ಮೃತ ಪೈಲಟ್ನ ಪತ್ನಿ, ಮಗುವಿಗೆ ಸಹೋದ್ಯೋಗಿಗಳಿಂದ 25 ಲಕ್ಷ ರೂ. ನೆರವು
Team Udayavani, Nov 8, 2020, 10:34 PM IST
ಮುಂಬೈ: ವಿಮಾನ ಅಪಘಾತದಲ್ಲಿ ಮೃತಪಟ್ಟ ಪೈಲಟ್ನ ಪತ್ನಿ ಮತ್ತು ಮಗುವಿಗೆ, ಸಹೋದ್ಯೋಗಿ ಪೈಲಟ್ಗಳು ಒಟ್ಟಾಗಿ 25 ಲಕ್ಷ ರೂ. ದೇಣಿಗೆ ಸಂಗ್ರಹಿಸಿ ನೀಡಿ, ಮಾನವೀಯತೆ ಮೆರೆದಿದ್ದಾರೆ.
ಕ್ಯಾ. ಅಖೀಲೇಶ್ ಕುಮಾರ್ ಆಗಸ್ಟ್ನಲ್ಲಿ ಕೋಝಿಕೋಡ್ ವಿಮಾನ ಅಪಘಾತದಲ್ಲಿ ದುರಂತ ಸಾವು ಕಂಡಿದ್ದರು. ಅಖೀಲೇಶ್ ಮೃತಪಡುವ ವೇಳೆ ಪತ್ನಿ ಮೇಘಾ ಶುಕ್ಲಾ ತುಂಬು ಗರ್ಭಿಣಿಯಾಗಿದ್ದರು. ಸೆಪ್ಟೆಂಬರ್ನಲ್ಲಿ ಅವರಿಗೆ ಗಂಡು ಮಗು ಜನಿಸಿತ್ತು.
240 ಪೈಲಟ್ಗಳ ನೆರವು: ಮುಂಬೈ ಮೂಲದ ದಿ ಏರ್ ಇಂಡಿಯಾ ಎಕ್ಸ್ಪ್ರೆಸ್ ಪೈಲಟ್ ಅಸೋಸಿಯೇಶನ್, ಅಖೀಲೇಶ್ ಕುಟುಂಬಕ್ಕಾಗಿ ದೇಣಿಗೆ ಸಂಗ್ರಹ ಅಭಿಯಾನ ಆರಂಭಿಸಿತ್ತು. ಸುಮಾರು 240 ಪೈಲಟ್ಗಳು, ಹಣದ ನೆರವು ನೀಡಿದ್ದು, 25 ಲಕ್ಷ ರೂ. ಸಂಗ್ರಹವಾಗಿದೆ.
ರಾಜಸ್ಥಾನದ ಧೋಲ್ಪುರದಲ್ಲಿ ತಂದೆ- ತಾಯಿ ಜತೆಗೆ ವಾಸಿಸುತ್ತಿರುವ ಮೇಘಾ ಅವರಿಗೆ ದೇಣಿಗೆ ಹಸ್ತಾಂತರಿಸಲಾಗಿದೆ. ಕ್ಯಾ. ಅಖೀಲೇಶ್ ಕುಮಾರ್ರನ್ನು ಪೈಲಟ್ ಮಾಡಲು 50 ಲಕ್ಷ ರೂ. ವೆಚ್ಚ ಮಾಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್ಪ್ರೆಸ್ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.