ಅಡುಗೆ ಉಪ್ಪಿನಲ್ಲಿದೆ ಸೂಕ್ಷ್ಮ ಪ್ಲಾಸ್ಟಿಕ್: ಮೂರು ಸಂಸ್ಥೆಗಳ ಅಧ್ಯಯನದಿಂದ ದೃಢ
Team Udayavani, Aug 4, 2021, 11:00 PM IST
ಅಹ್ಮದಾಬಾದ್: ಬೇಳೆ-ತರಕಾರಿಗಳನ್ನು ಬೇಯಿಸುವ ಸಂದರ್ಭದಲ್ಲಿ ಅಡುಗೆ ಮನೆಯಲ್ಲಿ ಉಪ್ಪು ಬಳಕೆ ಮಾಡುತ್ತಾರೆ. ಈ ಸಂದರ್ಭದಲ್ಲಿ ನಮಗೆ ಅರಿವಾಗದಂತೆ ಅತ್ಯಂತ ಸಣ್ಣ ಸೂಕ್ಷ್ಮ ಪ್ರಮಾಣದ ಪ್ಲಾಸ್ಟಿಕ್ ಅಂಶಗಳೂ ದೇಹದೊಳಕ್ಕೆ ಸೇರುತ್ತವೆ ಎಂಬ ವಿಚಾರ ಬಹಿರಂಗವಾಗಿದೆ. ಗೋವಾದ ನ್ಯಾಷನಲ್ ಸೆಂಟರ್ ಫಾರ್ ಪೋಲಾರ್ ಆ್ಯಂಡ್ ಓಶನ್ ರಿಸರ್ಚ್, ತಮಿಳುನಾಡಿನ ಮೂರು ವಿವಿಗಳು ಗುಜರಾತ್ ಮತ್ತು ತಮಿಳುನಾಡು ಮತ್ತು ಗುಜರಾತ್‌ಗಳಲ್ಲಿ ಮನೆಗಳಲ್ಲಿ ಅಡುಗೆಗಾಗಿ ಬಳಕೆ ಮಾಡುವ ಉಪ್ಪಿನ ಮೇಲೆ ನಡೆಸಲಾಗಿರುವ ಅಧ್ಯಯನದಲ್ಲಿ ಈ ಅಂಶ ದೃಢಪಟ್ಟಿದೆ.
ಅಲ್ಲಿ ಕಂಡುಬಂದಿರುವ ಉಪ್ಪಿನಲ್ಲಿ ಪಾಲಿಥೈಲೀನ್, ಪಾಲಿಯೆಸ್ಟರ್ ಮತ್ತು ಪಾಲಿವಿನಿ ಕ್ಲೋರೈಡ್ ಅಂಶಗಳಿವೆ. ಶೇ.74.3ರಷ್ಟು ಮೈಕ್ರೋಪ್ಲಾಸ್ಟಿಕ್ ಇರುವ ಬಗ್ಗೆ ತಿಳಿದು ಬಂದಿದೆ ಎಂದು ತಮಿಳುನಾಡಿನ ಪೆರಿಯಾರ್ ವಿವಿಯ ಸಹಾಯಕ ಪ್ರಾಧ್ಯಾಪಕ ಎ.ವಿದ್ಯಾಶಂಕರ್ ತಿಳಿಸಿದ್ದಾರೆ.
ಗುಜರಾತ್‌ನಲ್ಲಿ ಬಳಕೆಯಾಗುವ ಉಪ್ಪಿನ ಪ್ರತಿ 200 ಗ್ರಾಮ್‌ನ 1 ಮಾದರಿಯಲ್ಲಿ 46-115 ಪಾರ್ಟಿಕಲ್ಸ್ ಇರುತ್ತವೆ. ತಮಿಳುನಾಡಿನ ಉಪ್ಪಿನ ಮಾದರಿಯಲ್ಲಿ ಕೂಡ 23-101 ಪಾರ್ಟಿಕಲ್‌ಗಳಷ್ಟು ಪ್ಲಾಸ್ಟಿಕ್ ಇರುತ್ತದೆ ಎಂದು ಅಧ್ಯಯನದಲ್ಲಿ ಕಂಡುಕೊಳ್ಳಲಾಗಿದೆ.
ಉಪ್ಪಿನಲ್ಲಿರುವ ಅತ್ಯಂತ ಸೂಕ್ಷ್ಮಪ್ರಮಾಣದ ಪ್ಲಾಸ್ಲಿಕ್ 100-200 ಮೈಕ್ರೋಮೀಟರ್ ಅಳತೆ ಹೊಂದಿರುತ್ತದೆ. ಅವುಗಳು ಒಂದು ಬಾರಿ, ಸಾಮಾನ್ಯವಾಗಿ ಬಳಕೆ ಮಾಡುವ ಪ್ಲಾಸ್ಟಿಕ್‌ಗಿಂತ ಭಿನ್ನವಾಗಿರುತ್ತದೆ. ಜತೆಗೆ ಅವುಗಳನ್ನು ವಸ್ತುಗಳನ್ನು ಪ್ಯಾಕ್ ಮಾಡುವ, ಕಟ್ಲೆàರಿ, ರಸ್ತೆಗೆ ಬಳಕೆ ಮಾಡುವ ಪೈಂಟ್, ಮೀನುಗಾರಿಕೆಗೆ ಬಳಕೆ ಮಾಡುವ ಬಲೆ, ಸೌಂದರ್ಯವರ್ಧಕಗಳಲ್ಲಿ ಬಳಕೆ ಮಾಡುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf; ಅಮಾನತುಲ್ಲಾ ಖಾನ್ ಗೆ ಜಾಮೀನು: ಮೋದಿಯ ಸುಳ್ಳು ಪ್ರಕರಣ ಬಹಿರಂಗ ಎಂದ ಆಪ್
Kochi airport; ಶಬರಿಮಲೆ ಭಕ್ತರಿಗೆ ಅನುಕೂಲವಾಗುವಂತೆ ವಿಶೇಷ ವ್ಯವಸ್ಥೆಗಳು
Maharashtra Election; ಫಡ್ನವಿಸ್ ಪತ್ನಿಯ ವಿರುದ್ಧ ಕನ್ಹಯ್ಯಾ ಕುಮಾರ್ ಹೇಳಿಕೆ
Modiji ಸಂವಿಧಾನವನ್ನು ಓದಲೇ ಇಲ್ಲ, ಹಾಗಾಗಿ…: ರಾಹುಲ್ ಗಾಂಧಿ
Kasturi Shankar: ನಟಿ ಕಸ್ತೂರಿ ಶಂಕರ್ ಜಾಮೀನು ಅರ್ಜಿ ವಜಾ; ಶೀಘ್ರ ಬಂಧನ ಸಾಧ್ಯತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.