ರೈಲಿನಲ್ಲಿ ಪ್ರಯಾಣಿಸಲು ಯೋಜಿಸುತ್ತಿದ್ದೀರಾ.? ಭಾರತೀಯ ರೈಲ್ವೆಯ ಕೋವಿಡ್ ಗೈಡ್ಲೈನ್ಸ್ ಗಮನಿಸಿ
Team Udayavani, Apr 13, 2021, 12:23 PM IST
ನವ ದೆಹಲಿ : ದೇಶಾದ್ಯಂತ ಹಠಾತ್ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ನಡುವೆ, ನಿವು ಹೊರಹೋಗುವ ಮೊದಲು ಎಲ್ಲಾ ಪ್ರಮುಖ ಕೋವಿಡ್ ಮಾರ್ಗಸೂಚಿಗಳನ್ನು ಪರಿಶೀಲಿಸಬೇಕು. ನೀವು ಮುಂದಿನ ದಿನಗಳಲ್ಲಿ ರೈಲಿನಲ್ಲಿ ಪ್ರಯಾಣಿಸಲು ಯೋಜಿಸುತ್ತಿದ್ದರೆ, ಕೆಳಗೆ ತಿಳಿಸಲಾದ ಭಾರತೀಯ ರೈಲ್ವೆಯ ಇತ್ತೀಚಿನ ಕೋವಿಡ್ 19 ಮಾರ್ಗಸೂಚಿಗಳನ್ನು ಗಮನಿಸಿಕೊಳ್ಳಿ.
ಭಾರತೀಯ ರೈಲ್ವೆಯ ಇತ್ತೀಚಿನ ಕೋವಿಡ್ 19 ಮಾರ್ಗಸೂಚಿಗಳು :
ರೈಲ್ವೆ ಮಂಡಳಿಯ ಅಧ್ಯಕ್ಷ ಸುನೀತ್ ಶರ್ಮಾ ಅವರು ರೈಲಿನಲ್ಲಿ ಪ್ರಯಾಣಿಸಲು ಕೋವಿಡ್ 19 ಸೋಂಕಿನ ನೆಗೆಟಿವ್ ವರದಿಯ ಪ್ರಮಾಣಪತ್ರದ ಅಗತ್ಯವಿಲ್ಲ ಎಂದು ಇತ್ತೀಚೆಗೆ ಹೇಳಿದ್ದರು. ಇದಲ್ಲದೆ, ಪ್ರಯಾಣಿಕರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೊರಡಿಸಿರುವ ಇತ್ತೀಚಿನ ಕೋವಿಡ್ 19 ಮಾರ್ಗಸೂಚಿಗಳು ಮತ್ತು ಪ್ರೋಟೋಕಾಲ್‌ಗಳನ್ನು ಸಹ ಅನುಸರಿಸಬೇಕಾಗುತ್ತದೆ ಎಂದಿದ್ದರು.
ಓದಿ : ಮಂಗಳೂರಿನಲ್ಲಿ ಇಳಿಯಬೇಕಿದ್ದ ವಿಮಾನ ಕೊಚ್ಚಿಯಲ್ಲಿ ಲ್ಯಾಂಡ್: ಪರದಾಡಿದ ಪ್ರಯಾಣಿಕರು!
ಕೋವಿಡ್ 19 ಸಾಂಕ್ರಾಮಿಕ ಮತ್ತು ಸಂಬಂಧಿತ ಸ್ವಚ್ಛತತೆಯ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು, ಆಹಾರ ಸೇವೆಯನ್ನು (service of cooked food ) ನಿಲ್ಲಿಸಿ, ರೈಲುಗಳಲ್ಲಿ ರೆಡಿ ಟು ಈಟ್ (ಆರ್ ಟಿ ಇ) ಸೇವೆಯನ್ನು ಆರಂಭಿಸಿತ್ತು.
ಇನ್ನು, ಕೋವಿಡ್ 19 ಗೆ ಮುಂಜಾಗ್ರತ ಕ್ರಮವಾಗಿ ರಕ್ಷಣಾತ್ಮಕ ವಸ್ತುಗಳಾದ ಮಾಸ್ಕ್, ಸ್ಯಾನಿಟೈಸರ್ ಗಳು, ಕೈಗವಸುಗಳು ಮತ್ತು ಟೇಕ್ ಅವೇ ಬೆಡ್ ರೋಲ್ ಕಿಟ್‌ಗಳು ರೈಲ್ವೇ ನಿಲ್ದಾಣಗಳ ಬಹುಪಯೋಗಿ ಸ್ಟಾಲ್ ಗಳ ಮೂಲಕ ಮಾರಾಟಕ್ಕೆ ಲಭ್ಯವಿರಲಿವೆ.
