ಲಸಿಕೆ ವಿತರಣೆಗೆ ಯೋಜನೆ; ಆದ್ಯತಾ ವಲಯ ಗುರುತಿಸಿರುವ ಕೇಂದ್ರ
Team Udayavani, Oct 24, 2020, 6:25 AM IST
ಸಾಂದರ್ಭಿ ಚಿತ್ರ
ಹೊಸದಿಲ್ಲಿ: ಕೋವಿಡ್ ಲಸಿಕೆ ಲಭ್ಯವಾದ ತತ್‌ಕ್ಷಣವೇ ಅದನ್ನು ವಿತರಿಸಲು ವಿಶೇಷ ಕೋವಿಡ್-19 ಲಸಿಕೆ ಕಾರ್ಯಕ್ರಮ ರೂಪಿಸಲಾಗುವುದು ಎಂದು ಕೇಂದ್ರ ಸರಕಾರ ತಿಳಿಸಿದೆ. ಆದ್ಯತಾ ವಲಯವನ್ನು ಗುರುತಿಸಲಾಗುತ್ತಿದ್ದು, ಆರಂಭದಲ್ಲಿ 30 ಕೋಟಿ ಮಂದಿಗೆ ಲಸಿಕೆ ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರವೇ ಔಷಧ ಕಂಪೆನಿಗಳಿಂದ ಲಸಿಕೆ ಖರೀದಿಸಲಿದೆ. ಇದನ್ನು ಆದ್ಯತಾ ವಲಯದ ಮಂದಿಗೆ ಉಚಿತವಾಗಿ ನೀಡಲಾಗುತ್ತದೆ. ಇದಕ್ಕೆ ಹಾಲಿ ಇರುವ ವಿತರಣ ವಿಧಾನವನ್ನೇ ಬಳಸಿಕೊಳ್ಳಲಾಗುತ್ತದೆ ಎಂದು ಸರಕಾರದ ಮೂಲಗಳು ಹೇಳಿವೆ. ರಾಜ್ಯಗಳು ತಮ್ಮದೇ ಆದ ಖರೀದಿ ವಿಧಾನ ರೂಪಿಸುವಂತಿಲ್ಲ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ ಎಂದು ಅಧಿಕೃತ ಮೂಲಗಳು ಹೇಳಿವೆ.
ಶೇ. 60ರಷ್ಟು ಪರಿಣಾಮಕಾರಿ
ಸದ್ಯ ಕೊವ್ಯಾಕ್ಸಿನ್ ಲಸಿಕೆ ಪ್ರಯೋಗ ನಡೆಸುತ್ತಿರುವ ಭಾರತ್ ಬಯೋಟೆಕ್ ತನ್ನ 3ನೇ ಹಂತದ ಲಸಿಕೆ ಪ್ರಯೋಗ ಶೇ. 60ರಷ್ಟು ಪರಿಣಾಮ ಕಾರಿಯಾಗಿರಲಿದೆ ಎಂದಿದೆ.
ಲಸಿಕೆಗೆ ಆಧಾರ್ ಲಿಂಕ್
ಲಸಿಕೆಯನ್ನು ಆಧಾರ್ ಕಾರ್ಡ್ ಜತೆಗೆ ಲಿಂಕ್ ಮಾಡಲಾಗುತ್ತದೆ. ನವೆಂಬರ್ ಮಧ್ಯದೊಳಗೆ ರಾಜ್ಯಗಳು ಆದ್ಯತಾ ವಲಯಕ್ಕೆ ಸೇರಬೇಕಿರುವವರ ಪಟ್ಟಿಯನ್ನು ಕೇಂದ್ರಕ್ಕೆ ಕಳುಹಿಸಬೇಕು. ಬಳಿಕ ಇವರ ಆಧಾರ್‌ಗಳನ್ನು ಈ ಲಸಿಕಾ ಕಾರ್ಯಕ್ರಮಕ್ಕೆ ಜೋಡಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.
ಇವಿಐಎನ್ ಮಾರ್ಗ
ಸಾರ್ವತ್ರಿಕ ಲಸಿಕೆ ಕಾರ್ಯಕ್ರಮದಲ್ಲಿರುವ ಡಿಜಿಟಲ್ ವೇದಿಕೆಯನ್ನೇ ಕೊರೊನಾ ಲಸಿಕೆಗೂ ಬಳಸಲಾಗುತ್ತದೆ. ಇದಕ್ಕಾಗಿ ಸದ್ಯದ ಡಿಜಿಟಲ್ ವೇದಿಕೆಯನ್ನು ಎಲೆಕ್ಟ್ರಾನಿಕ್ ವ್ಯಾಕ್ಸಿನ್ ಇಂಟಲಿಜೆನ್ಸ್ ನೆಟ್‌ವರ್ಕ್ (ಇವಿಐಎನ್) ಆಗಿ ರೂಪಿಸಲಾಗುತ್ತದೆ.
