ಪಿಣರಾಯಿ ವಿಜಯನ್‌ಗೆ ಮತ್ತೆ ಲಾವ್ಲಿನ್ ಸಂಕಷ್ಟ

Team Udayavani, Mar 16, 2017, 2:53 PM IST

vijayan.jpg

ಕೊಚ್ಚಿ : 20 ವರ್ಷ ಹಿಂದಿನ ಲಾವ್ಲಿನ್ ಹಗರಣ ಮತ್ತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರನ್ನು ಕಾಡಲಾರಂಭಿಸಿದೆ. ಕೆನಡದ ಎಸ್‌ಎನ್‌ಸಿ ಲಾವ್ಲಿನ್ ಕಂಪೆನಿ ಜತೆಗೆ ಜಲ ವಿದ್ಯುತ್‌ ಸ್ಥಾವರಗಳನ್ನು ನವೀಕರಿಸಲು ಒಪ್ಪಂದ ಮಾಡಿಕೊಳ್ಳುವಾಗ ಪಿಣರಾಯಿ ಮಾಡಿದ ತಪ್ಪುಗಳನ್ನು ಸಿಬಿಐ ಪಟ್ಟಿ ಮಾಡಿದ್ದು, ರಾಜ್ಯ ರಾಜಕೀಯದಲ್ಲಿ ಈ ಹಗರಣ ಮತ್ತೆ ಬಿರುಗಾಳಿ ಎಬ್ಬಿಸುವ ಸಾಧ್ಯತೆ ಗೋಚರಿಸಿದೆ. 

ಲಾವ್ಲಿನ್ ಕೇಸಿಗೆ ಸಂಬಂಧಿಸಿದಂತೆ ಪಿಣರಾಯಿ ವಿಜಯನ್‌ ಮತ್ತಿತರ ಆರೋಪಿಗಳನ್ನು ಖುಲಾಸೆಗೊಳಿಸಿರುವ ತೀರ್ಪಿನ ವಿರುದ್ಧ ಸಿಬಿಐ ಸಲ್ಲಿಸಿದ ಮೇಲ್ಮನವಿಯ ವಿಚಾರಣೆ ಹೈಕೋರ್ಟಿನಲ್ಲಿ ನಡೆಯುತ್ತಿದೆ. ಲಾವ್ಲಿನ್ ಕಂಪೆನಿ ಜತೆಗೆ ಒಪ್ಪಂದ ಮಾಡಿಕೊಳ್ಳುವಾಗ ಎಲ್‌ಡಿಎಫ್ ಸರಕಾರದಲ್ಲಿ ವಿದ್ಯುತ್‌ ಸಚಿವರಾಗಿದ್ದ ಪಿಣರಾಯಿ ವಿಜಯನ್‌ ಕೆಲವು ಮಹತ್ವದ ಅಂಶಗಳನ್ನು ಸಂಪುಟದಲ್ಲಿ ಬಹಿರಂಗಪಡಿಸದೆ ಮುಚ್ಚಿ ಹಾಕಿದ್ದರು  ಎಂದು ಸಿಬಿಐ ಆರೋಪಿಸಿದೆ.

ವಿದ್ಯುತ್‌ ವಿತರಣೆಗೆ ಸಂಬಂಧಿಸಿದಂತೆ ಕಂಪೆನಿ ಜತೆಗೆ ಮಾಡಿಕೊಂಡ ಒಪ್ಪಂದ ಸಂಪುಟ ಸದಸ್ಯರಿಗೆ ಗೊತ್ತಿರಲಿಲ್ಲ. ವಿದ್ಯುತ್‌ ಮಂಡಳಿಯ ಉನ್ನತಾಧಿಕಾರಿಗಳು ಈ ಯೋಜನೆಯ ವಿರುದ್ಧ ಎತ್ತಿದ ಆಕ್ಷೇಪಗಳನ್ನು ವಿಜಯನ್‌ ತನ್ನ ಅಧಿಕಾರ ಬಳಸಿ ದಮನಿಸಿದ್ದರು. ಕಂಪೆನಿ ಜತೆಗೆ ಮಾಡಿಕೊಂಡ ವಿದ್ಯುತ್‌ ವಿತರಣೆ ಒಪ್ಪಂದ ಕಾನೂನು ಪ್ರಕಾರ ಅಸಿಂಧುವಾಗಿತ್ತು ಎಂದು ಸಿಬಿಐ ನ್ಯಾಯಾಲಯಕ್ಕೆ ತಿಳಿಸಿದೆ.

