೀ ಮಳೆ ಮತ್ತು ಬೀಸಿದ ಪ್ರಬಲ ಗಾಳಿಗೆ ಇಲ್ಲಿನ ವಿಶ್ವ ಪ್ರಸಿದ್ಧ ತಾಜ್ ಮಹಲ್ ಐತಿಹಾಸಿಕ ಸ್ಮಾಕರದ ಪ್ರವೇಶ ದ್ವಾರದ ಸ್ತಂಭವೊಂದು ಉರುಳಿ ಬಿದ್ದಿರುವ ಘಟನೆ ವರದಿಯಾಗಿದೆ.
ತಾಜ್ ಮಹಲ್ ಪ್ರವೇಶಿಸುವ ದಕ್ಷಿಣ ಭಾಗದಲ್ಲಿರುವ ಪ್ರವೇಶ ದ್ವಾರದ ಸ್ತಂಭ ಉರುಳಿ ಬಿದ್ದಾಗ ಯಾವುದೇ ಅನಾಹುತ ಸಂಭವಿಸಲಿಲ್ಲ ಎಂದು ವರದಿಗಳು ತಿಳಿಸಿವೆ.
ತಾಜ್ ಮಹಲ್‌ಗೆ ಯಾವುದೇ ರೀತಿಯಲ್ಲಿ ಪ್ರಾಕೃತಿಕ ಹಾನಿ ಉಂಟಾಗದಂತೆ ಅದನ್ನು ಸಂರಕ್ಷಿಸಿಡುವ ಕೆಲಸಗಳು ನಡೆಯುತ್ತಿರುವ ನಡುವೆಯೇ ಈ ದುರಂತ ಸಂಭವಿಸಿದೆ.
ಈಚೆಗಷ್ಟೇ ಅಧಿಕಾರಿಗಳು ತಾಜ್ ಮಹಲ್ ಪ್ರವೇಶಿಸುವ ಅವಧಿಯನ್ನು ಮೂರು ಗಂಟೆಗೆ ಇಳಿಸುವ ಕ್ರಮ ಕೈಗೊಂಡಿದ್ದರು. ಈ ಐತಿಹಾಸಿಕ ಸ್ಮಾರಕ ಸಾಕಷ್ಟು ಹಳತಾಗಿರುವುದರಿಂದ ಪ್ರವಾಸಿಗರ ಒತ್ತಡಕ್ಕೆ ಗುರಿಯಾಗುವುದನ್ನು ಕಡಿಮೆ ಮಾಡಲು ಅಧಿಕಾರಿಗಳು ಈ ಕ್ರಮ ತೆಗೆದುಕೊಂಡಿದ್ದರು.
ಉತ್ತರ ಪ್ರದೇಶದ ಲಕ್ನೋ, ಕಾನ್ಪುರ, ಮಥುರಾ, ಕನೌಜ್, ಫಾರೂಕಾಬಾದ್, ಇಟಾವಾ ಮತ್ತು ಮೈನ್‌ಪುರಿಯಲ್ಲಿ ಜೋರಾಗಿ ಮಳೆ ಸುರಿಯುತ್ತಿದೆ. ರೈತರ ಬೆಳಗಳಿಗೆ ಈ ಮಳೆ ಅತ್ಯಂತ ಮಾರಕಪ್ರಾಯವಾಗಿದ್ದು ಅವರು ತಮಗಾಗಿರುವ ಕೃಷಿ ನಷ್ಟಕ್ಕೆ ಪರಿಹಾರ ಆಗ್ರಹಿಸಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
RenukaswamyCase: ದರ್ಶನ್ ಸೇರಿ ಎಲ್ಲಾ ಆರೋಪಿಗಳು ಕೋರ್ಟ್‌ಗೆ ಹಾಜರು; ವಿಚಾರಣೆ ಮುಂದೂಡಿಕೆ
Bengaluru: ಮಲಗಿದ ನಾಯಿ ಮೇಲೆ ಕಾರು ಹತ್ತಿಸಿದ ಚಾಲಕ!
Mangaluru: ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಪ್ರಜೆಯ ಬಂಧನ
Belagavi: ಕಾರಿನಲ್ಲಿ ಹೋಗುತ್ತಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಮೇಲೆ ಗುಂಡಿನ ದಾಳಿ
Sandalwood: ಹೊಸ ವರ್ಷ ಹಳೇ ಸಮಸ್ಯೆ… ಮತ್ತೆ ಥಿಯೇಟರ್ ರಗಳೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.