ವಿತರಣೆ ಹೇಗೆ?
1 ಕೇಂದ್ರ ಸರಕಾರದಿಂದಲೇ ನೇರ ಖರೀದಿ
2 ಆದ್ಯತಾ ವಲಯದಲ್ಲಿ 30 ಕೋಟಿ ಮಂದಿ
3 ಸಾರ್ವತ್ರಿಕ ಲಸಿಕೆ ಕಾರ್ಯಕ್ರಮಕ್ಕೆ ಪರ್ಯಾಯವಾಗಿ ಕೋವಿಡ್-19 ಲಸಿಕೆ ಕಾರ್ಯಕ್ರಮ
4 ಪ್ರಕ್ರಿಯೆ, ತಂತ್ರಜ್ಞಾನ ಮತ್ತು ಸಂಪರ್ಕ ಜಾಲಕ್ಕಾಗಿ ಸಾರ್ವತ್ರಿಕ ಲಸಿಕೆ ಕಾರ್ಯಕ್ರಮ ಬಳಕೆ
ನಾಲ್ಕು ವಲಯವಾಗಿ ವರ್ಗೀಕರಣ
ವಿಭಾಗ 1
ಆರೋಗ್ಯ ಸೇವೆ
1 ಕೋಟಿ ಮಂದಿ ವೈದ್ಯರು, ಎಂಬಿಬಿಎಸ್ ವಿದ್ಯಾರ್ಥಿಗಳು, ನರ್ಸ್‌ಗಳು, ಆಶಾ ಕಾರ್ಯಕರ್ತೆಯರು, ಇತರ.
ವಿಭಾಗ 2
ಮುಂಚೂಣಿ ಕಾರ್ಯಕರ್ತರು
2 ಕೋಟಿ ಮಂದಿ ಪೌರ ಕಾರ್ಮಿಕರು, ಪೊಲೀಸ್ ಮತ್ತು ಸೇನಾ ಪಡೆಯ ಸಿಬಂದಿ.
ವಿಭಾಗ 3-4
50+ ಮತ್ತು ವಿಶೇಷ ವಲಯ
26 ಕೋಟಿ 50 ವರ್ಷ ದಾಟಿದವರು, 50 ವರ್ಷಕ್ಕಿಂತ ಕಡಿಮೆ ಇದ್ದು, ಬೇರೆ ಬೇರೆ ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ರಸ್ತೆಯಲ್ಲೇ ನಡೆಯಿತು ಪವಾಡ
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Tragedy: ರೈಲು ಹಳಿ ಮೇಲೆ ಕೂತು PUBG ಆಡುತ್ತಿದ್ದ ಮೂವರು ಯುವಕರ ದೇಹ ಛಿದ್ರ ಛಿದ್ರ…
Fog: ಉತ್ತರ ಭಾರತದಲ್ಲಿ ದಟ್ಟ ಮಂಜು, ಶೂನ್ಯ ಗೋಚರತೆ: ವಿಮಾನ, ರೈಲು ಸಂಚಾರದ ಮೇಲೆ ಪರಿಣಾಮ
Video: ವೇದಿಕೆ ಮೇಲಿಂದ ಕೆಳಗೆ ಬಿದ್ದ ಕೇರಳ ಶಾಸಕಿ ಉಮಾ ಥಾಮಸ್… ಸ್ಥಿತಿ ಗಂಭೀರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sanju Weds Geetha 2: ಸಂಜು-ಗೀತಾಗೆ ಕಿಚ್ಚ ಸಾಥ್
Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್ ಮಾದರಿಯ ಎಚ್ ಎಂಪಿವಿ ವೈರಸ್?
Gadag: ನಿರ್ಮಿತಿ ಕೇಂದ್ರದ ಗುತ್ತಿಗೆ ಆಧಾರಿತ ಇಂಜಿನಿಯರ್ ಆತ್ಮಹ*ತ್ಯೆ
Bantwala: ನೇತ್ರಾವತಿ ನದಿಯ ಅಂಬಿಗ ನಾಪತ್ತೆ; ಸ್ಥಳೀಯರಿಂದ ಶೋಧ ಕಾರ್ಯ
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ರಸ್ತೆಯಲ್ಲೇ ನಡೆಯಿತು ಪವಾಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.