ಲಾವ್ಲಿನ್ ಕಂಪೆನಿಯ ಅಧಿಕಾರಿಗಳ ಕುರಿತು ವಿಜಯನ್‌ ವಿಶೇಷ ಕಾಳಜಿ ವಹಿಸಿದ್ದರು. ಮಲಬಾರ್‌ ಕ್ಯಾನ್ಸರ್‌ ಸೆಂಟರ್‌ ಅವರದ್ದೇ ಯೋಜನೆಯಾಗಿತ್ತು. ಜಲ ವಿದ್ಯುತ್‌ ಯೋಜನೆಗಳನ್ನು ಸಂಪೂರ್ಣವಾಗಿ ನವೀಕರಿಸುವುದು ಅಗತ್ಯವಿಲ್ಲ ಎನ್ನುವುದು ವಿಜಯನ್‌ಗೆ ಗೊತ್ತಿತ್ತು. ಇದಕ್ಕೆ ಸಂಬಂಧಿಸಿದ ವರದಿಯೂ ಅವರ ಬಳಿಯಿತ್ತು. ಆದರೂ ನವೀಕರಣ ಒಪ್ಪಂದಕ್ಕೆ ಅಂಕಿತ ಹಾಕಿದ್ದರು. ಇಡೀ ಯೋಜನೆಯೇ ಪಿತೂರಿಯ ಒಂದು ಭಾಗವಾಗಿತ್ತು ಎಂದು ಸಿಬಿಐ ಹೇಳಿದೆ.
ಹರೀಶ್‌ ಸಾಳ್ವೆ ವಕೀಲ

ಲಾವ್ಲಿನ್ ಪ್ರಕರಣದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಪರವಾಗಿ ಸುಪ್ರೀಂ ಕೋರ್ಟಿನ ಖ್ಯಾತ ವಕೀಲ ಹರೀಶ್‌ ಸಾಳ್ವೆ ವಾದಿಸಲಿದ್ದಾರೆ. ಇಂದು ಹೈಕೋರ್ಟಿನಲ್ಲಿ ಕೇಸ್‌ ವಿಚಾರಣೆಗೆ ಬಂದಾಗ ವಿಜಯನ್‌ ವಕೀಲ ಎನ್‌. ಕೆ. ದಾಮೋದರನ್‌ ಮುಖ್ಯಮಂತ್ರಿಯ ಪರವಾಗಿ ಸಾಳ್ವೆ ವಾದಿಸಲಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಕೇಸಿನ ಕುರಿತು ಅಧ್ಯಯನ ಮಾಡಲು ಸಾಳ್ವೆಗೆ ತುಸು ಕಾಲಾವಶಕಾಶ ಬೇಕೆಂದು ದಾಮೋದರನ್‌ ಹೇಳಿದ ಬಳಿಕ ವಿಚಾರಣೆಯನ್ನು ಮಾ. 17ಕ್ಕೆ ಮುಂದೂಡಲಾಯಿತು.

ಸಾಳ್ವೆ ದೇಶದ ದುಬಾರಿ ವಕೀಲರಲ್ಲಿ ಒಬ್ಬರು. ಅವರು ಒಂದು ಹಿಯರಿಂಗ್‌ಶುಲ್ಕ ಲಕ್ಷದಲ್ಲಿರುತ್ತದೆ. ಸಲ್ಮಾನ್‌ ಖಾನ್‌, ಲಲಿತ್‌ ಮೋದಿ, ಮುಕೇಶ್‌ ಅಂಬಾನಿ, ರತನ್‌ ಟಾಟಾ ಮುಂತಾದ ಕಾರ್ಪೊರೇಟ್‌ ದಿಗ್ಗಜರು ಮತ್ತು ಸೆಲೆಬ್ರಿಟಿಗಳ ಪರವಾಗಿ ಸಾಳ್ವೆ ವಾದಿಸಿದ್ದಾರೆ. 

