ಪಿಎಂ ಆವಾಸ್ ಯೋಜನೆ ಆಮೆಗತಿ : ವರ್ಷದಲ್ಲಿ 21 ಮನೆ ಮಾತ್ರ ನಿರ್ಮಾಣ
Team Udayavani, Mar 9, 2020, 7:05 AM IST
ಬೆಂಗಳೂರು: ರಾಜ್ಯದಲ್ಲಿ ವಸತಿ ರಹಿತರಿಗೆ ಸೂರು ಒದಗಣೆ ಆಮೆಗತಿಯಲ್ಲಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 2019-20ನೇ ಸಾಲಿನಲ್ಲಿ 41 ಸಾವಿರ ಫಲಾನುಭವಿಗಳು ಆಯ್ಕೆಯಾಗಿದ್ದರೂ ವರ್ಷದಲ್ಲಿ ಪೂರ್ಣ ನಿರ್ಮಾಣಗೊಂಡ ಮನೆಗಳ ಸಂಖ್ಯೆ ಕೇವಲ 21.
ರಾಜ್ಯ ಸರಕಾರದ ಈ ಕಾರ್ಯ ವೈಖರಿಗೆ ಕೇಂದ್ರ ಸರಕಾರ ಅಸಮಾಧಾನ ಗೊಂಡಿದ್ದು, ಮುಂದಿನ ವರ್ಷ ಅನು ದಾನ ನೀಡದಿರುವ ಎಚ್ಚರಿಕೆ ನೀಡಿದೆ ಎಂದು ತಿಳಿದು ಬಂದಿದೆ.
ರಾಜ್ಯದಲ್ಲಿ 23.21 ಲಕ್ಷ ವಸತಿ ರಹಿತರಿದ್ದು , ಇದರಲ್ಲಿ 16.59 ಲಕ್ಷ ಮನೆ ರಹಿತರು ಮತ್ತು 6.61 ಲಕ್ಷ ನಿವೇಶನ ರಹಿತರು ಎಂದು ಸಮೀಕ್ಷೆಯಲ್ಲಿ ಪತ್ತೆಹಚ್ಚಲಾಗಿದೆ.
ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ರಾಜ್ಯದಲ್ಲಿ 2016-17ರಿಂದ 2019-20ರ ವರೆಗೆ 1,86,879 ಫಲಾನು ಭವಿ ಗಳು ಆಯ್ಕೆಯಾಗಿದ್ದರು. ಆದರೆ 61,387 ಮನೆ ನಿರ್ಮಾಣ ಇನ್ನೂ ಆರಂಭವಾಗಿಲ್ಲ. 2019-20ನೇ ಸಾಲಿ ನಲ್ಲಿ 41,350 ಮಂದಿ ಆಯ್ಕೆ ಯಾಗಿದ್ದರೆ ನಿರ್ಮಾಣ ಪೂರ್ಣ ಗೊಂಡಿರುವ ಮನೆ ಕೇವಲ 21. ಇನ್ನೂ 39,697 ಮನೆ ನಿರ್ಮಾಣ ಆರಂಭ ವಾಗಿಲ್ಲ. ಈ ಕುರಿತು 2020 ಫೆ. 21ರಂದು ನಡೆದ ಸಶಕ್ತೀಕರಣ ಸಮಿತಿ ಸಭೆಯಲ್ಲಿ ರಾಜ್ಯದ ಕಳಪೆ ಸಾಧನೆ ಬಗ್ಗೆ ಕೇಂದ್ರ ವಿಷಾದ ವ್ಯಕ್ತಪಡಿಸಿದೆ. ಬಾಕಿ ಮನೆಗಳನ್ನು 2020ರ ಜೂನ್ ಅಂತ್ಯದೊಳಗೆ ಪೂರ್ಣ ಗೊಳಿಸಲು ಸೂಚನೆ ನೀಡಿದೆ ಎಂದು ತಿಳಿದು ಬಂದಿದೆ.
