ಪೈಲಟ್ ಸ್ಥಾನಕ್ಕಾಗಿ ನಕಲಿ ಶಿಫಾರಸು: ತನಿಖೆ ಆರಂಭ
Team Udayavani, Aug 28, 2019, 5:30 AM IST
ನವದೆಹಲಿ: ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾಗಿದ್ದ ವಾಯುಪಡೆಯ (ಐಎಎಫ್) ನಿವೃತ್ತ ವಿಂಗ್ ಕಮಾಂಡರ್ ಜೆ.ಎಸ್. ಸಾಂಗ್ವಾನ್ ಎಂಬುವರು, ಹಿರಿಯ ಅಧಿಕಾರಿಯ ಇಮೇಲ್ ನಕಲು ಮಾಡಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿದ್ದ ವಿಮಾನವೊಂದನ್ನು ಚಲಾಯಿಸಲು ಅನುಮತಿ ಪಡೆದಿದ್ದ ಪ್ರಕರಣದ ತನಿಖೆಯನ್ನು, ದೆಹಲಿ ಪೊಲೀಸ್ ಹಾಗೂ ಬಿಎಸ್‌ಎಫ್ ಆರಂಭಿಸಿವೆ.
ಜು.8ರಂದು ಅಮಿತ್ ಶಾ, ಚೆನ್ನೈನಿಂದ ದೆಹಲಿಗೆ ‘ಎಲ್ ಆ್ಯಂಡ್ ಟಿ’ ಕಂಪನಿಯ ವಿಮಾನದಲ್ಲಿ ಪ್ರಯಾಣಿಸಬೇಕಿತ್ತು. ಇದರ ಪೈಲಟ್ ಯಾರಾಗಬೇಕು ಎಂಬುದನ್ನು ಐಎಎಫ್, ಕಂಪನಿಗೆ ತಿಳಿಸಬೇಕಿತ್ತು. ಈ ಸಂದರ್ಭದಲ್ಲಿ, ಚಾಕಚಕ್ಯತೆ ಉಪಯೋಗಿಸಿದ ಸಾಂಗ್ವಾನ್, ತಮ್ಮ ಹಿರಿಯ ಅಧಿಕಾರಿಗಳ ಇ-ಮೇಲ್ ಐಡಿ ಹ್ಯಾಕ್ ಮಾಡಿ, ಅವರ ಹೆಸರಲ್ಲಿ ಎಲ್ ಆ್ಯಂಡ್ ಟಿಗೆ ಮಿಂಚಂಚೆ ರವಾನಿಸಿ, ‘ಪೈಲಟ್ ಅವಕಾಶ ಸಾಂಗ್ವಾನ್‌ರಿಗೇ ನೀಡಬೇಕು’ ಎಂದು ಶಿಫಾರಸು ಮಾಡಿಕೊಂಡಿದ್ದರು ಎನ್ನಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.