ಸ್ವಾತಂತ್ರ್ಯದ “ಅಭಿನಂದನೆ”

ವಿಂಗ್‌ ಕಮಾಂಡರ್‌ ಅಭಿನಂದನ್‌ಗೆ ವೀರಚಕ್ರ

Team Udayavani, Aug 15, 2019, 5:55 AM IST

e-26

ಹೊಸದಿಲ್ಲಿ: ಭಾರತದ ಮುಕುಟ ಜಮ್ಮು ಮತ್ತು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡುವಂಥ ಐತಿಹಾಸಿಕ ನಿರ್ಧಾರ ತೆಗೆದುಕೊಂಡ ಬಳಿಕದ ಮೊದಲ ಸ್ವಾತಂತ್ರ್ಯ ಸಂಭ್ರಮವನ್ನು ಗುರುವಾರ ದೇಶ ಆಚರಿಸಲಿದೆ. 73ನೇ ಸ್ವಾತಂತ್ರ್ಯೋತ್ಸವದ ನಿಮಿತ್ತ ದಿಲ್ಲಿಯ ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸತತ 6ನೇ ಬಾರಿಗೆ ರಾಷ್ಟ್ರಧ್ವಜಾರೋಹಣ ನೆರವೇರಿಸಲಿದ್ದಾರೆ.

ಜಮ್ಮು-ಕಾಶ್ಮೀರದ ಬೆಳವಣಿಗೆ ಹಿನ್ನೆಲೆಯಲ್ಲಿ ಹಾಗೂ ಅದೇ ವಿಚಾರಕ್ಕೆ ಪಾಕಿಸ್ಥಾನದೊಂದಿಗೆ ರಾಜಕೀಯ ಭಿನ್ನಮತ ಮತ್ತಷ್ಟು ಉಲ್ಬಣಿಸಿರುವ ಹಿನ್ನೆಲೆಯಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಸರ್ಪಗಾವಲಿನಲ್ಲಿ ಕೆಂಪುಕೋಟೆಯ ಕಾರ್ಯಕ್ರಮ ನೆರವೇರಲಿದೆ. ಬೆಳಗ್ಗೆ 7.30ಕ್ಕೆ ಕಾರ್ಯಕ್ರಮ ಆರಂಭವಾಗಿ ಮೋದಿ ಧ್ವಜಾರೋಹಣ ಮಾಡಿ ದೇಶವನ್ನು ಉದ್ದೇಶಿಸಿ ಮಾತನಾಡುವರು.

ಸ್ವಾತಂತ್ರ್ಯೋತ್ಸವದ ಮುನ್ನಾದಿನವಾದ ಬುಧವಾರ ವಿವಿಧ ಪದಕ, ಪ್ರಶಸ್ತಿಗಳ ಪಟ್ಟಿ ಬಿಡುಗಡೆಯಾಗಿದ್ದು, ಭಾರತದ ವೀರ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ಗೆವೀರಚಕ್ರ ಘೋಷಿಸಲಾಗಿದೆ. ಅಲ್ಲದೆ, ಪಾಕಿ ಸ್ಥಾನದ ಬಾಲಾಕೋಟ್‌ನಲ್ಲಿ ಉಗ್ರರ ನೆಲೆಗಳ ಮೇಲೆ ಬಾಂಬ್‌ ಹಾಕಿದ ಮಿರಾಜ್‌ 2000 ಯುದ್ಧ ವಿಮಾನಗಳ ಐವರು ಪೈಲಟ್‌ಗಳಿಗೆ ವಾಯುಸೇನಾ ಪದಕ ಘೋಷಿಸಲಾಗಿದೆ. ವಿಶೇಷವೆಂದರೆ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರ ನಿಗ್ರಹಕ್ಕಾಗಿ ಹೋರಾಡಿದ ಕೇಂದ್ರೀಯ ಮೀಸಲು ಪೊಲೀಸ್‌ ಪಡೆ(ಸಿಆರ್‌ಪಿಎಫ್)ಗೆರಾಷ್ಟ್ರಪತಿಯಿಂದ ನೀಡಲಾಗುವ ಶೌರ್ಯ ಪದಕಗಳಲ್ಲಿ ಸಿಂಹಪಾಲು (75) ಸಂದಿದೆ.