ಅಧಿಕಾರಿಗಳಿಗೆ ತಾಕೀತು
ಫಲಾನುಭವಿಗಳ ಮಾಹಿತಿ ಸಂಗ್ರಹಿಸುವಲ್ಲಿ ಲೋಪ ಕಂಡುಬಂದಿದ್ದು, ಪೂರ್ಣ ಮಾಹಿತಿ ಸ್ಪಷ್ಟ ವಾಗಿ ನಮೂದಿಸಿ ತಾ.ಪಂ. ಅಂತರ್ಜಾಲದ ಲಾಗಿನ್ ಮೂಲಕ ಜಿ.ಪಂ.ಗೆ ಸಲ್ಲಿಸಲು ಸೂಚಿಸಲಾಗಿದೆ. ಒಬ್ಬ ಫಲಾನುಭವಿಗೆ ಒಮ್ಮೆ ಮಾತ್ರ ಪರಿಷ್ಕರಣೆ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಪರಿಷ್ಕೃತ ಫಲಾನುಭವಿ ಪಟ್ಟಿಯನ್ನು ಮಾ.15ರೊಳಗೆ ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಕಳುಹಿಸಲು ಸೂಚಿಸ ಲಾಗಿದೆ. ಮಾ.15ರೊಳಗೆ ಪರಿಷ್ಕರಣೆಗೊಂಡ ಅರ್ಜಿಗಳನ್ನು ಮಾತ್ರ ಕೇಂದ್ರದ ವೆಬ್‌ಸೈಟ್‌ನಲ್ಲಿ ಅಳವಡಿಸಲು ರಾಜ್ಯ ಸರಕಾರ ನಿರ್ಧರಿಸಿದೆ. ಫಲಾನುಭವಿಗಳ ಹೆಸರು ಕೈ ತಪ್ಪಿ ಸೌಕರ್ಯ ವಂಚಿತರಾದರೆ ತಾ.ಪಂ. ಅಧಿಕಾರಿಗಳನ್ನೇ ಹೊಣೆ ಮಾಡುವುದಾಗಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಕಳಪೆ ಸಾಧನೆಗೆ ಕಾರಣವೇನು?
ಫಲಾನುಭವಿಗಳು ಮನೆ ನಿರ್ಮಾಣ ಆರಂಭಿಸಿ 6 ತಿಂಗಳು ಕಳೆದರೂ ಸರಕಾರದಿಂದ ಕಂತು ರೂಪದ ಹಣ ಬಿಡುಗಡೆಯಾಗಿಲ್ಲ. ಬ್ಯಾಂಕ್ ಸಾಲ ಕೊಡಿಸುವ ಭರವಸೆ ನೀಡಿದ್ದರೂ ಸರಕಾರದಿಂದ ಹಣ ಬಿಡುಗಡೆ ಯಾಗುವ ವರೆಗೆ ಬಡ್ಡಿ ಬೀಳುತ್ತದೆ ಎನ್ನುವ ಕಾರಣಕ್ಕೆ ಫಲಾನುಭವಿಗಳು ಬ್ಯಾಂಕ್ ಸಾಲ ಪಡೆದು ಮನೆ ನಿರ್ಮಿಸಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manmohan Singh ವಿಚಾರದಲ್ಲಿ ಕಾಂಗ್ರೆಸ್ ಅಗ್ಗದ ರಾಜಕಾರಣ ಮಾಡುತ್ತಿದೆ: ಬಿಜೆಪಿ
ED ಅಧಿಕಾರಿ ಒಳಗೊಂಡ ಲಂಚ ಪ್ರಕರಣ; ಸಿಬಿಐನಿಂದ ಮಧ್ಯವರ್ತಿ ಬಂಧನ
Actor; ಖ್ಯಾತ ನಟಿ ಉರ್ಮಿಳಾ ಕೊಠಾರೆ ಅವರ ಕಾರು ಹರಿದು ಓರ್ವ ಸಾ*ವು
Arvind Kejriwal ವಾಗ್ದಾಳಿ: ತನಿಖೆಗೆ ಆದೇಶದ ಬಳಿಕ ಬಿಜೆಪಿ-ಕಾಂಗ್ರೆಸ್ ವಿರುದ್ಧ ಆಕ್ರೋಶ
Owaisi: ಮದ್ಯದಂಗಡಿ ತೆರೆಯಲು ಮಾತ್ರ ಹಣವಿದೆ: ಉತ್ತರಪ್ರದೇಶ ಸರ್ಕಾರದ ವಿರುದ್ಧ ಒವೈಸಿ ಆರೋಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.