ಪಿಂಕ್ ನೋಟಿಗೂ ದಾವೂದ್ ಕಣ್ಣು!
Team Udayavani, Feb 23, 2017, 3:50 AM IST
ಹೊಸದಿಲ್ಲಿ: ಎರಡು ಸಾವಿರ ರೂಪಾಯಿಯ ಗರಿಗರಿ ನೋಟಿನ ಮೇಲೂ ನಕಲಿ ನೆರಳು ಬಿದ್ದಿದೆ. ಭಾರತ ಸರಕಾರ ಮತ್ತು ಆರ್‌ಬಿಐಗೆ ಮುಜುಗರ ಸೃಷ್ಟಿಸುವ ರೀತಿಯಲ್ಲಿ ನಕಲಿ ನೋಟುಗಳನ್ನು ದಂಧೆ ಕೋರರು ಸೃಷ್ಟಿಸಿದ್ದು, ಎಟಿಎಂ ಒಡಲಿಗೂ ಸೇರಿವೆ. ಈ ದಂಧೆಯ ಹಿಂದೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಕೈವಾಡ ಇದೆ ಎಂಬ ಶಂಕೆ ದಟ್ಟವಾಗಿದೆ.
ದಿಲ್ಲಿಯ ಎಟಿಎಂ ಯಂತ್ರದಿಂದ ಬಂದ ಪಿಂಕ್ ಬಣ್ಣದ ನೋಟಿನಲ್ಲಿ ಆರ್‌ಬಿಐ ಹೆಸರೇ ಕಣ್ಮರೆ ಯಾಗಿದ್ದು, “ಚಿಲ್ಡ್ರನ್ಸ್ ಬ್ಯಾಂಕ್ ಆಫ್ ಇಂಡಿಯಾ’ ಎಂದು ಮುದ್ರಿಸಲಾಗಿದೆ! ಆರ್‌ಬಿಐನ ಮುದ್ರೆ ಇರಬೇಕಾದ ಜಾಗದಲ್ಲಿ “ಪಿಕೆ’ ಎಂಬ ಹೆಸರು ಅಚ್ಚಾಗಿದೆ. ಸಾಲದೆಂಬಂತೆ ನೋಟಿನ ಮೇಲ್ಭಾಗದ ಎಡ ಮೂಲೆಯಲ್ಲಿ “ಭಾರತೀಯ ಮನೋರಂಜನ್ ಬ್ಯಾಂಕ್’ ಎಂಬ ವ್ಯಂಗ್ಯಶೀರ್ಷಿಕೆ. ಈ ನೋಟಿನ ಸೀರಿಯಲ್ ಸಂಖ್ಯೆ “0000000′! ಇಲ್ಲಿ ರುಪೀ ಚಿಹ್ನೆಯೇ ಇಲ್ಲ, ಗವರ್ನರ್ ಸಹಿಯೂ ಇಲ್ಲ!
500, 1000 ಮುಖಬೆಲೆಯ ನೋಟು ನಿಷೇಧದ ವೇಳೆ ಪ್ರಧಾನಿ ನರೇಂದ್ರ ಮೋದಿ ಪಾಕಿಸ್ಥಾನದಿಂದ ಪೂರೈಕೆ ಆಗುತ್ತಿರುವ ನಕಲಿ ನೋಟುಗಳ ಬಗ್ಗೆ ಪ್ರಸ್ತಾವಿಸಿದ್ದರು. ಇದಕ್ಕೆ ಪ್ರತೀಕಾರವಾಗಿ ಈಗ ಮುಂಬಯಿನಲ್ಲಿನ ದಾವೂದ್ ಸಹಚರರು ನಕಲಿ ನೋಟಿನ ದಂಧೆ ನಡೆಸುತ್ತಿದ್ದು, ಬಾಂಗ್ಲಾದೇಶ ಮತ್ತು ನೇಪಾಲದ ಕಾಣದ ಕೈಗಳೂ ಇದರಲ್ಲಿ ಭಾಗಿಯಾಗಿವೆ ಎನ್ನಲಾಗಿದೆ. ಇವೆಲ್ಲವನ್ನೂ ಪಾಕಿಸ್ಥಾನದ ಗುಪ್ತಚರ ಇಲಾಖೆ ಐಎಸ್‌ಐ ನಿಯಂತ್ರಿಸುತ್ತಿದೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.
ಪತ್ತೆ ಹೇಗಾಯಿತು?:
ಹಲವು ವ್ಯಂಗ್ಯಗಳ ಲೋಪ ತುಂಬಿಕೊಂಡ 2 ಸಾವಿರ ರೂ.ನ ನೋಟುಗಳು ಸಂಗಮ್ ವಿಹಾರ್‌ನ ಎಟಿಎಂನಲ್ಲಿ ಪತ್ತೆಯಾಗಿದ್ದು, ರೋಹಿತ್ ಕುಮಾರ್ ಎಂಬವರು ಫೆ.6ರಂದು ಡ್ರಾ ಮಾಡಿಕೊಂಡಿದ್ದರು. ಒಟ್ಟು 8 ಸಾವಿರ ರೂ. ನೋಟುಗಳಲ್ಲಿ ನಾಲ್ಕೂ ನೋಟುಗಳು ನಕಲಿಯಾಗಿವೆ. ಎಲ್ಲದರ ಮೇಲೂ ದೋಷಗಳು ತುಂಬಿಕೊಂಡಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hathras: ಶಾಲೆಗೆ ರಜೆ ಸಿಗಬೇಕೆಂದು 2ನೇ ತರಗತಿ ಮಗುವನ್ನು ಕೊಂದ ವಿದ್ಯಾರ್ಥಿ!
Meghalaya: ಚರ್ಚ್‌ಗೆ ನುಗ್ಗಿ ಜೈ ಶ್ರೀರಾಮ್ ಘೋಷಣೆ: ಕೇಸು ದಾಖಲು
Memorial: ಮನಮೋಹನ್ ಸಿಂಗ್ ಸ್ಮಾರಕಕ್ಕೆ ಜಾಗ ನೀಡಲು ಕೇಂದ್ರ ಸರ್ಕಾರದ ಒಪ್ಪಿಗೆ
Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ
Dr. Manmohan Singh; ನಾಳೆ ನಿಗಮಬೋಧ್ ಘಾಟ್ ಚಿತಾಗಾರದಲ್ಲಿ ಮಾಜಿ ಪ್ರಧಾನಿ ಅಂತ್ಯಕ್ರಿಯೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ullala; ನೇಮದ ಗದ್ದೆಯಲ್ಲಿ ತ್ಯಾಜ್ಯ ರಾಶಿ: ವೈದ್ಯನಾಥ ದೈವದ ಕೋಪಾವೇಶ
Security ನೀಡುವಂತೆ ಕೇಂದ್ರ ಸಚಿವರಿಗೆ ಸ್ನೇಹಮಯಿ ಪತ್ರ
Puttur: ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು; ಮೂವರ ದುರ್ಮರಣ
INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್ ಪಂತ್ ವಿರುದ್ದ ಕಿಡಿಕಾರಿದ ಗಾವಸ್ಕರ್
Hathras: ಶಾಲೆಗೆ ರಜೆ ಸಿಗಬೇಕೆಂದು 2ನೇ ತರಗತಿ ಮಗುವನ್ನು ಕೊಂದ ವಿದ್ಯಾರ್ಥಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.