ಏನಿದು ಲಾವ್ಲಿನ್ ಹಗರಣ ?
ಪಣ್ಣಿಯೂರು, ಚೆಂಗುಲಂ ಮತ್ತು ಪಳ್ಳಿವಸಲ್‌ ಜಲ ವಿದ್ಯುತ್‌ ಸ್ಥಾವರದ ಮೂರು ಜನರೇಟರ್‌ಗಳನ್ನು ದುರಸ್ತಿ ಪಡಿಸಲು ಕೆನಡ ಮೂಲದ ಎಸ್‌ಎನ್‌ಸಿ ಲಾವ್ಲಿನ್ ಕಂಪೆನಿ ಜತೆಗೆ ಆಗ ವಿದ್ಯುತ್‌ ಸಚಿವರಾಗಿದ್ದ ವಿಜಯನ್‌ ಒಪ್ಪಂದ ಮಾಡಿಕೊಂಡಿದ್ದರು. 374.5 ಕೋ. ರೂ. ಒಪ್ಪಂದದಿಂದಾಗಿ ವಿದ್ಯುತ್‌ ಮಂಡಳಿಗೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ಒಪ್ಪಂದದಲ್ಲಿ ವಿಜಯನ್‌ ಕಿಕ್‌ಬ್ಯಾಕ್‌ ಪಡೆದುಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದ ಬಳಿಕ ಸಿಬಿಐ ತನಿಖೆಗೆ ವಹಿಸಲಾಗಿತ್ತು. ಆದರೆ ಸಿಬಿಐ ಅವರನ್ನು 7ನೇ ಆರೋಪಿ ಎಂದು ಹೆಸರಿಸಿದ್ದು ಭಾರೀ ಟೀಕೆಗೆ ಗುರಿಯಾಗಿತ್ತು. 2013ರಲ್ಲಿ ತಿರುವನಂತಪುರದ ಸಿಬಿಐ ನ್ಯಾಯಾಲಯ ಅವರನ್ನು ದೋಷಮುಕ್ತಿಗೊಳಿಸಿದೆ. ಈ ತೀರ್ಪಿನ ವಿರುದ್ಧ ಸಿಬಿಐ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿದೆ. 

ಟಾಪ್ ನ್ಯೂಸ್

German: ಮಾರುಕಟ್ಟೆಗೆ ನುಗ್ಗಿಸಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ

German: ಮಾರುಕಟ್ಟೆಗೆ ನುಗ್ಗಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ

Prithvi Shaw: ಮುಂಬೈ-ಶಾ ನಡುವೆ ಆರೋಪ ಸಮರ; ಅರ್ಧ ಗೊತ್ತಿದ್ದು ಮಾತಾಡಬೇಡಿ ಎಂದ ಶಾ

Prithvi Shaw: ಮುಂಬೈ-ಶಾ ನಡುವೆ ಆರೋಪ ಸಮರ; ಅರ್ಧ ಗೊತ್ತಿದ್ದು ಮಾತಾಡಬೇಡಿ ಎಂದ ಶಾ

tobacc

Tobacco: ತಂಬಾಕು ಮೇಲಿನ ಚಿತ್ರ ಸಹಿತ ಎಚ್ಚರಿಕೆ ಗಾತ್ರ ಶೀಘ್ರ ಹಿರಿದು!

Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ  ಸಂಪುಟ

Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ  ಸಂಪುಟ

Strict laws are there to protect women, not to misuse them: Supreme Court

laws: ಕಠಿಣ ಕಾಯ್ದೆ ‌ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್

Daily Horoscope

Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ

Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ

Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Madikeri: ಕೊಟ್ಟಿಗೆಯಿಂದ ಹಸು ಕಳವು; ದೂರು ದಾಖಲು

Madikeri: ಕೊಟ್ಟಿಗೆಯಿಂದ ಹಸು ಕಳವು; ದೂರು ದಾಖಲು

Kasaragod: ಅಪರಾಧ ಸುದ್ದಿಗಳು; ಕಾರ್ಮಿಕ ಆತ್ಮಹ*ತ್ಯೆ

Kasaragod: ಅಪರಾಧ ಸುದ್ದಿಗಳು; ಕಾರ್ಮಿಕ ಆತ್ಮಹ*ತ್ಯೆ

Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ

Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ

21-sabarimala

Sabarimala: ಭಕ್ತರ ಸುರಕ್ಷೆಗಾಗಿ ಮಾರ್ಗಸೂಚಿ ಪ್ರಕಟ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

German: ಮಾರುಕಟ್ಟೆಗೆ ನುಗ್ಗಿಸಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ

German: ಮಾರುಕಟ್ಟೆಗೆ ನುಗ್ಗಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ

Prithvi Shaw: ಮುಂಬೈ-ಶಾ ನಡುವೆ ಆರೋಪ ಸಮರ; ಅರ್ಧ ಗೊತ್ತಿದ್ದು ಮಾತಾಡಬೇಡಿ ಎಂದ ಶಾ

Prithvi Shaw: ಮುಂಬೈ-ಶಾ ನಡುವೆ ಆರೋಪ ಸಮರ; ಅರ್ಧ ಗೊತ್ತಿದ್ದು ಮಾತಾಡಬೇಡಿ ಎಂದ ಶಾ

tobacc

Tobacco: ತಂಬಾಕು ಮೇಲಿನ ಚಿತ್ರ ಸಹಿತ ಎಚ್ಚರಿಕೆ ಗಾತ್ರ ಶೀಘ್ರ ಹಿರಿದು!

Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ  ಸಂಪುಟ

Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ  ಸಂಪುಟ

Strict laws are there to protect women, not to misuse them: Supreme Court

laws: ಕಠಿಣ ಕಾಯ್ದೆ ‌ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.