ರೈಲು ಸೇವೆಗಳನ್ನು ನಿಲ್ಲಿಸಲು ಅಥವಾ ಕಡಿತಗೊಳಿಸಲು ಯಾವುದೇ ಯೋಜನೆ ಇಲ್ಲ :
ರೈಲು ಸೇವೆಗಳನ್ನು ಕಡಿತಗೊಳಿಸುವ ಅಥವಾ ನಿಲ್ಲಿಸುವ ಯಾವುದೇ ಯೋಜನೆ ಇಲ್ಲ ಎಂದು ರೈಲ್ವೆ ಮಂಡಳಿಯ ಅಧ್ಯಕ್ಷ ಸುನೀತ್ ಶರ್ಮಾ ಇತ್ತೀಚೆಗೆ ಹೇಳಿಕೆ ನೀಡುವುದರ ಮೂಲಕ ಪ್ರಯಾಣಿಕರಿಗೆ ಭರವಸೆ ನೀಡಿದ್ದರು.
ಇನ್ನು, ಪಿಟಿಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, ರೈಲು ಸೇವೆಗಳನ್ನು ಮೊಟಕುಗೊಳಿಸುವ ಅಥವಾ ನಿಲ್ಲಿಸುವ ಯಾವುದೇ ಯೋಜನೆ ಇಲ್ಲ. ನಾವು ಅಗತ್ಯವಿರುವಷ್ಟು ಸೇವೆಗಳನ್ನು ನಡೆಸುತ್ತೇವೆ. ಪ್ರಯಾಣಿಕರು ಹೆಚ್ಚಾದರೇ ಹೆಚ್ಚುವರಿ ರೈಲು ಸೇವೆಗಳನ್ನು ಆರಂಭಿಸಲು ಕೂಡ ಇಲಖೆ ಕಾರ್ಯ ನಿರ್ವಹಿಸಲಿದೆ. ಕೋವಿಡ್ ಮಾರ್ಗ ಸೂಚಿಗಳನ್ನು ಬಳಸಿಕೊಂಡು ರೈಲು ಸೇವೆ ಮುಂದುವರಿಯುತ್ತದೆ. ಸೋಂಕಿನ ತೀವ್ರತೆಯ ಬಗ್ಗೆ ಗಮನದಲ್ಲಿಟ್ಟುಕೊಂಡು ಹೆಚ್ಚುವರಿ ರೈಲು ಸೇವೆಗಳ ಬಗ್ಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದಿದ್ದಾರೆ.
ಸದ್ಯ, ದಿನನಿತ್ಯ ಅಂದಾಜು 1402 ವಿಶೇಷ ರೈಲುಗಳು ಸೇವೆ ನಡೆಸುತ್ತಿವೆ ಎಂದು ಇತ್ತೀಚೆಗೆ ರೈಲ್ವೆ ಇಲಾಖೆ ತಿಳಿಸಿತ್ತು. ಅದಲ್ಲದೇ, ಒಟ್ಟು 5381 ಉಪನಗರ ರೈಲು ಸೇವೆಗಳು ಮತ್ತು 830 ಪ್ಯಾಸೆಂಜರ್ ರೈಲು ಸೇವೆಗಳು ಸಹ ಕಾರ್ಯನಿರ್ವಹಿಸುತ್ತಿವೆ. ಇದಲ್ಲದೆ, 28 ವಿಶೇಷ ರೈಲುಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದೆ.
ಏಪ್ರಿಲ್ ಹಾಗೂ ಮೇ ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾದರೇ, ಹೆಚ್ಚುವರಿ ರೈಲುಗಳ ಸೇವೆಗಳನ್ನು ಕೂಡ ನಿಯೋಜಿಸಲಾಗುತ್ತದೆ. ಗೋರಖ್ ಪುರ, ಪಾಟ್ನಾ, ದರ್ಬಂಗಾ, ವಾರಣಾಸಿ, ಗುವಾಹಟಿ, ಬಾರೌನಿ, ಪ್ರಯಾಗರಾಜ್, ಬೊಕಾರೊ, ರಾಂಚಿ ಮತ್ತು ಲಕ್ನೋ ಮುಂತಾದ ಸ್ಥಳಗಳಿಗೆ ಹೆಚ್ಚುವರಿ ರೈಲುಗಳ ಬೇಡಿಕೆಯಿದೆ ಎಂದು ಇಲಾಖೆ ತಿಳಿಸಿತ್ತು.
ಓದಿ : ಜಲಿಯನ್ ವಾಲಾ ಬಾಗ್ ಹತ್ಯಾಕಾಂಡಕ್ಕೆ 102 ವರ್ಷ…ಬೈಸಾಕಿ ಯುಗಾದಿ ದಿನ ಸಂಭವಿಸಿದ್ದು ಮಾರಣಹೋಮ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.