ಗುಜರಾತ್‌ಗೆ ಪಾಕ್ ಮಿಡತೆಗಳ ಬಾಧೆ ; 20 ತಾಲೂಕುಗಳಲ್ಲಿ ಬೆಳೆ ಹಾನಿ
Team Udayavani, Dec 27, 2019, 8:50 AM IST
ಅಹ್ಮದಾಬಾದ್ (ಗುಜರಾತ್): ಪಾಕಿಸ್ಥಾನದ ಸಿಂಧ್ ಪ್ರಾಂತ್ಯದಿಂದ ಅಗಣಿತ ಸಂಖ್ಯೆಯಲ್ಲಿ ಭಾರತದ ಗುಜರಾತ್, ರಾಜಸ್ಥಾನ್ ರಾಜ್ಯವನ್ನು ಮಿಡತೆಗಳು ಪ್ರವೇಶಿಸಿವೆ. ಇವು ಗುಜರಾತ್‌ನ ಬಾನಷ್ಕಾಂಥಾ, ಮೆಹ್ಸಾನ, ಕಚ್, ಪಠಾಣ್, ಸಬರ್ಕಾಂಥಾ ಜಿಲ್ಲೆಗಳಲ್ಲಿ ಭಾರೀ ಹಾನಿ ಮಾಡಿವೆ. ರಾಜಸ್ಥಾನದ ಜೋಧಪುರದಲ್ಲೂ ಇದರ ಬಾಧೆಯಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಕೇಂದ್ರ ಸರಕಾರ 11 ತಜ್ಞರುಳ್ಳ ತಂಡವನ್ನು ಕಳುಹಿಸಿಕೊಟ್ಟಿದೆ.
ರೈತರು ಡೋಲು, ತಟ್ಟೆ ಬಡಿತ, ಕರ್ಕಶವಾದ ಸಂಗೀತ, ಟೈರ್ ದಹಿಸಿ ಮಿಡತೆ ಓಡಿಸಲು ಯತ್ನಿಸಿದರೂ ಫಲ ನೀಡಿಲ್ಲ. ಗುಜರಾತ್‌ನ ಉತ್ತರಭಾಗದ ಜಿಲ್ಲೆಗಳ 20 ತಾಲೂಕುಗಳಲ್ಲಿನ ಬೆಳೆ ಮಿಡತೆಗಳಿಂದ ಹಾಳಾಗಿವೆ. ಬಾನಷ್ಕಾಂಥಾ ಜಿಲ್ಲೆಯಲ್ಲಿ ಹೆಚ್ಚು ಹಾನಿಯಾಗಿದೆ. ಇದನ್ನು ಗಮನಿಸಿ, ರೈತರಿಗೆ ಪರಿಹಾರ ನೀಡುತ್ತೇವೆಂದು ಮುಖ್ಯಮಂತ್ರಿ ವಿಜಯ್ ರೂಪಾನಿ ಭರವಸೆ ನೀಡಿದ್ದಾರೆ. 1934ರ ಅನಂತರ ಗುಜರಾತ್‌ಗೆ ಈ ಮಟ್ಟಿಗೆ ಕೀಟಗಳು ನುಗ್ಗಿರುವುದು ಇದೇ ಮೊದಲು.
ಮೂಲ ಕೆಂಪು ಸಮುದ್ರ
ಆಫ್ರಿಕಾ ಖಂಡದ ಕೆಂಪು ಸಮುದ್ರ ಕರಾವಳಿ ತೀರದಲ್ಲಿರುವ ಸುಡಾನ್, ಎರಿಟ್ರಿಯದಿಂದ ಈ ಮಿಡತೆಗಳು ಈ ಫೆಬ್ರವರಿಯಲ್ಲಿ ಹೊರಟಿದ್ದವು. ಅನಂತರ ಸೌದಿ ಅರೇಬಿಯ, ಇರಾನ್ ದಾಟಿ, ಪಾಕಿಸ್ಥಾನ, ಭಾರತಕ್ಕೆ ಆಗಮಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RJD ಜೊತೆ ಮೈತ್ರಿ ಮಾಡಿಕೊಂಡು 2 ಬಾರಿ ತಪ್ಪೆಸಗಿದ್ದೆ: ನಿತೀಶ್ ಕುಮಾರ್
Odisha: ಕಾರಿಗೆ ಟ್ರಕ್ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು
Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ
Gujarat: ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಪತನ; ಮೂವರು ಮೃ*ತ್ಯು
Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್ ಸಿಗೋದು ಕಷ್ಟ – ವರದಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kundapura: ಗುಲ್ವಾಡಿ; ಗಾಯಾಳು ಸಾವು
RJD ಜೊತೆ ಮೈತ್ರಿ ಮಾಡಿಕೊಂಡು 2 ಬಾರಿ ತಪ್ಪೆಸಗಿದ್ದೆ: ನಿತೀಶ್ ಕುಮಾರ್
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು
Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.