ಎಲ್ಲೆಲ್ಲೂ ಕಟ್ಟೆಚ್ಚರ

ಕೆಂಪುಕೋಟೆ ಪರಿಸರದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಇದೇ ಮೊದಲ ಬಾರಿಗೆ ಸಮಾರಂಭಕ್ಕೆ ಆಗಮಿಸುವ ಜನರನ್ನು ಸ್ಪಷ್ಟವಾಗಿ ಗುರುತು ಪತ್ತೆಹಚ್ಚಬಹುದಾದ 200 ಸಿಸಿಟಿವಿ ಕೆಮರಾಗಳನ್ನು ಇಡೀ ಕೆಂಪುಕೋಟೆಗೆ ಅಳವಡಿಸಲಾಗಿದೆ. ವಿವಿಧ ಪಡೆಗಳು ಹಾಗೂ 20,000 ದಿಲ್ಲಿ ಪೊಲೀಸ್‌ ಸಿಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.

ಭಾರತೀಯ ವಾಯುಪಡೆಯ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಅವರಿಗೆ ಗುರುವಾರ ವೀರಚಕ್ರ ನೀಡಿ ಗೌರವಿಸಲಾಗುತ್ತದೆ. ಬಾಲಾ ಕೋಟ್ ದಾಳಿಯಾದ ಮರುದಿನ (ಫೆ. 27) ನಡೆದ ಕಾರ್ಯಾಚರಣೆ ವೇಳೆ ಅಭಿನಂದನ್‌ ಪಾಕಿಸ್ಥಾನದ ಸೈನಿಕರಿಗೆ ಸಿಕ್ಕಿಬಿದ್ದಿದ್ದರು. ಅಲ್ಲದೆ, ಪಾಕಿಸ್ಥಾನದ ಎಫ್-16 ಯುದ್ಧ ವಿಮಾನವನ್ನೂ ಅಭಿನಂದನ್‌ ಹೊಡೆದುರುಳಿಸಿದ್ದರು. ಇದು ಉಭಯ ದೇಶಗಳ ನಡುವೆ ಯುದ್ಧದ ವಾತಾವರಣ ಸೃಷ್ಟಿಸಿತ್ತು. ಅನಂತರ ಮಾ. 1ರಂದು ಪಾಕಿಸ್ಥಾನ ಅವರನ್ನು ಬಿಡುಗಡೆಗೊಳಿಸಿತ್ತು.

ಬಾಲಾಕೋಟ್ ವೀರರಿಗೆ ವಾಯುಸೇನೆ ಪದಕ
ಫೆ. 26ರಂದು ಪಾಕಿಸ್ಥಾನದ ಬಾಲಾಕೋಟ್‌ನಲ್ಲಿದ್ದ ಜೈಶ್‌ ಎ ಮೊಹಮ್ಮದ್‌ ಸಂಘಟನೆಯ ತರಬೇತಿ ಕೇಂದ್ರದ ಮೇಲೆ ವಾಯು ದಾಳಿ ನಡೆಸಿದ್ದ ಭಾರತೀಯ ವಾಯು ಸೇನೆಯ ಐವರು ಪೈಲಟ್‌ಗಳಿಗೆ ವಾಯು ಸೇನೆಯ ಪದಕಗಳನ್ನು ನೀಡಿ ಗೌರವಿಸಲು ತೀರ್ಮಾನಿಸಲಾಗಿದೆ. ದಿಲ್ಲಿಯ ಕೆಂಪುಕೋಟೆಯಲ್ಲಿ ಗುರುವಾರ ನಡೆಯಲಿರುವ 73ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಸಂದರ್ಭದಲ್ಲಿ ಈ ಪದಕ ಪ್ರದಾನ ಮಾಡಲಾಗುತ್ತದೆ.

