2019ರಲ್ಲಿ ವಿಮಾನ ಅಪಘಾತಗಳ ಸಂಖ್ಯೆಯಲ್ಲಿ ಇಳಿಕೆ
Team Udayavani, Jan 1, 2020, 11:29 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Use
ಹೊಸದಿಲ್ಲಿ: 2019ರ ವರ್ಷ ಜಾಗತಿಕವಾಗಿ ವಿಮಾನ ಸೇವಾ ವಲಯಕ್ಕೆ ಶುಭ ಸುದ್ದಿಯಾಗಿದೆ. ಕೆಲವೊಂದು ಅಪಘಾತಗಳು ಕಂಡು ಬಂದಿದ್ದರೂ ಒಟ್ಟಾರೆಯಾಗಿ ಹೇಳುವುದಾದರೆ ಈ ಹಿಂದಿನ ವರ್ಷಕ್ಕೆ ಹೋಲಿಸಿದರೆ ಕಡಿಮೆಯಾಗಿದೆ.
2019ರಲ್ಲಿ ಸಣ್ಣಪುಟ್ಟ ಅಪಘಾತಗಳು ಸೇರಿದಂತೆ ಇಟ್ಟು 20 ಅಪಘಾತಗಳು ಸಂಭವಿಸಿದೆ. ಜಗತ್ತಿನಾದ್ಯಂತ ಸಂಭವಿಸಿದ ಇಂತಹ ದುರ್ಘಟನೆಗಳಲ್ಲಿ ಒಟ್ಟು 280 ಮಂದಿ ಸಾವನ್ನಪ್ಪಿದ್ದಾರೆ. ಈ ಕಾರಣದಿಂದ ವಿಮಾನ ಸೇವೆಗೆ ಇದು 3ನೇ ಸುರಕ್ಷಾ ವರ್ಷವಾಗಿದೆ.
ಗರಿಷ್ಠ ಸಾವು
1972ರಲ್ಲಿ ಗರಿಷ್ಠ ಅಪಘಾತಗಳು ದಾಖಲೆಯಾಗಿದ್ದವು. ಆ ವರ್ಷ ಒಟ್ಟು 2472 ಮಂದಿ ಅಪಘಾತಗಳಿಂದ ಸಾವನ್ನಪ್ಪಿದ್ದರು. ಬಳಿಕ 1985ರಲ್ಲಿ 2421 ಮಂದಿ ಸಾವನ್ನಪ್ಪಿದ್ದಾರೆ. 1973ರಲ್ಲಿ 2271 ಮಂದಿ ಸಾವನ್ನಪ್ಪಿದ್ದು ಗರಿಷ್ಠ ಪ್ರಕರಣಗಳಾಗಿದೆ.
1972 ನಾಗರಿಕ ವಿಮಾನಗಳಿಗೆ ಕಷ್ಟದ ವರ್ಷಗಳಾಗಿತ್ತು. ಅ ವರ್ಷ ಅತೀ ಹೆಚ್ಚು ದುರ್ಘನೆಗಳು ನಡೆದಿವೆ. 65 ವಿಮಾನ ಅಪಘಾತಗಳು ನಡೆದಿದ್ದು, ಒಟ್ಟು 2472 ಮಂದಿ ಸಾವನ್ನಪ್ಪಿದ್ದಾರೆ. 1948ರಲ್ಲಿ ಒಟ್ಟು 80 ಅಪಘಾತಗಳು ನಡೆದಿವೆ.
ಆದರೆ 2017ರಲ್ಲಿ 10 ಅಪಘಾತಗಳು ನಡೆದಿದ್ದು, 44 ಮಂದಿ ಪ್ರಯಾಣಿಕರು ಮಾತ್ರ ಸಾವನ್ನಪ್ಪಿದ್ದಾರೆ. ಅದೇ 2013ರಲ್ಲಿ ಒಟ್ಟು 256 ಮಂದಿ ಸಾವನ್ನಪ್ಪಿದ್ದು, 23 ಅಪಘಾತಗಳು ಅವರನ್ನು ಬಲಿ ತೆಗೆದುಕೊಂಡಿದೆ. 2013ರಲ್ಲಿ 11 ಸಾವು, 1955ರಲ್ಲಿ 12 ಮಂದಿ ಇಂತಹ ಅಪಘಾತಗಳಿಂದ ಸಾವನ್ನಪ್ಪಿದ್ದಾರೆ.
1985ರಲ್ಲಿ ಪ್ರತಿಯೊಂದು ಅಪಘಾತದಲ್ಲಿ ಸರಾಸರಿ 62 ಮಂದಿ ಸಾವನ್ನಪ್ಪಿದ್ದಾರೆ. 2015 ಮತ್ತು 2014ರಲ್ಲಿ ಕ್ರಮವಾಗಿ 54 ಮತ್ತು 53 ಮಂದಿ ಸಾವನ್ನಪ್ಪಿದ್ದಾರೆ. ಅಮೆರಿಕ ಮತ್ತು ರಷ್ಯಾದಲ್ಲಿ ಅತೀ ಹೆಚ್ಚು ಅಪಘಾತಗಳು ಸಂಭವಿಸಿದ್ದು, ಭಾರತ ಮತ್ತು ಇಂಗ್ಲೆಂಡ್ ಬಳಿಕದ ಸ್ಥಾನದಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dr. Manmohan Singh; ನಾಳೆ ನಿಗಮಬೋಧ್ ಘಾಟ್ ಚಿತಾಗಾರದಲ್ಲಿ ಮಾಜಿ ಪ್ರಧಾನಿ ಅಂತ್ಯಕ್ರಿಯೆ
Video: ಮನಮೋಹನ್ ಸಿಂಗ್ ಹೇಳುವ ಬದಲು ಮೋದಿ ನಿಧನ ಎಂದ ನ್ಯೂಸ್ ಆ್ಯಂಕರ್.!
Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ
New Delhi: ಸಂಸತ್ತಿನ ಬಳಿ ಬೆಂಕಿ ಹಚ್ಚಿಕೊಂಡಿದ್ದ ಯುವಕ ಸಾ*ವು
Video: ತನ್ನ ಮನೆಯ ಮುಂದೆಯೇ ತನ್ನನ್ನು ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ…
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.