ಸಿಆರ್‌ಪಿಎಫ್ಗೆ 75 ಪದಕ

ಸಿಆರ್‌ಪಿಎಫ್ಗೆ ಸಂದಿರುವ ಪ್ರಶಸ್ತಿಗಳಲ್ಲಿ, ಒಂದು ಕೀರ್ತಿ ಚಕ್ರ, ಎರಡು ಶೌರ್ಯ ಚಕ್ರ ಸೇರಿದೆ. ಸೇನೆಯ ಡೆಪ್ಯೂಟಿ ಕಮಾಂಡೆಂಟ್ ಹರ್ಷಪಾಲ್ ಸಿಂಗ್‌ಗೆ ಕೀರ್ತಿ ಚಕ್ರ ನೀಡಲಾಗಿದ್ದು, ಕಾರ್ಯಾಚರಣೆಯಲ್ಲಿ ಅವರಿಗೆ ಸಾಥ್‌ ನೀಡಿದ್ದ ಯುವ ಪೇದೆಗಳಾದ ಜಾಕಿರ್‌ ಹುಸೇನ್‌ ಅವರಿಗೆ ಶೌರ್ಯ ಚಕ್ರ ನೀಡಲಾಗಿದೆ. ಕಳೆದ ವರ್ಷ ಅ. 19ರಂದು ಬಾರಾಮುಲ್ಲಾದ ಚೆಕ್‌ಪೋಸ್ಟ್‌ನಲ್ಲಿ ಸೇವಾ ನಿರತರಾಗಿದ್ದಾಗ ಜೈಶ್‌ ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಉಗ್ರರನ್ನು ಕೊಂದಿದ್ದಕ್ಕಾಗಿ, 53ನೇ ಬೆಟಾಲಿಯನ್‌ನ ಪೇದೆ ಸಬ್ಲೆ ಧ್ಯಾನೇಶ್ವರ್‌ ಶ್ರೀರಾಮ್‌ ಅವರಿಗೆ ಶೌರ್ಯ ಚಕ್ರ ನೀಡಲಾಗಿದೆ. ಇದರ ಜತೆಗೆ, ಹರ್ಷಪಾಲ್ ಅವರಿಗೆ ಸೆಕೆಂಡ್‌-ಇನ್‌-ಕಮಾಂಡ್‌ ರ್‍ಯಾಂಕ್‌ಗೆ ಬಡ್ತಿ ನೀಡಲಾಗಿದೆ. ಇದಲ್ಲದೆ, ರಾಷ್ಟ್ರಪತಿಗಳ ಪೊಲೀಸ್‌ ಶೌರ್ಯ ಪದಕಗಳಲ್ಲಿ ಎರಡು ಪದಕಗಳೂ ಸಿಆರ್‌ಪಿಎಫ್ಗೇ ಸಂದಿದ್ದು, ಅಸಿಸ್ಟೆಂಟ್ ಕಮಾಂಡರ್‌ ಎಲ್. ಐಬೊಮ್ಚಾ ಸಿಂಗ್‌ ಹಾಗೂ ಪೇದೆ ಮೊಹಮ್ಮದ್‌ ಮಜಾಹಿದ್‌ ಖಾನ್‌ (ಮರಣೋತ್ತರ)ಗೆ ನೀಡಲಾಗಿದೆ.

ಸಿಬಿಐ ಅಧಿಕಾರಿಗಳಿಗೂ ಪದಕ
ರಾಷ್ಟ್ರದ ಪ್ರತಿಷ್ಠಿತ ತನಿಖಾ ಸಂಸ್ಥೆಯಾದ ಸಿಬಿಐನ 32 ಅಧಿಕಾರಿಗಳಿಗೆ ಪೊಲೀಸ್‌ ಪದಕ ನೀಡಿ ಗೌರವಿಸಲಾಗಿದೆ. ಇವರಲ್ಲಿ, ಪಶ್ಚಿಮ ಬಂಗಾಲದ ಶಾರದಾ ಚಿಟ್ ಫ‌ಂಡ್‌ ಹಗರಣ ಹಾಗೂ 2ಜಿ ಹಗರಣಗಳನ್ನು ಯಶಸ್ವಿಯಾಗಿ ಬೇಧಿಸಿದ್ದ ಅಧಿಕಾರಿಗಳೂ ಸೇರಿದ್ದಾರೆ.

ಶೌರ್ಯ ಪದಕ: ಸಿಆರ್‌ಪಿಎಫ್ಗೆ ಸಿಂಹಪಾಲು
ದೇಶದ ಅತೀ ದೊಡ್ಡ ಅರೆಸೇನಾ ಪಡೆಯಾದ ಕೇಂದ್ರೀಯ ಮೀಸಲು ಪೊಲೀಸ್‌ ಪಡೆ (ಸಿಆರ್‌ಪಿಎಫ್)ಗೆ ರಾಷ್ಟ್ರಪತಿಯಿಂದ ನೀಡಲಾಗುವ ಶೌರ್ಯ ಪದಕಗಳಲ್ಲಿ ಸಿಂಹಪಾಲು (75) ಸಂದಿದೆ. ಒಟ್ಟು 946 ಪದಕಗಳಲ್ಲಿ 180 ಪದಕಗಳನ್ನು ಉಗ್ರರು ಹಾಗೂ ನಕ್ಸಲರ ವಿರುದ್ಧದ ಕಾರ್ಯಾಚರಣೆಗಳಲ್ಲಿ ಶೌರ್ಯ ಮೆರೆದ ಭದ್ರತಾ ಸಿಬಂದಿಗೆ ಘೋಷಿಸಲಾಗಿದೆ. ಇದಲ್ಲದೆ 89 ಪೊಲೀಸರಿಗೆ ವಿಶಿಷ್ಟ ಸೇವಾ ಪದಕ ನೀಡಲಾಗುತ್ತಿದ್ದು, 677 ಪೊಲೀಸರಿಗೆ ಪ್ರಶಂಸನೀಯ ಸೇವಾ ಪದಕ ಘೋಷಿಸಲಾಗಿದೆ. ಅಲ್ಲದೆ, ಸಿಬಿಐ ಅಧಿಕಾರಿಗಳಿಗೂ ಪದಕ ಘೋಷಿಸಲಾಗಿದೆ.

ಭಾರತದ ವೀರಪುತ್ರನಿಗೆ ವೀರಚಕ್ರ
ಭಾರತೀಯ ವಾಯುಪಡೆಯ ವಿಂಗ್‌ ಕಮಾಂಡರ್‌ ಅಭಿ ನಂದನ್‌ ವರ್ಧಮಾನ್‌ ಅವರಿಗೆ ಗುರುವಾರ ವೀರಚಕ್ರ ನೀಡಿ ಗೌರವಿಸಲಾಗುತ್ತದೆ. ಬಾಲಾ ಕೋಟ್ ದಾಳಿಯಾದ ಮರುದಿನ (ಫೆ. 27) ನಡೆದ ಕಾರ್ಯಾಚರಣೆ ವೇಳೆ ಅಭಿನಂದನ್‌ ಪಾಕಿಸ್ಥಾನದ ಸೈನಿಕರಿಗೆ ಸಿಕ್ಕಿಬಿದ್ದಿದ್ದರು. ಅಲ್ಲದೆ, ಪಾಕಿಸ್ಥಾನದ ಎಫ್-16 ಯುದ್ಧ ವಿಮಾನವನ್ನೂ ಅಭಿನಂದನ್‌ ಹೊಡೆದುರುಳಿಸಿದ್ದರು. ಇದು ಉಭಯ ದೇಶಗಳ ನಡುವೆ ಯುದ್ಧದ ವಾತಾವರಣ ಸೃಷ್ಟಿಸಿತ್ತು. ಅನಂತರ ಮಾ. 1ರಂದು ಪಾಕಿಸ್ಥಾನ ಅವರನ್ನು ಬಿಡುಗಡೆಗೊಳಿಸಿತ್ತು.

ಟಾಪ್ ನ್ಯೂಸ್

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

121

Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ

CM-Siddu-High-Court

MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ

Trump–Kamala

US Election 2024, Kamala Vs Trump: ಅಮೆರಿಕ ಅಧ್ಯಕ್ಷರ ಚುನಾವಣೆ ಹೇಗೆ? ಏನು? ಎತ್ತ?

ಮಂಗಳೂರಿಗೆ ವಾಟರ್‌ ವೆುಟ್ರೋ; ಎಂಡಬ್ಲ್ಯುಎಂಪಿ ನಿರ್ಮಾಣಕ್ಕೆ ಮುಂದಾಗಿರುವ ಕೆಎಂಬಿ

ಮಂಗಳೂರಿಗೆ ವಾಟರ್‌ ವೆುಟ್ರೋ; ಎಂಡಬ್ಲ್ಯುಎಂಪಿ ನಿರ್ಮಾಣಕ್ಕೆ ಮುಂದಾಗಿರುವ ಕೆಎಂಬಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

voter

Maharashtra poll ; ಕಣದಲ್ಲಿ ಉಳಿದಿದ್ದು 4,140 ಅಭ್ಯರ್ಥಿಗಳು

stalin

DMK ನಾಶವೇ ಹೊಸ ಪಕ್ಷದ ಉದ್ದೇಶ: ವಿಜಯ್‌ ವಿರುದ್ಧ ಸ್ಟಾಲಿನ್‌ ಕಿಡಿ

mob

WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್‌ ಅಧಿಕಾರಿ ದೂರು

AANE 2

Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು

Congress: ಸುಳ್ಳು ಗ್ಯಾರಂಟಿಗೆ 3 ರಾಜ್ಯ ನಾಶ: ಪ್ರಧಾನಿ ಮೋದಿ

Congress: ಸುಳ್ಳು ಗ್ಯಾರಂಟಿಗೆ 3 ರಾಜ್ಯ ನಾಶ: ಪ್ರಧಾನಿ ಮೋದಿ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

121

Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ

CM-Siddu-High-Court

MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.